ಸ್ವಾತಿ ಮಳೆಹನಿಯ ಹೊಳಪಿನಂತೆ..
ತುಟಿಯಂಚಿನಲಿ ಜಾರುವ ಆ ಮಿಂಚು
ಕಾನನದ ಮಧ್ಯ ಹೊಳೆವ ಇಬ್ಬನಿಯಂತೆ
ನಾಚಿ ಮುದುಡುವ ಆ ಮುಗುಳ್ನಗೆ
ಹಸಿರ ಹಾಸಿನ ಮೇಲೆ ತಿಳಿ ಬೆಳಕು ಬಿದ್ದಂತೆ
ಬೀಳುವ ಆ ನಿನ್ನ ಒರೆ ನೋಟ!
ಹಸಿರ ಎಲೆ, ತುದಿಯಲ್ಲಿ ಹನಿ ಹಿಡಿದಂತೆ
ನೀ ನನ್ನ ಸೆರೆ ಹಿಡಿದರೆ ಹೃದಯದಲ್ಲಿ.. .!
ಜೇಡರ ಬಲೆಯಲ್ಲಿ ಸೆರೆ ಸಿಕ್ಕ ಹುಳುವಿನಂತೆ
ಪ್ರೀತಿಯ ಅಲೆಯಲ್ಲಿ ತೇಲಾದುವೆ, ಓ ಪ್ರಿಯೆ !
ನಿನ್ನ ಪ್ರೇಮದ ವರ್ಷ ಧಾರೆಯಲ್ಲಿ
ಆತ್ಮೀಯತೆ ಎಂಬ ಹೊಳೆಯಲ್ಲಿ
ಹೃದಯ ಒಡೆಯವ ವರೆಗೆ ..
ಪ್ರೀತಿಯ ರಕ್ತ ಹರಿಯುವ ವರೆಗೆ
ಕೊನೆ ಉಸಿರು ಇರುವ ವರೆಗೆ!
:ಪ್ರಭಂಜನ ಮುತ್ತಗಿ
mathinalli hailalarenu.....namma pranaya kavigala amogha kavanagalu...superb..
ಪ್ರತ್ಯುತ್ತರಅಳಿಸಿgurugale bari kavanagalanna baredu santhustaragiruvira... a kalpaneya swapna sundariyannu tamma manasina akashadinda dharegilisu taraudu yavaga!!
ಪ್ರತ್ಯುತ್ತರಅಳಿಸಿA adbhoota khsana yavaga baruvudo vendu kaidu kulutiruvevu naavu!!
E karyavanna poornagolisi nammellarannu dhanyarannagi maadi!!!