ಗುರುವಾರ, ಮಾರ್ಚ್ 26, 2009

ಹೃದಯ ತುಂಬಾ

ಅತಿಯಾಗಿ ಮಾತು ಅದಲಾರೆ
ಅನುಭವದ ಕೊರತೆ ಇಂದ
ಹಾಗೆ ಸುಮ್ಮನೆ ಇರಲಾರೆ
ಬರಿಯಬೇಕು ನಿನ್ನ ಹೃದಯ ತುಂಬಾ


ಹುಟ್ಟು ಚಲುವೆ ನೀನು ಇಷ್ಟ ಪಡುವುದೇನು
ಪಟ್ಟು ಬಿಡದೆ ನಾನು ನೆರವೆರಿಸುವೇನು
ಇಟ್ಟ ಮನಸನು ಹೀಗೆ ಬಿಚ್ಚಿ ತೋರಿಸದೇ ಏಕೆ
ಕೊಟ್ಟು ಭಾವನೆಗಳ ನನ್ನ ಕೊಲ್ಲುವೆಯೇನು

ಕಿಚ್ಚು ತರಿಸುವ ಅಸೆ ಹೆಚ್ಚು ಹೇಳಲಾರೆ
ಅಚ್ಚು ಮೆಚ್ಚು ನೀನು ಈ ಧರೆಯೊಳಗೆ
ಹುಚ್ಚು ಹಿಡಿಸೋ ನಿನ್ನ ಮೋಹಕ ಮಾತಿಗೆ
ಮೆಚ್ಚಿ ಮನಸಾರೆ ಹಾರಾಡುವೆ ನಾನು

ಬಂದು ಹುಡುಗರು ನಿನ್ನ ಹೊಗಳುತ ಇರಲು
ಮಂದ ಹಾಸ ಬೀರುತ ವಿರಸದಿ ನೋಡು
ಮಂದಗಮನೆ ನಿನ್ನ ಮೃದು ಹೆಜ್ಜೆ ಇಡುತ
ಚಂದದಿ ಬಂದು ನನ್ನ ಹೃದಯವ ಸೇರು

:ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ