ಪ್ರಿತ್ಸೋಣ ಬಾ...ಸಾರೋಣ ಬಾ ..
ಇಂದು ಎಂದು ಎಂದೆಂದು ನಾವುಗಳು
ನಿತ್ಯ ಪ್ರೇಮಿಗಳೆಂದು ಜಗಕೆ ತೋರಿಸಲು ... ಪ
ಕನಸಿನ ಲೋಕದ ಮೋಡವ ವಡೆದು
ನನಸಿನ ಮಳೆಯಲಿ ಮಿಂದು ಕುಣಿದು
ಮೈ ಮರೆಯುತ ನಲಿಯುವ ಬಾರಾ.... ೧
ಹಿರಿಯರ ಒಲವಿನ ಒಪ್ಪಿಗೆ ಪಡೆದು
ಕಿರಿಯರ ಜೊತೆಯಲಿ ಹರುಶದಿ ನಲಿದು
ಕೈ ಕೈ ಹಿಡಿಯುತ ನೆಡೆಯುವ ಬಾರಾ... ೨
ಗಿಡ ಮರದ ಅಂಚಲಿ ನೂಡುತ ಕುಳಿತು
ಗಿರಿ ಬನ ಊರೂರ ದಿನವೂ ಅಲಿದು
ಹಕ್ಕಿಯಂತೆ ಜೊತೆಯಲಿ ಹಾರುವ ಬಾರಾ....೩
ಸುಂದರವಾದ ಸಾಲುಗಳು, ಹೀಗೆ ಮುಂದುವರಿಸುತ್ತಿರಿ
ಪ್ರತ್ಯುತ್ತರಅಳಿಸಿ