ಮೊದಲ ರಾತ್ರಿಯಲಿ
ಕನಸಿನ ಲೋಕದಲಿ
ತೇಲುವ ಸುಖ ನಿದ್ರೆ
ಪ್ರಿಯೆ ನಮಗೆ ಬಾರದಿರಲಿ
ಆ ಮಧು ಮಂಚದಲಿ
ಮಲ್ಲಿಗೆಯ ಕಂಪಿನಲಿ
ಮಾತನಾಡುವ ಸಮಯ
ನಲ್ಲೆ ನಮಗೆ ಬಾರದಿರಲಿ
ಚುಮು ಚುಮು ಚಳಿಯಲ್ಲಿ
ಬೀಸುವ ತಂಗಾಳಿಯಲ್ಲಿ
ದೂರ ದೂರ ಇರುವ ಕಷ್ಟ
ಚಲುವೆ ನಮಗೆ ಬಾರದಿರಲಿ
ಅತ್ತೆ ನಾದಿನಿ ಕಾಟ
ಇತ್ತ ಮಾವನ ಆಟ
ತಪ್ಪಿಸಿ ಓಡಾಡುವ ಪಾಠ
ಗೆಳತಿ ನಮಗೆ ಬಾರದಿರಲಿ
ಮೇಲೆ ಆಕಾಶದಲಿ
ಆ ನದಿ ನೀರಿನಲಿ
ತೇಲುತ ಸಾಗುವ
ನಾವು ಜೀವನ ಪಯಣದಲಿ
:ಪ್ರಭಂಜನ ಮುತ್ತಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ