ಅಕ್ಷರಗಳು ಮರೆತು ಹೋದವು
ನೀ ಸುಳಿಯದೇ ನನ್ನ ಕಣ್ಣಲ್ಲಿ,
ಪದಪುಂಜಗಳು ಹೊಳೆಯದೆ ಹೋದವು
ನೀನಿರದೆ ನನ್ನ ಕನಸಲ್ಲಿ.
ಲೀಖನಿ ಬರೆಯದೇ ಹಾಳೆಯಲಿ ಹೊರಲಾಡಿತು
ನೀಬಾರದೆ ನನ್ನ ಮನಸಲ್ಲಿ
ಬರೆದ ಸಾಲುಗಳು ಅರ್ಥವಿಲ್ಲದೆ ಹೋದವು
ನೀನಿಲ್ಲದೆ ನನ್ನ ಹೃದಯದಲ್ಲಿ
ನಿನ್ನ ಹೊಗಳಿಕೆ ಇಲ್ಲದೆ ಸೊರಗಿ
ಕಾವ್ಯ ರಸವೇ ಹೋಯಿತು ಕವನದಲ್ಲಿ
ಬೆಳಕಾಗು ನೀ ಮನಕೆ, ಕವನದ ಕನ್ನೆ
ಬರಡಾಗದಿರಲಿ ಕವನಗಳು ಈ ಜನುಮದಲ್ಲಿ
:ಪ್ರಭಂಜನ ಮುತ್ತಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ