ಶುಕ್ರವಾರ, ಮಾರ್ಚ್ 13, 2009

*****ರಸಿಕತೆ ತಂತು ****


ಇರಳು ಸರಿದ ಸರಿ ರಾತ್ರಿ ಬಾನಿನಲಿ
ತುಸು ಮೆಲ್ಲನೆ ಬೀಸುವ ಸವಿ ತಂಗಾಳಿ 

ಮಾವು, ತೆಂಗು ಗರಿ ಎಲೆಗಳ  ಕಲರವ
ಅಂಬುಧಿಯಲ್ಲಿ ತುಂಬು ಬೆಳಕು ಚಂದಿರ 

ಅಂಚು ಅಂಚಿನಲಿ ಫಳ ಫಳ ಹೊಳೆದು 
ಸಹಗಮನೆಯಂತೆ ಮಿನುಗುವ ತಾರೆಗಳು 

ರಂಭೆಯನು ನಾಚಿಸುವ ನಾರಿಯ ರೂಪದಿ
ಊರ್ವಶಿಯನು ಹೋಲುವ ಆಕಾರ ಸ್ವರೋಪದಿ 

ಜಿಂಕೆಯಂತೆ ಜಿಗಿದು, ಒಲವಿನ ಚಿತ್ರ ಬಿಡಿಸುತ 
ಬಾನಂಗಳದಿ ಮೂಡಿತು ಚಂದದ ಕೋಲ್ಮಿಂಚು 

ನಿತ್ಯ ಪ್ರೇಮಿಗಳಿಗೆ ಮಂದಹಾಸ ಮೂಡಿಸುತ 
ಆಗಸಕೂ ಶರವೇಗದಿ  ರಸಿಕತೆ ತಂತು

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ