ಶುಕ್ರವಾರ, ಮಾರ್ಚ್ 13, 2009

ಕಳೆದು ಹೋಗುವಂತೆ ಮಾಡು

ಕಳೆದು ಹೋಗುವಂತೆ ಮಾಡು 
ನಿನ್ನ  ಹೊಗಳಿಕೆಯ  ಪ್ರೀತಿಯಲ್ಲಿ 

ಮನಸು  ಹಾರುವಂತೆ  ಮಾಡು  
ನಿನ್ನ  ಸವಿ ಮಧುರ  ಮಾತಿನಲ್ಲಿ !

ಕನಸು ಕಾಣುವಂತೆ ಮಾಡು
ನಿನ್ನ ಪ್ರೇಮದ ಪರಿಯಲ್ಲಿ 

ಕಣ್ಣು  ಚಲಿಸದಂತೆ  ಮಾಡು 
ನಿನ್ನ  ನೋಟದ  ಆಕರ್ಷಣೆಯಲ್ಲಿ 

ಮಾತು  ಮರೆಯುವಂತೆ  ಮಾಡು  
ನಿನ್ನ  ಹೃದಯ  ಬೆರಸಿ  ನನ್ನಲ್ಲಿ 

ಹೃದಯ ಬಡಿತ ಏರು ವಂತೆ ಮಾಡು
ನಿನ್ನ ಮುದ್ದಿನ ಆ ಸಿಹಿ ಸವಿಯಲ್ಲಿ !!

ನನ್ನ  ಜೊತೆ ಇರುವಂತೆ ಮಾಡು  
ನಿನ್ನ  ಪ್ರೀತಿ ಪ್ರೇಮ ಪ್ರಣಯದಲ್ಲಿ!  ;)

:ಪ್ರಭಂಜನ ಮುತ್ತಿಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ