ಶುಕ್ರವಾರ, ಮಾರ್ಚ್ 13, 2009

ನನ್ನದಲ್ಲವೇ

ನಿನ್ನ ಪ್ರೀತಿಯ ಸೆಲೆಯು 
ಹೀಗೆ ಹರಿಯುತಲಿರಲು
ಹೇಗೆ ನಿದ್ರಿಸಲಿ ಚಲುವೆ 

ನಿನ್ನ ಸಣ್ಣ ಆಸೆಗಳ 
ಹೇಗೆ ತೀರಿಸಲೆಂದು 
ಹಗಲು ಇರಿಲು ನಾನು ಹುಡುಕುತಿರುವೆ 

ಮೊನ್ನೆ  ನಡು ರಾತ್ರಿಯಲ್ಲಿ 
ನನ್ನ ನೋಡಲು ಬಯಸಿ
ನೀ ಕರೆದಾಗ ನಾ ಬರಲಿಲ್ಲವೇ 

ನದಿಯ ಜ್ಹುಳು ನಾದದಲಿ 
ಮನಸು ಹರಿಯಲು ಬಿಟ್ಟು
ಕನಸು ಕಾಣುತ  ಮೈ ಮರೆಯಲಿಲ್ಲವೇ 

ಬೆಟ್ಟದ ತುದಿ ಅಂಚಿನಲಿ 
ನೆಟ್ಟು ಕಣ್ಣ ನಿನ್ನ ಮೇಲೆ 
ಗಾಳಿಗೆ ತೇಲಿ ನಾ ಉರಿಳಿ ಬೀಳಲಿಲ್ಲವೇ 

ಸಾಗರದ ಏರು ಅಲೆಗಳಲಿ 
ಮಧುರ ಆ ಕ್ಷಣದಲ್ಲಿ 
ಲಯಕೆ ತಕ್ಕ ಹಗೆ ನನ್ನ ಕುಣಿಸಲಿಲ್ಲವೇ
 
ಪ್ರೇಮಿಗಳ ದಿನದಂದು
ಮುತ್ತು ಕೊಡುವೆನು ಎಂದು
ಕರೆಸಿ ಮುತ್ತಿನ ಹಾರ ನೀ ಕೊಡಲಿಲ್ಲವೇ 

ಚಿಗುರು ತಿನ್ನ ಬೇಕೆಂದು 
ಮರವ ಏರಿಸಿ ಕೊನೆಗೆ
ಕೋತಿ ಎಂದು ಕಲ್ಲು ನೀ ಹೊದೆಯಲಿಲ್ಲವೇ 
     
ನಿನ್ನ ಜೀವನ ಪೂರ್ತಿ 
ಹೇಗೆ ಇರಲಿ ನಗುವು ನಲಿವು 
ಅದರ ಸವಿ ಸವಿವ ಬಯಕೆ ನನ್ನದಲ್ಲವೇ

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ