ಶುಕ್ರವಾರ, ಮಾರ್ಚ್ 13, 2009

* ಚಾಟಿಂಗ್ ಎಫೆಕ್ಟ್*

ಚಾಟಿಂಗ್ ನಲ್ಲಿ ಒಂದು

ಹುಡ್ಗಿನ ಭೇಟಿ ಮಾಡಿದ್ದೆ
ಮೀಟಿಂಗ್ ಮಾಡೋಣ ಅಂತ
ಒಂದು ಪಾರ್ಕ್ಗೆ ಕರದಿದ್ದೆ


ಕಡು ನೀಲಿ ಬಣ್ಣದ ಪ್ಯಾಂಟು
ಧರಸಿ ವೈಟ್ ಶರ್ಟ್ ಹಾಕಿದ್ದೆ
ನಸುಗಂಪು ಕುಸುರಿ ಚೂಡಿ
ಧಿರಿಸಿ ಬರೋಕೆ ಹೇಳಿದ್ದೆ


ಕೆಲಸ ಕಾರ್ಯ ಮುಗ್ಸಿ
ರೋಜು ತೊಗಂಡು ಬಂದಿದ್ದೆ
ಕನಸ ಕಾಣೋ ಮನಸ
ಪೋಜು ಕೊಡ್ತಾ ಕಾಯ್ತಿದ್ದೆ


ಹೆಸರು ವಯಸ್ಸು ಹೈಟು
ವ್ಯೈಟ್ ಎಲ್ಲ ಕೇಳಿದ್ದೆ
ಹಸಿರ ಗಿಡದ ಮಧ್ಯ
ಗೇಟ್ ಹತ್ರ ನಿಂತಿದ್ದೆ


ಕಡ್ಲೆ ಕಾಯಿ ಮುಸುಕಿನ
ಜೋಳ ಎಲ್ಲ ತಿಂದಿದ್ದೆ
ಸೌತೆ ಕಾಯಿ ಪಾಪ್ಕಾರ್ನ್
ಆಗ್ಲೇ ಖಾಲಿ ಮಾಡಿದ್ದೆ


ಕಾದು ಕಾದು ವಾಚ್
ನೋಡಿ ಸುಸ್ತಾಗಿ ಹೋಗಿದ್ದೆ
ಕೆರೆಯ ಪಕ್ಕದ ಬೆಂಚ್ಮೇಲೆ
ಬಂದು ಮಸ್ತಾಗಿ ಮಲಗಿಬಿಟ್ಟೆ



ಯಾವಾಗ ಬಂದಳೋ ಹುಡುಗಿ
ನಂಗೆ ಗೊತ್ತೇ ಆಗಲಿಲ್ಲ
ಎದ್ದು ನೋಡೋ ಹೊತ್ತಿಗೆ
ಪರ್ಸು, ಚೈನು, ವಾಚ್ ಕಾಣಲಿಲ್ಲ!


ಪರ್ಸೂ, ವಾಚ್, ಚೈನು ಹೋಯ್ತು
ಹೋಗ್ಲಿ ಸುಮ್ನೇ ಇರಬಾರದೆ
ಮತ್ತೆ ಸಂಜೆ ಹೊಸ ಹುಡ್ಗಿ
ಜೊತೆ ಚಾಟಿಂಗ್ ಸುರುಮಾಡಿದೆ


:ಪ್ರಭಂಜನ ಮುತ್ತಿಗಿ

2 ಕಾಮೆಂಟ್‌ಗಳು: