ಶನಿವಾರ, ಮಾರ್ಚ್ 21, 2009

ನಾನು IT ನೀನೂ IT ಇದುವೇ ನಮ್ಮ ಬದುಕೂ

ಏನಾಗಿದೆ ನಮಗೆ ?
ಸರಿಯಾಗಿ ಉಟಾ ಇಲ್ಲ, ಸರಿಯಾದ ನಿದ್ದೆ ಇಲ್ಲ
ಕೆಲಸವೇ ಪ್ರಪಂಚ ಎಲ್ಲ...ಇದು ಜೀವನನ?
ಅಥವಾ ಬೇರೆ ಜೀವನ ಇದೇಯಾ?

ದಿನ ಬೆಳಿಗ್ಗೆ ಎದ್ದು.. ಬೆಡ್ ಕಾಫೀ ..
ಸೀದಾ ಬಾತ್ ರೂಮ್..ಸಿಕ್ಕ ಬಟ್ಟೆ.. ಲ್ಯಾಪ್ಟಾಪ್ ಬ್ಯಾಗು ..
ಪಿಕ್ ಅಪ್ ಪಾಯಿಂಟ್..ಆಫೀಸ್.. ಕ್ಯಾಂಟೀನ್
ಇಡ್ಲಿ - ಕಾಫೀ - ವಡ - ದೋಸೆ -
ಪೊಂಗಲೇ - ಖಾರಭಾಥ್.

ಮತ್ತದೆ ಯಾಹೂ, ಗೂಗಲ್.. ರೇಡಿಫ್ಫ್..
ಟೈಮ್ಸ್ ಆಫ್ ಇಂಡಿಯಾ....
ಎಲ್ಲದರ ಮಧ್ಯ ಮಧ್ಯ ಮೊಬೈಲ್ ಫೋನ್..ರಿಂಗಾಯನ
ಕೋಡಿಂಗ್.. ಟೆಸ್ಟಿಂಗ್.. ಕ್ವಾಲಿಟಿ ..
ಅವಾಗ ಅವಾಗ ಕಾಫೀ ಬ್ರೇಕ್..
ಸಹ ಕೆಲಸಗಾರರ ಜೊತೆ ಸ್ವಲ್ಪ ಹರಟೆ..
ಕೆಲಸಕಿಂತ ಜಾಸ್ತಿ ಮೀಟಿಂಗ್..

ಸಾಯಂಕಾಲ ಅದ್ರೆ ಸಾಕು ಕಾಂಫ್ಫೆರನ್ಚೆ ಕಾಲ್ ...
ಹೇಯ್ WHATS THE STATUS..!
ಅದು ಮುಗಿದ ಮೇಲೆ ಗಳೆಯ,, ಗೆಳತಿ..
ಗಂಡ ಹೆಂಡತಿ.. ಕಿವಿ ಕಚಾಟ....
ಎಲ್ಲಿ ಇದಿಯ.. ಯಾವಾಗ ಸಿಗೋಣ..
ಯಾವ hotel ಇತ್ಯಾದಿ...

ಮನೆಗೆ ಬಾ TV ನೋಡದು.. ಸ್ವಲ್ಪ ಉಟ..
ಮತ್ತೆ INTERNET.. MAIL
CHECK . S.M.S..
ವೀಕೆಂಡ್ ಸಿನಿಮ.. ಪಾರ್ಕ್.. ಅಥವಾ ಟ್ರಿಪ್...
ಇಸ್ಟೇನಾ ಜೀವನ!..

.ಕ್ರಿಯಾಶೀಲತೆ ಏನು ಇಲ್ಲಿ... !!!
ಎದ್ದೇಳಿ .. ಜೀವನ ಬರೇ ಇದಲ್ಲ.. !
ಬೇರೆ ಏನು ಅಂಥ ಹೇಳೋಕು ನಮಗೆ ಗೊತ್ತಿಲ್ಲ..
ನಾನು IT ನೀನೂ IT ಇದುವೇ ನಮ್ಮ ಬದುಕೂ ......

: ಪ್ರಭಂಜನ ಮುತ್ತಿಗಿ

1 ಕಾಮೆಂಟ್‌: