ಶುಕ್ರವಾರ, ಏಪ್ರಿಲ್ 30, 2010

***ಮಳೆ ನಿಲ್ಲುವ ಮುನ್ನ***

***ಮಳೆ ನಿಲ್ಲುವ ಮುನ್ನ***
ಬರಿಯಬೇಕು ಕವನ
ಮಳೆ ನಿಲ್ಲುವ ಮುನ್ನ
ಗುಡುಗು ಸಿಡಿಲು
ಹೊಡೆಯುವ ಮುನ್ನ
ಆಣೇಕಲ್ಲು ಕರಗಿ
ನೀರಾಗುವ ಮುನ್ನ
ಆಗಸದಿ ಕೋಲ್ಮಿಂಚು
ಸುಳಿದು ಜಾರುವ ಮುನ್ನ
ಕರಿಮೋಡದ ಮುಂದೆ
ಕಮನ ಬಿಲ್ಲು ಮಾಸುವ ಮುನ್ನ
ಚಲಿಸುವ ಮೋಡ ತಂಗಾಳಿ
ಜೋತೆ ಸಾಗುವ ಮುನ್ನ
ಏಲೆ ತುದಿಯಿಂದ ಹನಿಯು
ಭುವಿಗೆ ಬೀಳುವ ಮುನ್ನ
ರಂಬೆ ಕೂಂಬೆಗಳು
ಮುರಿದು ಹೋಗುವ ಮುನ್ನ
ಹಕ್ಕಿ ಪಕ್ಷಿಗಳು
ಗೆರಿ ಕೆದರಿ ಹಾರುವ ಮುನ್ನ
ವಿದ್ಯುತ್ ದೀಪ
ಕಡಿದು ಆರುವ ಮುನ್ನ
ಮಕ್ಕಳು ಕಾಗದದ ಹಡಗು
ನೀರಲ್ಲಿ ತೇಲಿ ಬಿಡುವ ಮುನ್ನ
ನನ್ನ ನಲ್ಲೆ ಮಳೆಯಲ್ಲಿ ಮಿಂದು
ಒಮ್ಮೆ ಓರೆ ನೋಟದಿ ನೋಡುವ ಮುನ್ನ

ಮಂಗಳವಾರ, ಏಪ್ರಿಲ್ 13, 2010

ಮೊದಲ ಮಳೆ

ಋತು ಚೈತ್ರದ ಮೋಡ ಸರಿದು
ಮೊದಲ ಮಳೆ ಬಿತ್ತು ಭುವಿಯಲ್ಲಿ
ಬಿಸಿಲ ಝಳದ ಬೇಗೆಯನ್ನು
ಆರಿಸುತಿದೆ ತಂಪೆರೆದು ಎಲ್ಲೆಲ್ಲಿ

ಆರ್ಭಟಿಸುತಿದೆ ಸುಂದರ ಬೆಳಕಿನಾಟದ
ಗುಡುಗು ಕೋಲ್ಮಿಂಚು ಆಗಸದಲ್ಲಿ
ರಭಸದಿಂದ ಸೊಗಸಾಗಿ ಸುರಿಯುತಿದೆ
ಮಳೆ ಎಳೆ ಎಳೆಯಾಗಿ ಇರುಳಲ್ಲಿ

ಕಂಗೊಳಿಸುತಿದೆ ಚಿಗುರ ಹಸಿರು
ಧೂಳಿನಾ ಕವಚ ನಯವಾಗಿ ಕಳಚುತಲಿ
ಕೋಮಲ ಹೂಗಳು ನವ ಉಸಿರು
ತುಂಬಿ ಮೂಡಿದವು ಹಲವು ಬಣ್ನಗಳಲ್ಲಿ

ಕಲರವದಿ ಸಂವಾದ ಮಾಡುತಿವೆ
ಹಕ್ಕಿಗಳು ಮರ ಮರದ ತುದಿಯಲ್ಲಿ
ಕೂಗುತ ಹಾರಾತ ಹಾಡುತಿವೆ
ಸಂಗೀತ ಲಯಬಿಡದೆ ಸುಸ್ವರದಲ್ಲಿ

ಬೊರ್ಗರೆವ ತಂಗಾಳಿ ಸೋಕಿ
ಉಲ್ಲಾಸ ತಂದಿದೆ ನಮಗಿಲ್ಲಿ
ಬತ್ತಿ ಹೋದ ಮೋಹ ಹಿತವಾಗಿ
ಮೂಡಿ ಉತ್ಸಾಹ ತಂತು ಮನಸಲ್ಲಿ