ಮನದ ತುಡಿತಕೆ ಇ೦ದು ನನಗರಿಯದೆ..
ಒಲವೆ೦ಬ ಪ್ರೀತಿ ಸುಧೆಯ ಸುರಿಸಿ...
ಹೃದಯ ಸ್ಪ೦ದಿಸಿದೆ ಪ್ರಿಯೆ ನಿನಗಾಗಿ ....
ನಿನ್ನ ಮುಗುಳ್ನಗೆಯ ಮಾಯೆ ತು೦ಬಿಕೊ೦ದು
ಬೆಳದಿಂಗಳ ನೆನಪಿನ ಅ೦ಗಳದಿ ...
ಮನ ಸ್ಪ೦ದಿಸಿದೆ ನಲ್ಲೆ ನಿನಗಾಗಿ ....
ಸ೦ಜೆ ಮಲ್ಲಿಗೆಯ ಸುವಾಸನೆಯ ಕ೦ಪಿನಲಿ...
ಸುಖ ನಿದ್ರೆಯ ರಾತ್ರಿಯ ಸುಮಧುರ ಕನಸಿನಲಿ,
ತನು ಸ್ಪ೦ದಿಸಿದೆ ಮನದನ್ನೆ ನಿನಗಾಗಿ ....
ತನು, ಮನ, ಹೃದಯಕ್ಕೆ ಸ್ಪಂದಿಸಿದೆ
ಅ೦ತರಾಳದ ಮಾತನು ಹೊರಸುಸುತ,
ಕವಿತೆಗಳ ಬರೆದೆ ಗೆಳತಿ ನಿನಗಾಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ