ಗುರುವಾರ, ಅಕ್ಟೋಬರ್ 22, 2009

ಹಾರುವ ಹಕ್ಕಿಗಳು

ಹಾರುತಿವೆ ಹೊಸ ಹಕ್ಕಿಗಳಿಂದು
ತಿಳಿಯ ನೀಲಿ ಆಗಸಕ್ಕಿಂದು
ಮಂಜು ಮೋಡ ದಾಟಿ ದೂರ
ಹೊಸ ಲೋಕ ಹುಡುಕುವೆ ವೆಂದು

ಎಲ್ಲೊ ಹುಟ್ಟಿ ಎಲ್ಲೊ ಬೆಳೆದು
ಗೂಡು ಬಿಟ್ಟು ಅಲಿಯುತ ದಿನವು
ಸುಮಧುರ ಕನಸನ್ನು ನೆನೆದು
ಹಾರುವುದು ಹೊಸ ಗೆಳೆತನ ಬೆಸೆದು

ಆಸೆ ತುಂಬಿದ ಕಣ್ಣುಗಳಲ್ಲಿ
ತೇಲುತ ಸವಿ ತಂಗಾಳಿಯಲ್ಲಿ
ಸುಂದರ ಸರಸಮಯ ಸವಿಯಲ್ಲಿ
ಹಾರುವವು ಭಾವನ ದಿಗಂತದಲ್ಲಿ

ಹದ್ದು ಗಿಡುಗದ ಭಯವನೆ ತೊರೆದು
ಬಿಸಿಲು ಚಳಿ ಮಳೆಯನ್ನೇ ಅಳಿದು
ಕಂಡ ಕನಸು ನನಸಾಗಿಸಲು
ಹಾರುವವು ಜೀವನ ಮಧುರವಾಗಿಸಲು

ಕಸ ಕಡ್ಡಿ ಹೆಕ್ಕಿ ತೆಗೆದು ಜೋಡಿಸಿ
ಕಟ್ಟುವವು ಹೊಸ ಗೂಡೊಂದು
ಕಾವು ಕೊಟ್ಟು ಮರಿಯನು ಮಾಡಿ
ಹಾರುವವು ಕಾಳು ಹುಡುಕಲೆಂದು

ಮುತ್ಸಂಜೆಗೆ ಮೊದಲು ಗೂಡಿಗೆ ಮರಳಿ
ತಂದ ಕಾಳು ಮರಿಗಳಿಗೆ ಉಣಬಡಿಸಿ
ಮುಂಜಾವಿಗೆ ಚಿಲಿಪಿಲಿ ಗುಟ್ಟುತ, ಮರಳಿ
ಹಾರುವವು ಜೀವನದ ಪಾಠವ ತಿಳಿಸಿ

ಶುಕ್ರವಾರ, ಅಕ್ಟೋಬರ್ 9, 2009

ಮೆರಗು

ಒಲವೆ ನಿನ್ನ ಚಲುವ ಹೇಗೆ ವರ್ಣಿಸಲಿ
ಬಣ್ಣಿಸಲು ಕವನಗಳು ಸಾಲವು ಎಂದೆಂದು

ಹಾಕಿದ ಬಟ್ಟೆಗೆ ಹೊಸ ಮೆರಗು ನೀಡುವಿ
ಹಣೆಯ ಕುಂಕುಮಕ್ಕೆ ರೂಪ ಕೊಡಿಸುವೆಯೋ
ಬಟ್ಟಲು ಕಣ್ಣಅರಳಿಸಿ ಯಾಕೆ ನೀ ನೋಡುವಿ
ವಜ್ರದ ಮೂಗುತಿಗೆ ಹೊಳಪು ಕೊಡಿಸುವೆಯೋ

ನೀ ನೆಡೆದ ದಾರಿಯಲಿ ಪರಿಮಳವ ಸೂಸುವಿ
ಎಲ್ಲರೂ ತಿರುಗಿ ನೋಡುವ ಹಾಗೆ ಮಾಡುವಿಯೋ
ನಿನ್ನ ನೋಡಿದ ಹುಡುಗರ ಹಳ್ಳಕ್ಕೆ ಬೀಳಿಸುವಿ
ಮೆಲ್ಲಗೆ ನಸುನಕ್ಕು ನೋವ ಮರೆಸಿ ಬಿಡುವಿಯೋ

ಪೂರ್ಣ ಚಂದಿರನ ನೀ ಹಗಲಿನಲಿ ತೋರಿಸುವಿ
ನಿನ್ನ ಹೊಳಪಿನಿಂದ ರಾತ್ರಿ ಪ್ರಭೆಯ ತರಿಸುವಿಯೋ
ಅನಂಗನಾದರೂ ಅವನ ಮಂಗ ಮಾಡಿಬಿಡುವಿ
ನಿನ್ನ ಗುಣ ದಿಂದ ಎಲ್ಲವನ್ನು ಗೆದ್ದು ಬಿಡುವಿಯೋ

ಬುಧವಾರ, ಅಕ್ಟೋಬರ್ 7, 2009

ಇದ್ದರೇನು?

ಪ್ರೀತಿ ಇಲ್ಲದ ಮನಸು
ಮೋಹ ಇಲ್ಲದ ಕನಸು
ನೀತಿ ಇಲ್ಲದ ಬದುಕು
ಇದ್ದರೇನು ಇಲ್ಲದೆ ಇದ್ದರೇನು

ಮುನ್ನೋಟ ಇಲ್ಲದ ಬುದ್ದಿ
ಮಾತಿನಲ್ಲಿ ಇಲ್ಲದ ಧ್ರುಡತಿ
ಕಲಿಕೆಯಲ್ಲಿ ಇಲ್ಲದ ಸಿದ್ಧಿ
ಇದ್ದರೇನು ಇಲ್ಲದೆ ಇದ್ದರೇನು

ತಾಳ ಇಲ್ಲದಾ ಸಂಗೀತ
ಮೇಳ ಇಲ್ಲದಾ ಮದುವೆ
ಕಾಳು ಇಲ್ಲದಾ ತೆನೆಯು
ಇದ್ದರೇನು ಇಲ್ಲದೆ ಇದ್ದರೇನು

ಹಣ ಇಲ್ಲದಾ ತ್ಯಾಗ
ಗುಣ ಇಲ್ಲದಾ ಭೋಗ
ಕರುಣೆ ಇಲ್ಲದಾ ಯೋಗಿ
ಇದ್ದರೇನು ಇಲ್ಲದೆ ಇದ್ದರೇನು