ಶನಿವಾರ, ಮಾರ್ಚ್ 21, 2009

ಕಣ್ಣ ನೋಟ ಸಾಲದೇ

ಆ ಕಣ್ಣ ನೋಟ ಸಾಲದೇ
ನಿನ್ನ ಪ್ರೀತಿಸಲು
ಆ ನಗುವ ಮೊಗವ ಸಾಲದೇ
ನಾ ನಿನ್ನ ಮೋಹಿಸಲು

ಕರಿ ಕೋಗಿಲೆ ಚಿಗುರು ತಿನ್ನುತ
ಶ್ರುತಿ ಸೇರಿಸಿ ಕುಹೂ ಕುಹೂ ಎಂದಿತು
ನಿನ್ನ ಧ್ವನಿಯ ಸ್ವರವ ಹೊಗಳುತ
ನಸು ನಾಚಿ ತನ್ನ ಗಾನ ನಿಲ್ಲಿಸಿತು

ಹೂ ಕಾಂತಿಗೆ ಬೆರಗಾಗುತ
ಆ ದುಂಬಿ ಮಕರಂದ ಹುಡುಕಿ ಬಂತು
ನಿನ್ನ ರೂಪಕೆ ಮನ ಸೋಲುತ
ಜೇನನ್ನೇ ಸುರಿಸಿ ಹಾರಿ ಹೋಯಿತು

ಮುತ್ಸಂಜೆಯ ದತ್ತ ಮೋಡಗಳು
ಕಾನನಕೆ ಹೊಸ ಬೆಳಕು ತಂತು
ನಿನ್ನ ಸೋಕಿದ ತಂಗಾಳಿಯು
ಮೋಹದ ಮಳೆ ಸುರಿಸಿ ಹೋಯಿತು

ನಿನ್ನ ಪ್ರೀತಿಯ ಸವಿ ಮಾತಿಗೆ
ಏನೋ ಅರಿಯದ ಉತ್ಸಾಹ ಮೂಡಿತು
ಕನಸೋ ನನಸೋ ಗೊತ್ತಾಗದ ಹಾಗೆ
ಮನಸು ಹೃದಯಕೆ ಹೊಸ ಜೀವ ತಂತು

:ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ