ಮಂಗಳವಾರ, ಮೇ 11, 2010

ಪೇಟೆಗೆ ಹೋಗೋಣ

ಪೇಟೆಗೆ ಹೋಗೋಣ ಬಾರೋ
ನನ್ನ ಸುಕುಮಾರಾ
ಕಿಸೆಯಲ್ಲಿ ಕಾಸಿಲ್ಲ ಹೋಗೇ
ನನ್ನ ಸುಕುಮಾರಿ

ಚೂಡೀದಾರ ಕೇಳೋದಿಲ್ಲ
ಪ್ಯಾಂಟ್ ಷರ್ಟ್ ಬೇಕಾಗಿಲ್ಲ
ಚಪ್ಪಲಿ ಅಂತೂ ತೋಗೋಳೋದೇಇಲ್ಲ ಸರದಾರ
ರೇಷ್ಮೇ ಸೀರೆ ಕೋಡ್ಸೋ ಸಾಕು ಸುಕುಮಾರಾ

ಮುತ್ತಿನ ಸರ ಹಾಕೋದಿಲ್ಲ
ಬೆಳ್ಳಿ ಕಾಲ್ಗೆಜ್ಜೆ ಬೇಡೋದಿಲ್ಲ
ಬಂಗಾರದ ನೆಕ್ಲಸ ಮಾಡಿಸೋದಿಲ್ಲ ಸರದಾರ
ಪ್ಲಟಿನಂ ಉಂಗುರ ಕೋಡ್ಸೊ ಸಾಕು ಸುಕುಮಾರ

ಪಪ್ ಕಾರ್ನ್, ಕೋಕ್ ನೋಡೋದಿಲ್ಲ
ಪಾನಿಪುರಿ, ಪೀಟಝ್ಹ ತಿನ್ನೋದಿಲ್ಲ
ಮಸಾಲೆ ದೋಸೆ, ಕಾಫಿ ಕುಡಿಯೋದಿಲ್ಲ ಸರದಾರ
ಲೀಲಾಪ್ಯಾಲೇಸಲಿ ಊಟ ಮಾಡ್ಸೊ ಸುಕುಮಾರ

ಪ್ಲಾಟಿನಂಅಂತೆ ಹೋಳೆವಾ ಮೋಗವು
ರೇಷ್ಮೆಯಂತೆ ವೈಯಾರದ ಆ ಚಲುವು
ನಿನ್ನ ನೊಡುತ ಕೂಡಲು ಈ ಅರಮನೆ ಇರಲು
ಪೇಟೆಗೆ ಹೋಗಲೇಬೇಕಾ ಸುಕುಮಾರಿ ರಾಜಕುಮಾರಿ!