ಶುಕ್ರವಾರ, ಮಾರ್ಚ್ 13, 2009

*ಚಲುವು*

******ಚಲುವು
ಹೊಗಳಲು ನಿನ್ನ ಒಲವಿನ ಚಲುವು 
ಹುಡುಕುವೆ ಆ ಹೊಸ ಪದಗಳ ಕಡಲು  ||ಪ ||

ನಲಿತ ಹಾರುವ ಗುಂಗುರ ಮುಂಗುರುಳು
ಕಾಡಿಗೆ ತೀಡಿದ ಆ ಹುಬ್ಬಿನ ಬೆರಗು 

ಜಿಂಕೆಯ ಕಣ್ಣಿನ ಮಿಂಚಿನ  ಬೆಳಕು  
ಉಸಿರಿನ ನಾದಕ್ಕೆ ಹಿಗ್ಗುವ ಆ ಮೂಗು 

ಕುಣಿ ಬೀಳುವ ಮೃದು ಗಲ್ಲದ ಸೊಬಗು   
ಶಬ್ದದ ಅಲೆಗೆ ಬಾಗುವ ಆ ಕಿವಿಯು 

ಕೋಗಿಲೆ ಕಂಠಕ್ಕೆ ಹೊಂದುವ ಶ್ರುತಿಯು
ಕಂಪನು ಸೂಸುವ ಆ ಹವಳದ ತುಟಿಯು   

ನೀಳ ಕತ್ತಿಗೆ ಚಿಕ್ಕ ಸರ ವಜ್ರದ ಹರಳು   
ಭಾರಕ್ಕೆ ಬಾಗಿದ  ಆ ಉದ್ದದ ಜಡೆಯು 

ಸುಂದರ ಮೌನದ ಜೊತೆ ಪಿಸುಮಾತು 
ಅಂದದ ಪೂರ್ಣ ಚಂದಿರನ ಆ ಮೊಗವು 

ಸುರಿಯಲಿ ನಿನ್ನ ಪ್ರೀತಿಯ ಹೂ ಮಳೆಯು  
ಹೃದಯದಿ ಹರಿಯಲಿ ಆ ಸ್ಪೂರ್ತಿಯ ಸೆಲೆಯು

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ