ಪ್ರೀತಿಸು ಪ್ರಿಯೆ ಮನವು ಸೋಲುವ ಮುನ್ನ
ಪ್ರೆಮಿಸು ನನ್ನ ಕನಸು ಮಾಸುವ ಮುನ್ನ ||ಪ ||
ತಂಪು ತಂಗಾಳಿ ಮುದದಿ ಸೋಕಿದಂತೆ
ನೀ ಜೊತೆ ಇದ್ದರೆ ಹಗಲು ಇರಿಳು
ಸಂಪಾಗಿ ಸುರಿದ ಮಳೆಯಲ್ಲಿ ಮಿಂದಂತೆ
ನಿನ್ನ ಸನಿಹ ಸದಾ ಮುದ ಕೊಡುವುದು
ಸಾಗರದ ಅಲೆಯು ಏರಿ ಇಳಿದಂತೆ
ನಿನ್ನ ವೈಯಾರದ ಆ ನಡುಗೆಯು
ಇಬ್ಬನಿಯು ಮೈತಾಕಿ ಕಚಗುಳಿ ಇಟ್ಟಂತೆ
ನಿನ್ನ ಮೋಹದ ಆ ಆಲಿಂಗನವು
ಹೃದಯದ ಮಾತು ಮೆಲ್ಲನೆ ನುಡಿದಂತೆ
ನೀ ನುಡಿವ ನುಡಿಯ ಅನುರಾಗವು
ಮನಸಿನ ಪಲ್ಲವಿಯ ರಾಗಕ್ಕೆ ತಕ್ಕಂತೆ
ನೀ ನಗುವ ನಗು ಅತಿ ಮದುರವು
ನೀಲಿ ಆಗಸದ ತಿಳಿ ಬೆಳದಿಂಗಳಂತೆ
ನಿನ್ನೊಳಗೇ ಇದೆ ನನ್ನ ಕನಸು
ನದಿಗಳು ಕಡಲ ಒಡಲು ಹೊಕ್ಕಂತೆ
ನೀ ನನ್ನ ಸೇರಿದರೆ ಎಂಥ ಸೊಗಸು
:ಪ್ರಭಂಜನ ಮುತ್ತಿಗಿ --
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ