ಶನಿವಾರ, ಡಿಸೆಂಬರ್ 15, 2012

ಹಿಮದ ಮಳೆ

ಸುರಿಯುತಿದೆ ಹಿಮದ ಮಳೆ
ಹೆಪ್ಪು ಗಟ್ಟಿದ   ಹುಚ್ಚು ಹೊಳೆ
ಎಲ್ಲಿ ನೋಡಿದರು ಬೆಳುಪು ಚಂದಿರನ ನೆಲದಂತೆ
ಹತ್ತು ದಿಕ್ಕಲು ಹಾಲು ಹನಿ ಹನಿಯಾಗಿ  ಸುರಿದಂತೆ
ದೇವ ಲೋಕವೇ ಧರೆಗೆ ಇಳಿದಂತೆ

ಹಗಲಿಲ್ಲ ಇರುಲಿಲ್ಲ
ಸೂರ್ಯ ಕಾಣುವುದೇಇಲ್ಲ
ಎಲ್ಲಿ ನೋಡಿದರು ಮೌನವೇ ತುಂಬಿದಾ ಮನೆಯಂತೆ 
ಹತ್ತು ದಿಕ್ಕಲು ಬೆಟ್ಟ ನಿಂತಿವೆ ಮೂಕ ಪ್ರೆಕ್ಷಕರಂತೆ
ಸದ್ದಿಲ್ಲದಾ  ಲೋಕ ಧರೆಗೆ ಇಳಿದಂತೆ

ಗುಡುಗಿನ ಸುಳಿವಿಲ್ಲ
ಮಿಂಚು ಮೂಡುವುದಿಲ್ಲ
ಎಲ್ಲಿ ನೋಡಿದರು ತೇಲುತಿವೆ ಮೋಡಗಳು ಹತ್ತಿಯಂತೆ
ಹತ್ತು ದಿಕ್ಕಲು ಚಳಿಯು ತೋರಿ ಹಾರಿ ಬಂದಂತೆ
ಪ್ರೇಮ ಲೋಕವೆ ಧರೆಗೆ ಇಳಿದಂತೆ

ಭಾನುವಾರ, ಡಿಸೆಂಬರ್ 9, 2012

ಅಪ್ಪುಗೆ

ಹರಿವ ನದಿ ಅಂಚಲಿ
ಬೀಸೋ ತಂಗಾಳಿಯಲಿ
ನಿನ್ನ ಜೊತೆ ನೆಡೆವಾಸೆ
ಮಂಜು ಹಿಮ ತುಂಬಿದ
ತುದಿಯಲಿ ನಲಿದಾಡುತ
ನಿನ್ನ ಕಾಣಲು ನಾ ಕುಳಿತೆ
ಪಿಸು ಪಿಸು ಮಾತಿಗೆ
ಮೊಗದಲಿ ಗುಳಿ ಬಿಳುತ್ತೆ
ಅದ ನೋಡುಲು ನಾ ಬರುವೆ
ತಿರುಗಿ ನಗುವ ನೋಟಕೆ
ಹಾರುವ ಮುತ್ತೊಂದ ಕೊಟ್ಟೆ
ನಿನ್ನ ನಾಚಿಕೆಗೆ ಮರುಳಾದೆ
ತುಂಟ ತುಟಿ ಅಂಚಿಗೆ
ಜೀನ ಹನಿಯೊಂದಿದೆ
ಅದ ಸವಿಯಲು ನಾ ಸೋತೆ
ಬರಲು ನಿನ್ನ ಸನಿಹಕೆ
ಕೊಡುವೆ ಮೃದು ಅಪ್ಪುಗೆ
ಬಿಸಿ ಅನುಭವ ಹೇಳಲಾರೆ
ಇದು ಯಾಕೋ ಹೀಗೆ ಆಸೆ
ನೀನು ದೂರ ಹೋದ ಮೇಲೆ
ನಿನ್ನ ಬರುವಿಕೆಗೆ ನಾ ಕಾಯುವೆ

ಗುರುವಾರ, ಡಿಸೆಂಬರ್ 6, 2012

ಹೆಜ್ಜೆ ಇಡುತ

ಬಾರೆ ಬಾರೆ ಪ್ರೀತಿಯ ಚುಳುಮೆಯ
ತುಂಬಿದ ಹೃದಯವ ಸೇರುತ    [ ಪ ]
ತೋರೆ ನೀರೆ ನಿನ್ನಯ ಮೊಗವನು
ಆದರದಿಂದ ಬಾ ನಗು ನಗುತ  [ಅ ಪ ]
 
ಹಲವು ತಳಿಯ ಹೂ ಬಣ್ಣದ ತೋಟದ 
ಒಳಗೆ ನಡೆ ನೀ ಮೃದುವಾದ ಹೆಜ್ಜೆ ಇಡುತ  
ಮಕರಂದವನು ದುಂಬಿಯು ಹೀರಿದಂತೆ
ಬರುವೆ ನೀ ಇರುವಲ್ಲಿಗೆ ಕನಸು ಕಾಣುತ 

 ನೀಲಿ ಬಾನಿನಂತೆ ಬೆಳಕು ತುಂಬಿದ ಕೆರೆಯಲಿ
ಕುಳಿತಿರುವೆ ನಿನಗಾಗಿ ಸಂಜೆ  ಕಾಯುತ 
ಮುಳುಗೋ ಸೂರ್ಯನ ಬಿಂಬದ ನೆರಳಲಿ  
ಪ್ರತಿಬಿಂಬದವು ನಗುತಿದೆ ನಿನ್ನನ್ನೇ  ಹೋಲುತ

ಮಂಜು ಮಿಶ್ರಿತ ಸುಂದರ  ಮಳೆಯಲಿ
ಓದುವೆ ಏಕೆ  ಹಿಂದೆ ಮುಂದೆ ನೋಡುತ
ಬೀಸುವ ಗಾಳಿಗೆ  ಸೂನೆಯ ಮಳೆಯಲಿ
ಚಳಿಯನು ತೊಡೆಯಲು ಬಾ ಅಪ್ಪುತಾ

ಅನಿಸುತಿದೆ

ನೀ ಇಲ್ಲೇ ಇರುವೆ ಎಂದು
ನನಗೀಗ ಅನಿಸುತಿದೆ
ನಾ ಎಲ್ಲೇ ಹೋದರು ಇಂದು
ನಿನ್ನ ನೆರಳೇ ಕಾಣುತಿಹೆ
ತುಂತುರು ಮಳೆ ಬಿಸಿಲಿನಲಿ
ತುಂಟಾಟ ಆಡುತಿದೆ
ನಿನ್ನ ಪ್ರೀತಿಯ ಸಿಂಚನದಲ್ಲಿ
ಕನಸೊಂದು ಬೀಳುತಿದೆ
ಉಲ್ಲಾಸದ ಛಳಿಯ ತಂಗಾಳಿಯಲಿ
ನನ್ನ ಮನಸು ಹಾರಾದುತಿದೆ
ನಿನ್ನ ಒಲವನು ಇಲ್ಲಿಯೂ ಬಯಸುತಲಿ
ಹಾಡೊಂದನು ಗುನುಗುತಿಹೆ
ನಿನ್ನ ನೆನೆಯುತ ಗೀಚಿದ ಕವನವನು
ಓದುತ ಮಲಗಿರುವೆ
ಮಲಗಿದ ಮಂಚವು ನಲಿಯುತಲಿ
ನಿದಿರೆಯ ಓಡಿಸುತಲಿದೆ

ಅಂದದ ನಿನ್ನಯ ಮೊಗವು 
ಚಂದಿರನ ಹೋಲುತಿದೆ 
ಮಂದ ಬೆಳಕಲ್ಲಿ ಮುಂಚುವ ನೀ 
ಬಂದು ಬಳಕುತ್ತಾ ನನ್ನನು ಸೇರು 

ಶುಕ್ರವಾರ, ಸೆಪ್ಟೆಂಬರ್ 14, 2012

ನನ್ನವಳು

ಮೃದುವಾದ ಮೊಗದವಳು
ಮೊಗ್ಗಿನಂತೆ ಅರಳದವಳು
ಅರಳುವಳು ನನ್ನ ಮನಸಿನಲ್ಲಿ

ಬಿಸಿಲಿಗೂ ಹೆದರದವಳು
ಚಳಿಗೂ ಬೆದರದವಳು
ಬೆದರಿಸುವಳು ಪುಟ್ಟ ನೋಟದಲ್ಲಿ

ಹೂವಿನ ತೂಕದವಳು
ಗಾಳಿಗೆ ಹಾರದವಳು
ಹಾರುವಳು ನನ್ನ ಹೃದಯದಲ್ಲಿ

ಹೊಗಳಿಕೆಗೆ ಉಬ್ಬದವಳು
ತೆಗಳಿಕೆಗೆ ಕುಗ್ಗದವಳು
ಕುಗ್ಗುವಳು ನಾನಿಲ್ಲದೆ ಎದುರಿನಲ್ಲಿ

ಅಲ್ಲಿಯೂ ನಗದವಳು
ಎಲ್ಲಿಗೂ ಬರದವಳು
ಬರುವಳು ನಗುತ ಪ್ರೀತಿ ಚಲ್ಲಿ

ಯಲ್ಲಿಯೂ ಇರದವಳು
ಯಾರಿಗೂ ಸಿಗದವಳು
ಸಿಗುವಳು ನನಗೆ ಮಾತ್ರ ಕನಸಿನಲ್ಲಿ

ಶುಕ್ರವಾರ, ಸೆಪ್ಟೆಂಬರ್ 7, 2012

ಗೆಳೆತನ!

ಎಲ್ಲರಿಗೂ ಒಂದು ದಿನ ಬರುವುದು ಸುದಿನ
ಇವರು ಇಲ್ಲದಿದ್ದರೆ ಬಾರದೇ ಹೋಗಬಹುದು ಆದಿನ
 
ವಯಸಿನ ಹಂಗಿಲ್ಲ ಭಾವನೆಗೆ ಮಿತಿಯಿಲ್ಲ
ಹೇಳಬಹುದು ನಾ ಹೇಳಲು ಆಗದಿದ್ದನ್ನ
ಕನಸುಗಳ ಹೊತ್ತು ಹಗಲಿರಿಳು ಜೊತೆಗೂಡಿ
ಸಮಯ ಕಳೆಯುತಿದ್ದೆವು ಅದು ಎಷ್ಟು ಚನ್ನ
 
ಕಾಣದೆ ಇರುವ ಇದ್ರಿಯಕ್ಕೂ ನಿಲುಕದ
ಸ್ನೇಹಕ್ಕೆ ಎಲ್ಲಿಂದ ಹಾಕಲಿ ಪರಧಿಯನ್ನ
ಸನಿಹ ಬಂದು ಧನ್ಯವಾದ ಹೇಳಲು ಪದಗಳಿಲ್ಲ
ಇರಲಿ ವಿಶ್ವಾಸದ ಗೆಳೆತನ ಜೀವದಲ್ಲಿ ಅನುದಿನ
   
ಅರಿತು ಅರಿಯದೆ ಮಾಡಿದ ತಪ್ಪನ್ನು
ಕ್ಷಮಿಸುವ ದಿನವೆಂದು ಬಂದಿದೆ ಗೆಳೆಯರದಿನ ...
ಮನವು ಮರೆವೆನೆಂದರು ಬಿಡದು
ಹೃದಯದ ತುಂಬಾ ತುಂಬಿದೆ ಈ ಗೆಳೆತನ!..

ಶುಕ್ರವಾರ, ಆಗಸ್ಟ್ 31, 2012

ಕಂಡೆ ನಿನ್ನನ

ಮೋಡಗಳ ಅಂಚಿನಲ್ಲಿ ಕಂಡೆ ನಿನ್ನನ
ಹೇಗೆ ಹೇಳಲಿ ಅದನು ನಾ ಹಾಡಾಗಿ

ನಿನ್ನ ರೂಪಕ್ಕೆ ಮನಸಾಗಿ
ಸೋಕಿದೆ ಮಂಜು ಮೃದುವಾಗಿ
ದುಂಡು ಮೊಗದ ನೋಟಕ್ಕೆ
ನಿಂತಿವೆ ತರುಲತೆಗಳು ಬೆರಗಾಗಿ

ಹೊಳಪಿನ ಕೂದಲು ಹಾರುತಿವೆ
ಬೀಸುವ ತಂಗಾಳಿಗೆ ನವಿರಾಗಿ
ಚಿಕ್ಕ ಚೊಕ್ಕ ತುಟಿಗಳು ಮಿನುಗುತಿವೆ
ಅರಳಿದ ಕೆಂಗುಲಾಬಿ ಹೂವಾಗಿ

ಪಿಸುಮಾತಿನ ಆ ಮದುರಕ್ಕೆ
ಬಡಿಯುತಿದೆ ಹೃದಯ ಜೋರಾಗಿ
ನೀಳವಾದ ತೊಳ್ಬೇರೆಳುಗಳು
ಹೊಳೆಯುತಿವೆ ಕೋಮಲವಾಗಿ

ತುಳುಕುತಿರುವ ಆ ನಡಿಗೆಗೆ
ಬಳುಕುತಿದೆ ಸೊಂಟ ಸೊಗಸಾಗಿ
ತಿದ್ದಿ ತೀಡಿದ ಈ ಮೈ ಮಾಟಕ್ಕೆ
ನಾ ಬರೆದೆ ಕವಿತೆ ಕವಿಯಾಗಿ

ಗುರುವಾರ, ಆಗಸ್ಟ್ 9, 2012

ಸದ್ದು ಮಾಡದೇ ಬಂದನೆ

ಅಂಬೆಗಾಲಿದುತ ಬಂದ ನವನೀತ ಚೋರ.... ಕೃಷ್ಣ!
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸದ್ದು ಮಾಡದೇ ಬಂದನೆ .

ಗೊಲ್ಲ ಬಾಲಕರೋದಗೂಡಿ ಓಡೋಡುತ ಬಂದ
ಗೋವುಗಳ ಕಾಯಲು ಕೊಳಲು ಪಿಡಿದು ಬಂದನೆ .

ಹಾಲು ಮೊಸರು ತುಪ್ಪ ಹಸಿ ಬೆಣ್ಣೆ ಕದಿಯಲು ಬಂದ
ಚುಡಾಯಿಸಿ ಗೋಪಿಯರ ಕೈ ಹಿಡಿದೆಳೆಯಲು ಬಂದನೆ

ಹಿಂಡು ಕಟ್ಟಿಕೊಂಡು ಚಂಡು ಆಟ ಆಡಲು ಬಂದ
ಚಂಡು ನೆಪದಿ ಕಾಳಿಂಗನ ಸೊಕ್ಕು ಮುರಿಯಲು ಬಂದನೆ
ಹಿಡಿ ಮಣ್ಣು ತಿಂದು ಬ್ರಹ್ಮಾಂಡವ ತೋರಲು ಬಂದ
ಎದೆ ಹಾಲು ನೆಪದಿ ಪೂತನಿಯ ಪ್ರಾಣ ಹೀರಲು ಬಂದನೆ

ವೇಣುನಾದವ ಮಾಡಿ ಮೋಹ ಪಸರಿಸಲು ಬಂದ
ಜಲಕ್ರೀಡೆಯಲಿ ಹೆಂಗಳೆಯರ ಸೀರೆ ಕದಿಯಲು ಬಂದನೆ

ಗೋವರ್ಧನ ಗಿರಿಯ ಎತ್ತಿ ಗೋವುಗಳ ರಕ್ಷಣೆಗೆ ಬಂದ
ತೊಡೆಯ ತಟ್ಟಿದ ಮಾವ ಕಂಸನ ಕೊಲ್ಲಲ್ಲು ಬಂದನೆ

ಭಾನುವಾರ, ಜುಲೈ 29, 2012

ನನ್ನ ಹೆಸರಿತ್ತು

ನೀ ಎಸೆದ ಕಲ್ಲಿನಲ್ಲಿ ನನ್ನ ಹೆಸರಿತ್ತು,
 ಹುಡುಕೋ ಹೋದೆ ನದಿಯಲ್ಲಿ
 ಜೀವವೇ ಕಳೆದುಕೊಂಡಂತೆ

ಎದ್ದ ಅಲೆಗಳ ನಡುವೆ
ಹಾರಿ ಮುಳುಗಿದೆ ಆಳದಲಿ
ಬಿಟ್ಟು ಕಣ್ಣು ನೀರಿನಲ್ಲಿ ಮೀನಿನಂತೆ

ಕೆಂಪು ಕಲ್ಲು ಕಪ್ಪು ಕಲ್ಲು
ಮಧ್ಯ ಹಳದಿ ಸ್ಪಟಿಕದ ಕಲ್ಲು
ನಿಂತಿತ್ತು ಆ ಕಲ್ಲು ಹೊಳೆವ ವಜ್ರದಂತೆ

ಬಾಚಿ ಹಿಡಿದೆನು ಅದನ್ನು
ಕೈಜಾರಿ ಹೋಗದಂತೆ
ನೀರಿನಿಂದೆದ್ದೆ ಹೊಸ ಉಸಿರು ಬಂದಂತೆ

ತಬ್ಬಿಕೊಂದೆನು ಎದೆಗೆ
ಕಣ್ಣಿಗೆ ಹಿಡಿದು ನೋಡಿದೆನು ಕೆತ್ತಿದ್ದೆ
ನಿನ್ನ ಹೆಸರನ್ನ ನನ್ನ ಹೆಸರಿನ ಜೊತೆಗೆ
 
ನಿನ್ನ ಮನಸಿನ ಆಸೆಗಳು
ಹೀಗೆ ಅರಳುತಿರಲಿ ನನ್ನಲ್ಲಿ
ನಿನ್ನ ಪ್ರೀತಿಸುವೆ ಹಗಲಿರುಳು ಉಸಿರಿನಂತೆ

ಮಂಗಳವಾರ, ಜೂನ್ 19, 2012

ಭರಚುಕ್ಕಿ

ಅಂಬರದಿಂದ ಗಿರಿಯ ತುದಿಯಿಂದ
ಸರಸರದಿ ಧರೆಗೆ ಇಳಿದೆ
ಭರಚುಕ್ಕಿಯಲಿ ನಲಿವೆ
ಕಾವೇರಿ .ನೀ ಜಾರಿದೆ

ತಂಗಾಳಿ ಸಿಂಚನ ತರುವೆ
ಮನಸಿಗೆ ಮುದವ ಕೊಡುವೆ
ಹಸಿರಿಗೆ  ಶ್ವೇತಸೀರೆ  ಉಡಿಸಿ 
ಮನಸಿನ ದುಗುಡ ಕಳೆವೆ 

ಗೆಜ್ಜೆಕಟ್ಟಿ ಕುಣಿಯುತ ಬರುವೆ
ಕಣ್ಣು ಮಿಟುಕದಾ ನೋಟ ಕೊಡುವೆ
ಮುತ್ತಿನರಾಸಿ ಚಲ್ಲಿದಂತೆ ಚದುರಿ 
ಹಾರುವ ಮಾಯಾಂಗನೆ ನೀ ಚಲುವೆ  

ಧರೆಗೆ ತಿಳೀ ಬಿಳಿ ಹಾಲನ್ನು ಎರೆವೆ
ನಿನ್ನ ವೈಯಾರಕೆ ಸಾಟಿ ಇದೆಯೇ
ಸುರಲೋಕದ ಸೊಗಸು ಸುರಿಸಿ
ಭೋರ್ಗರೆಯುತ ಕೈಬೀಸಿ ಕರೆವೆ

-ಪ್ರಭಂಜನ. 

ಬುಧವಾರ, ಮೇ 30, 2012

ಮುಗಿಲಾಚೆಗೆ

ಹಸಿರೆ ಹಸಿರೆ ನನ್ನ ಕೈಬೀಸಿ 
ಕರೆದು ಬಿಡು
ಉಸಿರೇ ಉಸಿರೇ ನೀ ನಗುತ 
ಜೊತೆ ನಲಿದಾಡು

ಮುಗಿಲು ಮುಟ್ಟಿದ ಮರಗಿಡದ 
ಸೊಬಗ ನೋಡದೆ ಇರಲಾರೆ
ಕೈ ಬೀಸಿ ಕರೆವ ಜಲಪಾತದಲ್ಲಿ 
ಇಳಿದು ಆಡದೆ ಬರಲಾರೆ

ಆ ಚಹಾ ತೋಟದ ಏರಿಳಿತದಲ್ಲೂ 
ನಿನ್ನನ್ನೇ ನಾ ಕಾಣುವೆ
ಝುಳು ಝುಳು ಹರಿವ ತೊರೆ ಅಂಚಿನಲ್ಲಿ 
ಅಪ್ಪಿ ಮುದ್ದಾಡುವ ಬಾರೆ

ಹಗಲೆಲ್ಲ ಬಿಸಿಲ ಹಣ್ಣನ್ನೇ ತಿಂದು 
ಮೈಯಲ್ಲ ನಾ ಬೆವೆತೆ
ಇರುಳಲ್ಲಿ ಮುಳುಗೋ ರವಿಯನ್ನ ಕಾಣಲು 
ಬೆಟ್ಟದಂಚಿನಲಿ ನಾ ಕುಳಿತೆ

ನಾಮುಂದು ತಾಮುಂದು ಚಲಿಸುತ 
ಮೋಡಗಳು ತಾಕಿದವು ಎನ್ನೆದೆಗೆ 
ಮಂಜು ಮುಸುಕಿದ ತಂಗಾಳಿಯಲ್ಲಿ 
ಹೃದಯ ಕೊರಗಿತು ನೀನಿಲ್ಲದೆ

ಸವಿಗನಸಿನಲ್ಲಿ  ಕೈ ಹಿಡಿದು ನಡೆವೆ 
ಮುಂಜಾವುನ ಇನಿದನಿಯಗೆ
ಮೈ ಮರೆತು ಗರಿಕೆದರಿದ ನವಿಲಿನ 
ನಾಟ್ಯಕೆ ನಿನ್ನದೇ ಇದೆ ಹೋಲಿಕೆ

ಕಾಡೊಳಗೆ ಹುಡುಕುತ ನಿನ್ನ ಹೆಸರನ್ನ 
ಕೂಗಿದೆ ಮುಖಮಾಡಿ ಮುಗಿಲಾಚೆಗೆ
ಬಳಿ ಬಂದು ಪ್ರೀತಿಸಿ ಮುತ್ತಿಕ್ಕು ಒಮ್ಮೆ 
ಅದೊಂದೇ ಧನ್ಯತೆಗೆ  ನಾ ಕಾಯುವೆ

ಬುಧವಾರ, ಮಾರ್ಚ್ 7, 2012

ಬಹುದೂರ

ದೂರ ಬಹುದೂರ ಹೋಗಿರುವೆ ಎಲ್ಲೇ
ರಹದಾರಿ ಕಾಣದೆ ತಿರುಗುತಿರುವೆ ನಾ ಇಲ್ಲಿ

ಹೇಗಿರುವೆ ಎಲ್ಲಿರುವೆ ನನ್ನ ನಲ್ಲೆ
ಕಳಿಸುವೆ ಚಂದಿರನ ನೀ ಇರುವಲ್ಲೇ
ಬೆಳದಿಂಗಳ ಹೀರಿ ಒಂದು ನಗು ಚೆಲ್ಲೇ
ತಲುಪಿಸುವ ಅಂಬುಜ ನಾ ಇರುವಲ್ಲೇ

ಮನಸಿನ ಭಾರ ಕಾಣಿಸುವುದು ಎದೆಯಲ್ಲಿ
ಹಸಿ ಕನಸು ಸೊರಗುವವು ನೀನಿಲ್ಲದಿಲ್ಲಿ
ಬಹಳದಿನ ಕೊರಗುತ ನೀ ನಿಲ್ಲದಿರು ಅಲ್ಲಿ
ಹತ್ತು ಉಗಿಬಂಡೆಯನ್ನು ನನ್ನ ನೆನಪಲ್ಲಿ

ಬೀಸಬಹುದು ಬಿಸಿಗಾಳಿ ಹಗಲಿನಲ್ಲಿ
ತಂಗಾಳಿಯಾಗಿ ನಾ ಬರುವೆ ಇರುಳಲ್ಲಿ
ಮೈ ಮರೆಯೋಣ ಚಂದಿರನ ಬೆಳಕಲ್ಲಿ
ಎಲ್ಲರ ಜೊತೆ ನಲಿಯೋಣ ಈ ಜೀವನದಲ್ಲಿ

ಶನಿವಾರ, ಜನವರಿ 14, 2012

ಕಳಿಬೇಡಿ

ಕಳಿಬೇಡಿ ಕಳಿಬೇಡಿ ಟೈಮ್ಅನ್ನು ಕಳಿಬೇದ್ರಿ
ಬರೀ ಕೆಲಸ ಮಾಡುತ ಹಾಳಾಗಿ ಹೋಗಬೇದ್ರಿ :)

ಜೆಂಸ್ ಪ್ಯಾಂಟ್, ಟೈಟ್ ಟಾಪ್ , ಬ್ಲಾಕ್ ಕೂಲಿಂಗ್ ಗ್ಲಸ್ಸ್
ಕ್ಯಾಟ್ ವಾಕ್ , ಶಾರ್ಟ್ ಸ್ಕರ್ಟ್, ಕೈಯಲ್ಲಿ ಚಾಕಲೇಟ್ !
ಕೊಲ್ಲಬೇದ್ರಿ ಕೊಲ್ಲಬೇದ್ರಿ ಹೇಗೆ ಹುಡುಗರ ಕೊಲ್ಲಬೇದ್ರಿ
ಹುಡುಗರೇ ಹುಡುಗಿ ಹಿಂದೆ ಬಿದ್ದು ಹಾಳಾಗಿ ಹೋಗಬೇದ್ರಿ !
ಏನ್ ಮಚ್ಚ ಸರಿ ನ.. ಎಷ್ಟು ಆಯಿತು ಮಗ ಕೌಂಟ್
೧,೨,೩,೪........ಕಳಿಬೇಡಿ... :)
ಗೂಗಲೇ ಚಾಟ್, ಫೇಸ್ ಬುಕ್, ಡೇ ಫುಲ್ ಆನ್ಲೈನ್ ಲೈನು
ಪಿಕ್ ಅಪ್ ಪಾಯಿಂತು ಲಾಂಗ್ ಡ್ರೈವ್, ಮತ್ತೆ ನೈಟ್ ಡ್ರಾಪ್ !
ಹೋಗಬೇದ್ರಿ ಹೋಗಬೇದ್ರಿ ಹೇಗೆ ಹೋಗಬೇದ್ರಿ
ಹುಡುಗರ ಜೊತೆ ಸುತ್ತಾಡಿ ನೀವು ಹಾಳಾಗಬೇದ್ರಿ :ದ
ಹೋಟೆಲ್ ಬ್ರೇಕ್ ಫಾಸ್ಟ್, ಆಫೀಸ್ ಕ್ಯಾಬ್, ಟ್ರಾಫಿಕ್ ನಲ್ಲೆ ಸ್ಲೀಪಿಂಗ್
ಸ್ವಲ್ಪ ಕೋಡಿಂಗ್, ಫುಲ್ ಮೀಟಿಂಗ್, ಆಫೀಸ್ ನಲ್ಲೆ ಜಾಗಿಂಗ್
ಕಳಿಬೇಡಿ ಕಳಿಬೇಡಿ ಟೈಮ್ಅನ್ನು ಕಳಿಬೇದ್ರಿ
ಬರೀ ಕೆಲಸ ಮಾಡುತ ಹಾಳಾಗಿ ಹೋಗಬೇದ್ರಿ :)

ಹೂಸಬೇಕು


ಹೂಸಬೇಕು ವಾಸನೆ ಬರದಂತಾ
ಸುವಾಸನೆಯ ಹೂಸು ಹೂಸಬೀಕು :)

ಹೂಸಿದರೆ ಹಾಕಿರೋ ಬಟ್ಟೆ ಅಲ್ಲಾಡದಂತಿರಬೇಕು
ಹೂಸಿದರೆ ಶಬ್ದ ಕಿವಿಗೊಟ್ಟು ಆಲಿಸುವಂತಿರಬೇಕು
ಹೂಸಿದರೆ ಅಕ್ಕ ಪಕ್ಕದವರು ನಗುವಂತಿರಬೇಕು
ಹೂಸಿನಿಂದ ಮನಸು ಉಲ್ಲಾಸದಿಂದ ನವಿರಾಗಬೇಕು 1

ಹೂಸಿದರೆ ನೆಲವು ಭುಕಂಪನದಂತೆ ಅದುರಬೇಕು
ಹೂಸಿದರೆ ಧಂ ಪಟಾಕಿ ಶಬ್ದ ಕೆಳದಂತಿರಬೇಕು
ಹೂಸಿದರೆ ರಣ ಕಹಳೆ ಊದಿದಂತೆ ಇರಬೇಕು
ಹೂಸಿದರೆ ಯುದ್ದ ಭೂಮಿ ನೆನಪಾಗಬೇಕು 2

ಹೂಸಿದರೆ ನಿಶಬ್ದವಾಗಿ ಗೊತ್ತಾಗದಂತೆ ಇರಬೇಕು
ಹೂಸಿದರೆ ಬಿಟ್ಟು ಬಿಟ್ಟು ಸೈಲೆಂಸೆರ್ ಇಲ್ಲದ ಗಾಡಿಯಂತಿರಬೇಕು
ಹೂಸಿದರೆ ರೈಲು ಹಾರ್ನಂತೆ ಜೋರಾಗಿ ಮೊಳಗಬೇಕು
ಹೂಸಿದರೆ ಫಟಾರ್ ಎಂದು ಸಿಡಿಲು ನಾಚುವಂತೆಇರಬೇಕು 3

ಹೂಸಿದರೆ ಪುರ ಎಂದು ಗುಬ್ಬಚಿ ಓಡಿ ಬರಬೇಕು
ಹೂಸಿದರೆ ಧರ್ ಭರ್ ಕಾಗೆ ಹಾರಿ ಹೋಗಬೇಕು
ಹೂಸಿದರೆ ಚಕ್ ಪಕ್ ನವಿಲು ಹೆಜ್ಜೆ ಹಾಕಿ ಕುಣಿಬೇಕು
ಹೂಸಿದರೆ ಜನ ಮೆಚ್ಚಿ ಸೂಪರ್ ಸೂಪರ್ ಅನ್ನಬೇಕು :):)
ಹೂಸಿದರೆ ಮತ್ತೊಮ್ಮೆ ಹೂಸದಂತಿರಬೇಕು
ಹೂಸಿನಿಂದ ಜನ ಬೇಸರಿಕೊಳದಂತೆ ಇರಬೇಕು
ಹೂಸಿದರೆ ರೋಗಗಳು ದೇಹದಿಂದ ಹೊರಹೋಗಬೇಕು
ಅದೆಲ್ಲಕಿಂತ ಮೊದಲು ಹೂಸಲು ದೇಹದಲಿ ತಾಕತ್ತು ಇರಬೇಕು !

ಮಂಗಳವಾರ, ಜನವರಿ 10, 2012

ಬಾ ನೀ ಜೊತೆಗೆ

ನಿನ್ನನೆ ಪ್ರೀತಿಸುವೆ ..ನಿನಗಾಗಿ ಬದುಕುವೆ
ಅದಕಾಗಿ ಓಡಿ ಓಡಿ ಬರುವೆ ನಿನ್ನ ಬಳಿಗೆ .... ಪ

ಚಂದಿರನ ಮೊಗದಲ್ಲಿ ಆ ತುಂಬು ಕಂಗಳಲಿ
ಮನವು ಸೆಳೆದಿದೆ ಕಾಣದ ಕಾಂತಿ ಸುಳಿಗೆ

ಚಂಚಲೆ ನಿನ್ನ ಮೃದುವಾದ ಹೆಜ್ಜೆಗಳಿಗೆ
ಸುರಿಸುವೆ ಏಳು ಸುತ್ತಿನ ದುಂಡು ಮಲ್ಲಿಗೆ

ಹಸಿರ ಹೂಬನದಲ್ಲಿ ನಗುವ ಗುಲಾಬಿಯ ಕರೆದು
ಸುಂಕ ಕೊಟ್ಟು ಸೇರುಸುವೆ ನಿನ್ನ ಮುಡಿಗೆ

ಇಷ್ಟು ವರುಷದ ಪ್ರೀತಿ ಎಷ್ಟು ಹೇಳಲಿ ನಿನಗೆ
ಕಷ್ಟ ಪಟ್ಟು ದಿನವು ನಿನಗಾಗಿ ಕಾಯುತಿರುವೆ

ಪ್ರೀತಿಯ ಅರಮನೆಗೆ ಮೋಹ ತುಂಬಿದ ಎದೆಗೆ
ಬಾಣ ಹೊಡೆದಿದ್ದೇನೆ ಕಾದು ಕುಳಿತು
ತಂಪು ತಂಗಾಳಿಯಲಿ ಚಂದಿರನ ಬೆಳಕಲ್ಲಿ
ಕೈ ಹಿಡಿದು ನೆಡೆಯುವಾಸೆ ಬಾ ನೀ ಜೊತೆಗೆ

ಶುಕ್ರವಾರ, ಜನವರಿ 6, 2012

ನಿಸರ್ಗ

 ಚಿಕ್ಕ ಚಿಕ್ಕ ರೆಕ್ಕೆ ಬಂದು
ಪ್ಪುಕ್ಕ ಹೊಸತು ಬಿಚ್ಚಿ ಹಕ್ಕಿ ಹಾರಾದುತಿವೆ
ಅಕ್ಕರೆ ತುಂಬಿದ ಹಸಿರ ವನಕಿಂದು
ಕೊಕ್ಕರೆ ಪಕ್ಷಿಗಳು ಬಂದು ಸೇರುತಿವೆ
ಸಕ್ಕರೆ ಸವಿಯ ರುಚಿ ಹುಡುಕಿಕೊಂಡು
ಚಿಕ್ಕ ಚಿಕ್ಕ ಇರುವೆಗಳು ಹರಿದಾದುತಿವೆ
ಬೆಕ್ಕು ತೋಳ ಹುಲಿ ಚಿರತೆ ಸೇರಿಕೊಂಡು
ಒಕ್ಕೊರಲಿನಿಂದ ಕೂಗುತ ಹಾಡುತಿವೆ
ಅಕ್ಕ ಪಕ್ಕ ಕರೆ ತೊರೆ ತುಂಬಿ ಬಂದು
ಹೊಕ್ಕು ಹೊಳೆ ನೀರಾಗಿ ಹರಿಯುತಿದೆ
ಚೊಕ್ಕ ವಾದ ಈ ನಿಸರ್ಗ ಕಂಡು
ಅಕ್ಕ ನನ್ನ ಮೈ ಮನ ನವಿರೆಳುತಿದೆ

ವರುಷದ ಹಿಂದೆ

ಇಂದಿಗೆ ವರುಷದ ಹಿಂದೆ ... ಕಲ್ಯಾಣ ಮಂಟಪದಿ
ಬೀಸು ತಂಗಾಳಿ ನಮ್ಹೆಸರು ಹೊತ್ತು ತಂತು 

ಸಡಗರದಿ ಓಡಾಡಿ ಹರುಷದಿ ನಲಿದಾಡಿ
ಅರಿಶಿನ ಕುಂಕುಮ ಬಳೆ  ಜ್ಹಲ್ ಎಂದಿತು ..
 
ತಳಿರು ತೋರಣ ಹೂ ತುಂಬಿದ ಹಂದರ
ಕೆಳಗೆ ಓಲಗ  ವಾದ್ಯಗಳು  ನುಡಿಯುತಿತ್ತು 

ಪೀಪಿ ಕೇಕೆ  ಸಂಭ್ರಮದಿ ನಲಿಯುವ ಚಿಣ್ಣರ
ಉಲ್ಲಾಸದ ಕಲರವ ಮುಗಿಲು  ಮುಟ್ಟುತಿತ್ತು

ಕಾಶಿ ಯಾತ್ರೆಗೆ ತೆರಳಿ ಕುಣಿಯುತ ಒಳಬಂದು
ತಾಳಿಕಟ್ಟುಕ್ಕೆ   ಸರಿಯಾಗಿ  ಹನ್ನೊಂದಾಯಿತು  

ಲಾಜ ಹೋಮ ನಂತರ  ಮಗುವ ತೊಟ್ಟಿಲಲ್ಲಿ ಹಾಕಿ
ಹೆಸರಿಟ್ಟು  ಮನೆ  ತುಂಬಿಸಿ  ಕೊಂಡಿದ್ದಾಯಿತು  

ಕಾಣದ ನಕ್ಷತ್ರ ತೋರುಸಿ ಹೊಸ ಹೆಸರನ್ನೇ  ಇಟ್ಟು
ಸಂಜೆ ಗೋಧೂಳಿಯಲಿ ಸೇರು ವದಸಿದ್ದಾಯಿತು
  
ವಯಾರದ ಬಟ್ಟೆ ಧರಿಸಿ ಗೆಳೆಯರಿಗೆ ಮುಗುಳ್ನಗೆ ಸೂಸಿ
ಆರತೆ ಅಕ್ಷತೆ ಮುಗಿದಾಗ ರಾತ್ರಿ ಹನ್ನೊಂದಾಯಿತು 
 
ವರುಷ ಕಳೆದು ಹೋಯಿತು ಎಂದು 
ಹರುಷ ಇರಲಿ ಇನ್ನು ಮುಂದು, ಎಂದೆಂದು
ಹರಸಿ ನೀವು ನಮಗೆ ಇಂದು ಬಂದು  :)