ಮದುವೆ ಆಗೋಣ ಅಂತ ಮೊದಲ
ಹುಡ್ಗಿನ್ ನೋಡೋಕೆ ಹೋಗಿದ್ದೆ
ಮದುವೆ ತಂಟೆ ಬೇಡ ಅಂತ
ತಪ್ಸ್ಕೊಂಡು ಓಡಿ ಬಂದು ಬಿಟ್ಟೆ
ಫೋಟೋ ದಲ್ಲಿ ಹುಡ್ಗಿನ ನೋಡಿ
ಅರ್ದ ಮನಸು ಕೊಟ್ಟುದ್ದೆ
ಮೊಬೈಲ್ಲಿ ನಲ್ಲಿ ಮಾತು ಕೇಳಿ
ಹೃದಯ ಟ್ಯೂನ್ ಮಾಡಿ ಇಟ್ಟಿದ್ದೆ
ಚಾಟಿಂಗ್ ನಲ್ಲಿ ಒಂದು ವಾರ
ಎಸ್ಟೊಂದು ಹರಟೆ ಮಾಡಿದ್ದೆ
ಅವಳ ಮೇಲೆ ಕವನ ಬರೆದು
ಕನಸು ಕೂಡ ಕಟ್ಟಿಬಿಟ್ಟೆ
ಹುಡುಗಿ ನೋಡೋ ದಿನ ಅಂತ
ಮನಸು ಹೃದಯ ಕುಣತಿತ್ತು
ಸಂಜೆ ತನಕ ಹುಡುಕಿ ಹುಡುಕಿ
ಕೊನೆಗೆ ಅವರ ಮನೆ ಸಿಕ್ಬಿಡ್ತು
ಹುಡುಗಿ ತೋರ್ಸೋ ವಿಷ್ಯ ಬಿಟ್ಟು
ಮದುವೆ ಮುಹೂರ್ತ ನೋಡಾಯ್ತು
ಮೊದಲು ಹುಡುಗಿ ಕರ್ಸಿ ಅಂತ
ಕೊನೆಗೆ ಹಠ ಹಿಡಿಯ ಬೇಕಾಯಿತು
ಅಂತು ಇಂತೂ ಹುಡುಗಿ ಬಂದ್ಲು
ಅತಿ ವೈಯಾರ ಮಾಡ್ಕೊಂಡು
ಅವಳನ್ನ ತಲೆ ಎತ್ತಿ ನೋಡೋಕೆ
ಆಗದೆ ನಾಚಿಕೆಯಿಂದ ಕುತ್ಕೊಂಡೆ
ಸೀರೆ ಉದ್ಸಿ ಮೇಕಪ್ ಜೊತೆಗೆ
ಮಲ್ಲಿಗೆ ಹೂವು ಬಳೆ ತೊಡ್ಸಿದ್ರು
ಕೈಯಲ್ಲಿ ಸ್ವೀಟ್ ತಟ್ಟೆ ಹಿಡ್ಕೊಂಡು
ನಕ್ಕಗ್ಲೆ ಅರ್ಧ ಸತ್ಯ ಗೊತ್ತಾಯ್ತು .
ದೃಷ್ಟಿ ಗೋಡೆ ಮೇಲೆ ಇದ್ರೂ
ಮಾತು ನನ್ನ ಜೊತೆಗೆ ನೆಡೆತ್ತಿತು
ಉಬ್ಬು ಹಲ್ಲ ಮುಖ ನೋಡಿ
ತುರಿಮಣೆ ಕನಸು ಬಿದ್ದುಬಿಡ್ತು
ಜಾತಕ ಮಾಚ್ ಅಂತ ಬಂದು
ತಲೆನೋವೆ ಆಗಿಹೋಯ್ತು
ಸ್ವಲ್ಪ ಹೊತ್ತು ಅಲ್ಲೇ ಇದ್ರೆ
ಜೀವನ ಕೊರಗೋ ಹಗೆ ಅಗ್ತಿತು
:ಪ್ರಭಂಜನ ಮುತ್ತಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ