ಶುಕ್ರವಾರ, ಮಾರ್ಚ್ 13, 2009

**ನೀನಿಲ್ಲದೆ **

ನೀನ್ ಇಲ್ಲದಾ ಇರುಳು,
ಜಲವಿಲ್ಲದಾ ಮರಳು 

ನಿನ್ದಲ್ಲದ ಪ್ರೀತಿ
ವ್ಯರ್ಥ ಆ ಬದುಕಿನ ರೀತಿ   

ನಿ ಬಡಿಸದ ಊಟ 
ರುಚಿ  ಇಲ್ಲದೆ ತಿನ್ನುವ ಕಾಟ 

ನಿನ್ನ ಬಳಸದ ಬಾಹು
ಗೆದ್ದಲು ಹಿಡಿದ ಗೂಡು 

ನಿನ್ನ ನೋಡದ ನಯನ 
ಚಂದ್ರ ನಿಲ್ಲದ ಗಗನ 

ನೀ ನಿರದಾ ಪ್ರಯಾಣ 
ರೆಕ್ಕೆ ಇಲ್ಲದಾ ವಿಮಾನ 

ನೀ ಓದದ ಕವನ
ಶಾಸ್ತ್ರ ವಿಲ್ಲದ ಪ್ರಮಾಣ   

ನೀ ಇರದ ಜೀವನ
ಕನಸಿಗೂ ಬರುವುದು ನಿಧನ 

ನೀ ಇರುವ  ನಾನು
ಪೂರ್ಣ ಚಂದಿರನ  ಬಾನು 

ನಾ ಇರುವ ನೀನು 
ಜೀವನ ತುಂಬಾ ಸಿಹಿ  ಜೇನು!

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ