ಶುಕ್ರವಾರ, ಆಗಸ್ಟ್ 31, 2012

ಕಂಡೆ ನಿನ್ನನ

ಮೋಡಗಳ ಅಂಚಿನಲ್ಲಿ ಕಂಡೆ ನಿನ್ನನ
ಹೇಗೆ ಹೇಳಲಿ ಅದನು ನಾ ಹಾಡಾಗಿ

ನಿನ್ನ ರೂಪಕ್ಕೆ ಮನಸಾಗಿ
ಸೋಕಿದೆ ಮಂಜು ಮೃದುವಾಗಿ
ದುಂಡು ಮೊಗದ ನೋಟಕ್ಕೆ
ನಿಂತಿವೆ ತರುಲತೆಗಳು ಬೆರಗಾಗಿ

ಹೊಳಪಿನ ಕೂದಲು ಹಾರುತಿವೆ
ಬೀಸುವ ತಂಗಾಳಿಗೆ ನವಿರಾಗಿ
ಚಿಕ್ಕ ಚೊಕ್ಕ ತುಟಿಗಳು ಮಿನುಗುತಿವೆ
ಅರಳಿದ ಕೆಂಗುಲಾಬಿ ಹೂವಾಗಿ

ಪಿಸುಮಾತಿನ ಆ ಮದುರಕ್ಕೆ
ಬಡಿಯುತಿದೆ ಹೃದಯ ಜೋರಾಗಿ
ನೀಳವಾದ ತೊಳ್ಬೇರೆಳುಗಳು
ಹೊಳೆಯುತಿವೆ ಕೋಮಲವಾಗಿ

ತುಳುಕುತಿರುವ ಆ ನಡಿಗೆಗೆ
ಬಳುಕುತಿದೆ ಸೊಂಟ ಸೊಗಸಾಗಿ
ತಿದ್ದಿ ತೀಡಿದ ಈ ಮೈ ಮಾಟಕ್ಕೆ
ನಾ ಬರೆದೆ ಕವಿತೆ ಕವಿಯಾಗಿ

ಗುರುವಾರ, ಆಗಸ್ಟ್ 9, 2012

ಸದ್ದು ಮಾಡದೇ ಬಂದನೆ

ಅಂಬೆಗಾಲಿದುತ ಬಂದ ನವನೀತ ಚೋರ.... ಕೃಷ್ಣ!
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸದ್ದು ಮಾಡದೇ ಬಂದನೆ .

ಗೊಲ್ಲ ಬಾಲಕರೋದಗೂಡಿ ಓಡೋಡುತ ಬಂದ
ಗೋವುಗಳ ಕಾಯಲು ಕೊಳಲು ಪಿಡಿದು ಬಂದನೆ .

ಹಾಲು ಮೊಸರು ತುಪ್ಪ ಹಸಿ ಬೆಣ್ಣೆ ಕದಿಯಲು ಬಂದ
ಚುಡಾಯಿಸಿ ಗೋಪಿಯರ ಕೈ ಹಿಡಿದೆಳೆಯಲು ಬಂದನೆ

ಹಿಂಡು ಕಟ್ಟಿಕೊಂಡು ಚಂಡು ಆಟ ಆಡಲು ಬಂದ
ಚಂಡು ನೆಪದಿ ಕಾಳಿಂಗನ ಸೊಕ್ಕು ಮುರಿಯಲು ಬಂದನೆ
ಹಿಡಿ ಮಣ್ಣು ತಿಂದು ಬ್ರಹ್ಮಾಂಡವ ತೋರಲು ಬಂದ
ಎದೆ ಹಾಲು ನೆಪದಿ ಪೂತನಿಯ ಪ್ರಾಣ ಹೀರಲು ಬಂದನೆ

ವೇಣುನಾದವ ಮಾಡಿ ಮೋಹ ಪಸರಿಸಲು ಬಂದ
ಜಲಕ್ರೀಡೆಯಲಿ ಹೆಂಗಳೆಯರ ಸೀರೆ ಕದಿಯಲು ಬಂದನೆ

ಗೋವರ್ಧನ ಗಿರಿಯ ಎತ್ತಿ ಗೋವುಗಳ ರಕ್ಷಣೆಗೆ ಬಂದ
ತೊಡೆಯ ತಟ್ಟಿದ ಮಾವ ಕಂಸನ ಕೊಲ್ಲಲ್ಲು ಬಂದನೆ