ಶುಕ್ರವಾರ, ಮಾರ್ಚ್ 13, 2009

* ಪ್ರೀತಿ ಕನಸು *


ಸರ ಸರನೆ  ನೆಡೆದು  
ಬರ ಸೆಳೆದು  ನಗುವ 
ಒಲವಿನ  ಚಲುವೆ  ನೀನು 

ನಸು ನಗುತ ನಲಿದು
ಕುಣಿ ಕುಣಿದು ಬರುವ
ನಿಜ ಪ್ರೀತಿ ಕನಸು ನಿನು

ಲವ ಲವಿಕೆ ಇಂದ 
ಸ್ವರ ಹಾಡಿ ನಲಿವ  
ಹೃದಯದ ಲಯವೇ  ನೀನು 

ಪಿಸು  ಮಾತು ನುಡಿದು 
ತಂಪನ್ನು ಸುರಿಸೋ   
ಹಿತವಾದ ಮಳೆಯು ನೀನು

ಜಲ ಧಾರೆಯಂತೆ 
ಸೊಗಸಾಗಿ ಹರಿವ  ಹಸಿರ 
ಪ್ರಕೃತಿಯ ಸೊಬಗು  ನೀನು 

ತುಸು ತುಟ್ಟಿ ಆದರು
ಬುಸು ಗುಟ್ಟಿ  ತೊಡುವ  
ಸುವರ್ಣದ ತುಣುಕು  ನೀನು

ಅತಿ ಅಸೆ ಇಂದ 
ನಿನ್ನ ನೋಡುತಿರುವ
ಮೋಹನ ಮುರಳಿ ನಾನು.

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ