ಮುಂಜಾವಿನ ನಸು ಬಿಸಿಲಿನ ಮಂಜಿನಲ್ಲು
ಮುಸ್ಸಂಜೆಯ ನವಿರಾದ ಕಂಪಿನ ತಂಪಿನಲ್ಲೂ
ಬೆಳದಿಂಗಳ ಸುಂದರ ಮಧುರ ಕಿರಣದಲ್ಲೂ
ಮನ ಮೋಹಕ ಸಿಹಿ ತಂಗಾಲಿಯಲ್ಲೂ
ಚುಮು ಚುಮು ಕೊರೆಯುವ ಚಳಿಯಲ್ಲೂ
ಜ್ಹುಳು ಜ್ಹುಳು ಹರಿಯುವ ನೀರಿನಲ್ಲೂ
ಹಸಿರ ಕಾನನದ ದಟ್ಟ ಬೆಟ್ಟ ಗುದ್ದಗಳಲ್ಲೂ
ಭೋರ್ಗರೆವ ಕಡಲ ಅಳ ಕಿನರೆಯಲ್ಲೂ
ಶುಭ್ರವಾದ ತಿಳಿ ನೀಲಿ ಆಗಸದಲ್ಲೂ
ಸುಖ ನಿದ್ರೆಯ ಸವಿಯಾದ ಕನಸಿನಲ್ಲೂ
ನಿನ್ನನ್ನೇ ಕಾಣುವೆ ನಾನು ಎಲ್ಲೆಲ್ಲೂ,
ಗೆಳತಿ ನೀನೆ ನನ್ನ ಮನದ ಒಡತಿ
ಯಾವಾಗ ನನ್ನ ಹಿಂದೆ ನೀ ಬರುತಿ?
:ಪ್ರಭಂಜನ ಮುತ್ತಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ