ಗುರುವಾರ, ಮಾರ್ಚ್ 26, 2009

ಹೃದಯ ತುಂಬಾ

ಅತಿಯಾಗಿ ಮಾತು ಅದಲಾರೆ
ಅನುಭವದ ಕೊರತೆ ಇಂದ
ಹಾಗೆ ಸುಮ್ಮನೆ ಇರಲಾರೆ
ಬರಿಯಬೇಕು ನಿನ್ನ ಹೃದಯ ತುಂಬಾ


ಹುಟ್ಟು ಚಲುವೆ ನೀನು ಇಷ್ಟ ಪಡುವುದೇನು
ಪಟ್ಟು ಬಿಡದೆ ನಾನು ನೆರವೆರಿಸುವೇನು
ಇಟ್ಟ ಮನಸನು ಹೀಗೆ ಬಿಚ್ಚಿ ತೋರಿಸದೇ ಏಕೆ
ಕೊಟ್ಟು ಭಾವನೆಗಳ ನನ್ನ ಕೊಲ್ಲುವೆಯೇನು

ಕಿಚ್ಚು ತರಿಸುವ ಅಸೆ ಹೆಚ್ಚು ಹೇಳಲಾರೆ
ಅಚ್ಚು ಮೆಚ್ಚು ನೀನು ಈ ಧರೆಯೊಳಗೆ
ಹುಚ್ಚು ಹಿಡಿಸೋ ನಿನ್ನ ಮೋಹಕ ಮಾತಿಗೆ
ಮೆಚ್ಚಿ ಮನಸಾರೆ ಹಾರಾಡುವೆ ನಾನು

ಬಂದು ಹುಡುಗರು ನಿನ್ನ ಹೊಗಳುತ ಇರಲು
ಮಂದ ಹಾಸ ಬೀರುತ ವಿರಸದಿ ನೋಡು
ಮಂದಗಮನೆ ನಿನ್ನ ಮೃದು ಹೆಜ್ಜೆ ಇಡುತ
ಚಂದದಿ ಬಂದು ನನ್ನ ಹೃದಯವ ಸೇರು

:ಪ್ರಭಂಜನ ಮುತ್ತಿಗಿ

ಶನಿವಾರ, ಮಾರ್ಚ್ 21, 2009

ಕಣ್ಣ ನೋಟ ಸಾಲದೇ

ಆ ಕಣ್ಣ ನೋಟ ಸಾಲದೇ
ನಿನ್ನ ಪ್ರೀತಿಸಲು
ಆ ನಗುವ ಮೊಗವ ಸಾಲದೇ
ನಾ ನಿನ್ನ ಮೋಹಿಸಲು

ಕರಿ ಕೋಗಿಲೆ ಚಿಗುರು ತಿನ್ನುತ
ಶ್ರುತಿ ಸೇರಿಸಿ ಕುಹೂ ಕುಹೂ ಎಂದಿತು
ನಿನ್ನ ಧ್ವನಿಯ ಸ್ವರವ ಹೊಗಳುತ
ನಸು ನಾಚಿ ತನ್ನ ಗಾನ ನಿಲ್ಲಿಸಿತು

ಹೂ ಕಾಂತಿಗೆ ಬೆರಗಾಗುತ
ಆ ದುಂಬಿ ಮಕರಂದ ಹುಡುಕಿ ಬಂತು
ನಿನ್ನ ರೂಪಕೆ ಮನ ಸೋಲುತ
ಜೇನನ್ನೇ ಸುರಿಸಿ ಹಾರಿ ಹೋಯಿತು

ಮುತ್ಸಂಜೆಯ ದತ್ತ ಮೋಡಗಳು
ಕಾನನಕೆ ಹೊಸ ಬೆಳಕು ತಂತು
ನಿನ್ನ ಸೋಕಿದ ತಂಗಾಳಿಯು
ಮೋಹದ ಮಳೆ ಸುರಿಸಿ ಹೋಯಿತು

ನಿನ್ನ ಪ್ರೀತಿಯ ಸವಿ ಮಾತಿಗೆ
ಏನೋ ಅರಿಯದ ಉತ್ಸಾಹ ಮೂಡಿತು
ಕನಸೋ ನನಸೋ ಗೊತ್ತಾಗದ ಹಾಗೆ
ಮನಸು ಹೃದಯಕೆ ಹೊಸ ಜೀವ ತಂತು

:ಪ್ರಭಂಜನ ಮುತ್ತಿಗಿ

ನಾನು IT ನೀನೂ IT ಇದುವೇ ನಮ್ಮ ಬದುಕೂ

ಏನಾಗಿದೆ ನಮಗೆ ?
ಸರಿಯಾಗಿ ಉಟಾ ಇಲ್ಲ, ಸರಿಯಾದ ನಿದ್ದೆ ಇಲ್ಲ
ಕೆಲಸವೇ ಪ್ರಪಂಚ ಎಲ್ಲ...ಇದು ಜೀವನನ?
ಅಥವಾ ಬೇರೆ ಜೀವನ ಇದೇಯಾ?

ದಿನ ಬೆಳಿಗ್ಗೆ ಎದ್ದು.. ಬೆಡ್ ಕಾಫೀ ..
ಸೀದಾ ಬಾತ್ ರೂಮ್..ಸಿಕ್ಕ ಬಟ್ಟೆ.. ಲ್ಯಾಪ್ಟಾಪ್ ಬ್ಯಾಗು ..
ಪಿಕ್ ಅಪ್ ಪಾಯಿಂಟ್..ಆಫೀಸ್.. ಕ್ಯಾಂಟೀನ್
ಇಡ್ಲಿ - ಕಾಫೀ - ವಡ - ದೋಸೆ -
ಪೊಂಗಲೇ - ಖಾರಭಾಥ್.

ಮತ್ತದೆ ಯಾಹೂ, ಗೂಗಲ್.. ರೇಡಿಫ್ಫ್..
ಟೈಮ್ಸ್ ಆಫ್ ಇಂಡಿಯಾ....
ಎಲ್ಲದರ ಮಧ್ಯ ಮಧ್ಯ ಮೊಬೈಲ್ ಫೋನ್..ರಿಂಗಾಯನ
ಕೋಡಿಂಗ್.. ಟೆಸ್ಟಿಂಗ್.. ಕ್ವಾಲಿಟಿ ..
ಅವಾಗ ಅವಾಗ ಕಾಫೀ ಬ್ರೇಕ್..
ಸಹ ಕೆಲಸಗಾರರ ಜೊತೆ ಸ್ವಲ್ಪ ಹರಟೆ..
ಕೆಲಸಕಿಂತ ಜಾಸ್ತಿ ಮೀಟಿಂಗ್..

ಸಾಯಂಕಾಲ ಅದ್ರೆ ಸಾಕು ಕಾಂಫ್ಫೆರನ್ಚೆ ಕಾಲ್ ...
ಹೇಯ್ WHATS THE STATUS..!
ಅದು ಮುಗಿದ ಮೇಲೆ ಗಳೆಯ,, ಗೆಳತಿ..
ಗಂಡ ಹೆಂಡತಿ.. ಕಿವಿ ಕಚಾಟ....
ಎಲ್ಲಿ ಇದಿಯ.. ಯಾವಾಗ ಸಿಗೋಣ..
ಯಾವ hotel ಇತ್ಯಾದಿ...

ಮನೆಗೆ ಬಾ TV ನೋಡದು.. ಸ್ವಲ್ಪ ಉಟ..
ಮತ್ತೆ INTERNET.. MAIL
CHECK . S.M.S..
ವೀಕೆಂಡ್ ಸಿನಿಮ.. ಪಾರ್ಕ್.. ಅಥವಾ ಟ್ರಿಪ್...
ಇಸ್ಟೇನಾ ಜೀವನ!..

.ಕ್ರಿಯಾಶೀಲತೆ ಏನು ಇಲ್ಲಿ... !!!
ಎದ್ದೇಳಿ .. ಜೀವನ ಬರೇ ಇದಲ್ಲ.. !
ಬೇರೆ ಏನು ಅಂಥ ಹೇಳೋಕು ನಮಗೆ ಗೊತ್ತಿಲ್ಲ..
ನಾನು IT ನೀನೂ IT ಇದುವೇ ನಮ್ಮ ಬದುಕೂ ......

: ಪ್ರಭಂಜನ ಮುತ್ತಿಗಿ

ಶುಕ್ರವಾರ, ಮಾರ್ಚ್ 20, 2009

.ಪ್ರೀತಿಯ ಅಲೆಯಲ್ಲಿ

ಸ್ವಾತಿ ಮಳೆಹನಿಯ ಹೊಳಪಿನಂತೆ..
ತುಟಿಯಂಚಿನಲಿ ಜಾರುವ ಆ ಮಿಂಚು

ಕಾನನದ ಮಧ್ಯ ಹೊಳೆವ ಇಬ್ಬನಿಯಂತೆ
ನಾಚಿ ಮುದುಡುವ ಆ ಮುಗುಳ್ನಗೆ

ಹಸಿರ ಹಾಸಿನ ಮೇಲೆ ತಿಳಿ ಬೆಳಕು ಬಿದ್ದಂತೆ
ಬೀಳುವ ಆ ನಿನ್ನ ಒರೆ ನೋಟ!

ಹಸಿರ ಎಲೆ, ತುದಿಯಲ್ಲಿ ಹನಿ ಹಿಡಿದಂತೆ
ನೀ ನನ್ನ ಸೆರೆ ಹಿಡಿದರೆ ಹೃದಯದಲ್ಲಿ.. .!

ಜೇಡರ ಬಲೆಯಲ್ಲಿ ಸೆರೆ ಸಿಕ್ಕ ಹುಳುವಿನಂತೆ
ಪ್ರೀತಿಯ ಅಲೆಯಲ್ಲಿ ತೇಲಾದುವೆ, ಓ ಪ್ರಿಯೆ !

ನಿನ್ನ ಪ್ರೇಮದ ವರ್ಷ ಧಾರೆಯಲ್ಲಿ
ಆತ್ಮೀಯತೆ ಎಂಬ ಹೊಳೆಯಲ್ಲಿ

ಹೃದಯ ಒಡೆಯವ ವರೆಗೆ ..
ಪ್ರೀತಿಯ ರಕ್ತ ಹರಿಯುವ ವರೆಗೆ
ಕೊನೆ ಉಸಿರು ಇರುವ ವರೆಗೆ!

:ಪ್ರಭಂಜನ ಮುತ್ತಗಿ

ಎಲ್ಲಿರುವೆ ಗೆಳತಿ

ಮುಂಗಾರು ಮಳೆ ಮುಂಚೆ
ತಂಗಾಳಿ ಬೀಸಿದ ಹಾಗೆ
ತಂಪು ಕೊಡುವ ಆ ನಿನ್ನ ಮುಗುಳ್ನಗೆ!
ಇಂಪು ಸುರಿಸುವ ಸಂಗೀತದಂತೆ

ಬಂಗಾರದ ಅಂಗಡಿಯಲ್ಲಿ
ಗೊಂಬೆ ಅಲಂಕರಿಸಿದ ಹಾಗೆ
ಇಂಬು ಕೊಡುವ ಅ ನಿನ್ನ ಚಲುವು
ಸೌಂದರ್ಯಕ್ಕೆ ಕಲಶ ಇಟ್ಟಂತೆ

ಮಂಪರು ಬಂದ ಮನಸಿಗೆ
ತುಂತುರು ಹನಿ ಸುರಿಸಿ
ಕಂಪು ತುಂಬುವ ಆ ನಿನ್ನ ಪ್ರೀತಿ
ಕಂಗಳಿಗೆ ಕಾಂತಿ ಹರೆಸಿದಂತೆ

ಮಿಂಚುವ ಮೋಡಗಳ ಹಿಂದೆ
ಜಿಂಕೆಯಂತೆ ನೀ ಹಾರಿ ಮರೆಯದಾಗ
ನಿಂತ ನೀರಲ್ಲಿ ಕಲ್ಲು ಎಸೆದಂತೆ!
ಮಂಗಳನ ಅಂಗಳದಲಿ
ತಿಂಗಳು ಕಳೆದಂತೆ!

:ಪ್ರಭಂಜನ ಮುತ್ತಗಿ

ಏನ್ ಕಮ್ಮಿ

ಏನು ಕಮ್ಮಿ ಪ್ರಿಯೆ ನಿನ್ನಲ್ಲಿ ..
ಅಂದವಾದ ನಗು .. ಚಂದವಾದ ಮೊಗ
ನವಿರಾದ ನೈದಿಲೆಗೆ ಹೊಂದಿಕೊಂಡ ಕೇದಿಗೆ
ಕೆನ್ದಾವರೆಯಂಥ ಕಣ್ಣು.. ಕೇಸರಿಯ ಕಾಂತಿಯ ಮೈಬಣ್ಣ
ವಜ್ರದ ಮುಗುತಿಯೇ ಬೆರಗಾಗುವ ಸಂಪಿಗೆಯಂಥ ಮೂಗು
ಹಾಲ್ಗಲ್ಲದ ನಡುವೆ ಮಿನುಗುವ ಹವಳದ ತುಟಿ ..
ಪ್ರ್ರೀತಿ ತುಂಬಿದ ಹೃದಯ .. ಹಸನಾದ ಪಿಸುಮತು. .
ಹಿತವಾದ ನೋಟ, ಜಿಂಕೆಯಂತೆ ಓಟ ..
ಸ್ವಲ್ಪ ಕೋಪ .. ಆಮೇಲೆ ಸರಸ ಸಲ್ಲಾಪ ..
ವಾಹ್, ಇಷ್ಟು ಸುಂದರವಾದ ಗೆಳತಿ ಇರುವಾಗ ..
ನಾನು ಏನ್ ಕಮ್ಮಿ ! ???

:ಪ್ರಭಂಜನ ಮುತ್ತಗಿ

ಮನದ ಒಡತಿ

ಮುಂಜಾವಿನ ನಸು ಬಿಸಿಲಿನ ಮಂಜಿನಲ್ಲು
ಮುಸ್ಸಂಜೆಯ ನವಿರಾದ ಕಂಪಿನ ತಂಪಿನಲ್ಲೂ
ಬೆಳದಿಂಗಳ ಸುಂದರ ಮಧುರ ಕಿರಣದಲ್ಲೂ
ಮನ ಮೋಹಕ ಸಿಹಿ ತಂಗಾಲಿಯಲ್ಲೂ
ಚುಮು ಚುಮು ಕೊರೆಯುವ ಚಳಿಯಲ್ಲೂ
ಜ್ಹುಳು ಜ್ಹುಳು ಹರಿಯುವ ನೀರಿನಲ್ಲೂ
ಹಸಿರ ಕಾನನದ ದಟ್ಟ ಬೆಟ್ಟ ಗುದ್ದಗಳಲ್ಲೂ
ಭೋರ್ಗರೆವ ಕಡಲ ಅಳ ಕಿನರೆಯಲ್ಲೂ
ಶುಭ್ರವಾದ ತಿಳಿ ನೀಲಿ ಆಗಸದಲ್ಲೂ
ಸುಖ ನಿದ್ರೆಯ ಸವಿಯಾದ ಕನಸಿನಲ್ಲೂ
ನಿನ್ನನ್ನೇ ಕಾಣುವೆ ನಾನು ಎಲ್ಲೆಲ್ಲೂ,
ಗೆಳತಿ ನೀನೆ ನನ್ನ ಮನದ ಒಡತಿ
ಯಾವಾಗ ನನ್ನ ಹಿಂದೆ ನೀ ಬರುತಿ?

:ಪ್ರಭಂಜನ ಮುತ್ತಗಿ

ನಿಷ್ಕಳಂಕ ಪ್ರೀತಿ

ಕನಸಿನ ಗೆಳತಿ ...
ಯಾಕೆ ಬರೇ ಕನಸಲ್ಲಿ ಕಾಡಿಸ್ತಿ ..
ಮೊಬೈಲ್ಲಿ, ಚಾಟ್ಲಿ, ಎಸ್ಟೊಂದು ಮಾತನಾಡುತಿ ..
ಎದುರಿಗೆ ಬಾರದೆ ನನ್ನ ಗಡ ಗಡ ನಡುಗಿಸುತಿ
ಹೇಗೆ ದೂರ ಇದ್ದು ಯಾಕೆ ಪ್ರಾಣ ತಿನ್ನುತಿ?
ಹೃದಯವೆಂಬ ಅರಮನೆಗೆ ನೀ ಒಡತಿ !...
ನಿನ್ನ ಹೃದಯದಲ್ಲಿ ಎಂದು ಜಾಗ ಕೊಡುತಿ ..
ಅಸ್ಟೊಂದು ಬಳುಕುತ ನೆಡಿತಿ,
ಓರೆನೋಟದೊಂದಿಗೆ ಮುಗುಳ್ನಗುತಿ
ಪಿಸುಮತಿನಿಂದ ಆಕರ್ಷಿಸುತಿ,
ಕಣ್ಣಲ್ಲೇ ಪ್ರಪಂಚ ತೋರಿಸ್ತಿ,
ಕನಸಲ್ಲಿ, ಸ್ವಲ್ಪ ಜಾಸ್ತಿನೇ ಆಟ ಅಡಿಸ್ತಿ,
ಆಟದೊಳಗು ಎಸ್ಟೊಂದು ಮಜಾ ಕೊಡುತಿ ..
ಸುಮ್ನೆ ಕೊಡಬಾರದೇ ನಿರಂತರ ನಿಷ್ಕಳಂಕ ಪ್ರೀತಿ !???

ಕವನದ ಕನ್ನೆ

ಅಕ್ಷರಗಳು ಮರೆತು ಹೋದವು
ನೀ ಸುಳಿಯದೇ ನನ್ನ ಕಣ್ಣಲ್ಲಿ,
ಪದಪುಂಜಗಳು ಹೊಳೆಯದೆ ಹೋದವು
ನೀನಿರದೆ ನನ್ನ ಕನಸಲ್ಲಿ.
ಲೀಖನಿ ಬರೆಯದೇ ಹಾಳೆಯಲಿ ಹೊರಲಾಡಿತು
ನೀಬಾರದೆ ನನ್ನ ಮನಸಲ್ಲಿ
ಬರೆದ ಸಾಲುಗಳು ಅರ್ಥವಿಲ್ಲದೆ ಹೋದವು
ನೀನಿಲ್ಲದೆ ನನ್ನ ಹೃದಯದಲ್ಲಿ
ನಿನ್ನ ಹೊಗಳಿಕೆ ಇಲ್ಲದೆ ಸೊರಗಿ
ಕಾವ್ಯ ರಸವೇ ಹೋಯಿತು ಕವನದಲ್ಲಿ
ಬೆಳಕಾಗು ನೀ ಮನಕೆ, ಕವನದ ಕನ್ನೆ
ಬರಡಾಗದಿರಲಿ ಕವನಗಳು ಈ ಜನುಮದಲ್ಲಿ

:ಪ್ರಭಂಜನ ಮುತ್ತಗಿ

ಭಾನುವಾರ, ಮಾರ್ಚ್ 15, 2009

ಸ್ಫೂರ್ತಿಯ ಚಿಲುಮೆ

ಹೇಗೆ ಒಪ್ಪಿಸಲಿ ಪ್ರಿಯೆ
ನನ್ನ ಕವನದ ಸ್ಫೂರ್ತಿ ನೀನೆಂದು
ಗುಡ್ಡ, ಗಿಡ, ಬಳ್ಳಿ, ಹಸಿರು, ಎಲೆ, ನೀರು,
ಗಾಳಿ, ಸರೋವರ, ಪ್ರಕೃತಿಯಲ್ಲಿ ನೀನು
ತಲೆ, ಕೈ, ಕಾಲು, ನೋಟ, ಆಟ, ಮಾತು,
ಉಸಿರು, ನಡೆತೆ ಆಕರ್ಷಣೆಯಲ್ಲಿ ಇರುವೆ ನೀನು
ಅಸೆ, ಯೋಚನೆ, ಕನಸು, ಮನಸು, ಹೃದಯ,
ಪ್ರೀತಿಯಲ್ಲಿ ಇರುವ ಜೀನಿನ ಹನಿಯ ಮಧುರ ನೀನು
ಹೇಳಲಾಗದೆ ಬರೆದ ಅಕ್ಷರ, ಪದ, ಸಾಲುಗಳೇ ಕವನಗಳು
ಸಾರುತಿವೆ ಈ ಸೃಷ್ಟಿಯ ಸ್ಫೂರ್ತಿಯ ಚಿಲುಮೆ ನೀನು

ಸ್ಪ೦ದಿಸಿದೆ ನಿನಗಾಗಿ

ಮನದ ತುಡಿತಕೆ ಇ೦ದು ನನಗರಿಯದೆ..
ಒಲವೆ೦ಬ ಪ್ರೀತಿ ಸುಧೆಯ ಸುರಿಸಿ...

ಹೃದಯ ಸ್ಪ೦ದಿಸಿದೆ ಪ್ರಿಯೆ ನಿನಗಾಗಿ ....
ನಿನ್ನ ಮುಗುಳ್ನಗೆಯ ಮಾಯೆ ತು೦ಬಿಕೊ೦ದು

ಬೆಳದಿಂಗಳ ನೆನಪಿನ ಅ೦ಗಳದಿ ...
ಮನ ಸ್ಪ೦ದಿಸಿದೆ ನಲ್ಲೆ ನಿನಗಾಗಿ ....

ಸ೦ಜೆ ಮಲ್ಲಿಗೆಯ ಸುವಾಸನೆಯ ಕ೦ಪಿನಲಿ...
ಸುಖ ನಿದ್ರೆಯ ರಾತ್ರಿಯ ಸುಮಧುರ ಕನಸಿನಲಿ,

ತನು ಸ್ಪ೦ದಿಸಿದೆ ಮನದನ್ನೆ ನಿನಗಾಗಿ ....
ತನು, ಮನ, ಹೃದಯಕ್ಕೆ ಸ್ಪಂದಿಸಿದೆ

ಅ೦ತರಾಳದ ಮಾತನು ಹೊರಸುಸುತ,
ಕವಿತೆಗಳ ಬರೆದೆ ಗೆಳತಿ ನಿನಗಾಗಿ

ಜೊತೆಗೂಡಿ ನಲಿಯುವ ಬಾ

ತುಂತುರು ಮಳೆ ಮಿತವಾಗಿ ಸುರಿದ
ಹಚ್ಚ ಹಸಿರು ಪಸರಿಸಿದ ಕಾನನದಲ್ಲಿ
ಚಿಗುರು ತಳಿರು ಹೂ ಕಂಗೊಲಿಸುತಲಿವೆ
ಮನಬಿಚ್ಚಿ ಜೊತೆಗೂಡಿ ನಲಿಯುವ ಬಾ

ಮಲ್ಲಿಗೆಯ ಸುವಾಸನೆ ಹರಡುತ
ಹಾರುವ ಚಕ್ಕ ಪುಟ್ಟ ದುಂಬಿಗಳ
ಸುಸ್ವರಕೆ , ಮನಸೋತು ಆಲಿಸುತ
ಬಳಕುತ ಜೊತೆಗೊಡಿ ನರ್ತಿಸುವ ಬಾ

ಗೊಲ್ಲನ ಕೊಳಲ ದ್ವ್ಹನಿ ಇಂಪಾಗಿ
ಮೆಲ್ಲನೆ ತಂಗಾಳಿಯಲಿ ತೇಲಿ ಬರಲು
ನಿಲ್ಲದೆ ಗೋವುಗಳು ಓಡಿಬರುವಂತೆ
ಓಡುತ ಜೊತೆಗೂಡಿ ಹಾಡುವ ಬಾ

ಸಂಜೆ ಸೂರ್ಯ ಆಗಸದಲಿ ಮೆಲ್ಲನೆ ಜಾರಲು
ಚಿಲಿ ಪಿಳಿ ಕಲವರದೊಂದಿಗೆ ಹಕ್ಕಿಗಳು
ಮನೆಯರಸಿ ಹಾರಿ ಬರುವಂತೆ
ಮನವರಿಸಿ ಜೊತೆಗೂಡಿ ಹಾರುವ ಬಾ

ಸಂಧ್ಯಾಕಾಲದಿ ಮಿಂದ ಹೃದಯಗಳು
ಅಂದದಿ ಹಿತವಾಗಿ ಕೈ ಹಿಡಿದು
ಪ್ರಪಂಚವನ್ನೇ ಮೈಮರೆತು ನಿಂತಂತೆ
ಆಸೆಯಲಿ ಜೊತೆಗೂಡಿ ಸೇರುವ ಬಾ

ಚಲಿಕಾಲ

ಹೊರಗೆ ತುಂಬಾ ಚಳಿ..ಗಾಳಿ ಮಳೆ..
ಹೆ ನನ್ನ ಗೆಳತಿ..
ಬೆಚ್ಚನೆಯ ಬಟ್ಟೆ ಹೊದ್ದು ..
ಹಚ್ಹಗೆ ನಿದ್ದೆ ಮಾಡು
ನಚ್ಚಿನ ಗೆಳೆಯ ಬರಲಿ ಕನಸಲ್ಲಿ
ನಿನ್ನ ಮೆಚ್ಚಿ ಮುದ್ದಾಡಲಿ ಮನದಲ್ಲಿ
ಸಿಹಿ ಅಪ್ಪುಗೆ ಯಿಂದ ಬಿಸಿಯೇರಿಸಲಿ..
ಸವಿ ಮುತ್ತುಗಳಿಂದ ಉಸಿರೀರಿಸಲಿ..
ನಿನ್ನ ಸ್ಪರ್ಶದಿಂದ ಮತ್ತೆರಿಸಲಿ..
ಮತ್ತೆ ಮತ್ತೆ ಇದನ್ನು ನೆನಪಿಸುವ
ಈ ತರದ ಚಲಿಕಾಲ ಬರುತನೇ ಇರಲಿ..

ಕಣ್ಣು ಮುಚ್ಚಾಲೆ

ಪ್ರೀತಿಗೆ ಸಿಲುಕಿಸಿ
ಎಲ್ಲೆಲ್ಲೋ ಹುದುಕಿಸಿದೆ

ಹೃದಯ ಅನುಸರಿಸಿ
ಹಿಂದೆ ಮುಂದೆ ಓಡಿಸಿದೆ

ಮೋಹ ಆವರಿಸಿ
ಅತಿಯಾಗಿ ಪ್ರಿತಿಸಿದೆ

ಪ್ರೆಮಂಕುರಿಸಿ ಬೆನ್ನ
ಬಿಡದೆ ಯಾವಾಗಲು ಸುತ್ತದಿದೆ

ಮನಸು ಸದಾ ನಿನ್ನನ್ನೇ
ಯೋಚಿಸುವಂತೆ ಮಾಡಿದೆ

ಕಣ್ಣಲ್ಲಿ ಕಣ್ಣು ಸೇರಿಸಿ
ಅತಿವಿನಯ ತೋರಿಸಿದೆ

ಅಂದದ ಮೊಗವ ಮುದ್ದಿಸಿ
ಅನುರಾಗ ಕರುಣೆ ಉಕ್ಕಿಸಿದೆ

ಆದರು ದಾರಿ ತಪ್ಪಿಸಿ
ಊರೆಲ್ಲ ಯಾಕೆ ಓಡಾಡುವೆ?

ಶುಕ್ರವಾರ, ಮಾರ್ಚ್ 13, 2009

* ಚಾಟಿಂಗ್ ಎಫೆಕ್ಟ್*

ಚಾಟಿಂಗ್ ನಲ್ಲಿ ಒಂದು

ಹುಡ್ಗಿನ ಭೇಟಿ ಮಾಡಿದ್ದೆ
ಮೀಟಿಂಗ್ ಮಾಡೋಣ ಅಂತ
ಒಂದು ಪಾರ್ಕ್ಗೆ ಕರದಿದ್ದೆ


ಕಡು ನೀಲಿ ಬಣ್ಣದ ಪ್ಯಾಂಟು
ಧರಸಿ ವೈಟ್ ಶರ್ಟ್ ಹಾಕಿದ್ದೆ
ನಸುಗಂಪು ಕುಸುರಿ ಚೂಡಿ
ಧಿರಿಸಿ ಬರೋಕೆ ಹೇಳಿದ್ದೆ


ಕೆಲಸ ಕಾರ್ಯ ಮುಗ್ಸಿ
ರೋಜು ತೊಗಂಡು ಬಂದಿದ್ದೆ
ಕನಸ ಕಾಣೋ ಮನಸ
ಪೋಜು ಕೊಡ್ತಾ ಕಾಯ್ತಿದ್ದೆ


ಹೆಸರು ವಯಸ್ಸು ಹೈಟು
ವ್ಯೈಟ್ ಎಲ್ಲ ಕೇಳಿದ್ದೆ
ಹಸಿರ ಗಿಡದ ಮಧ್ಯ
ಗೇಟ್ ಹತ್ರ ನಿಂತಿದ್ದೆ


ಕಡ್ಲೆ ಕಾಯಿ ಮುಸುಕಿನ
ಜೋಳ ಎಲ್ಲ ತಿಂದಿದ್ದೆ
ಸೌತೆ ಕಾಯಿ ಪಾಪ್ಕಾರ್ನ್
ಆಗ್ಲೇ ಖಾಲಿ ಮಾಡಿದ್ದೆ


ಕಾದು ಕಾದು ವಾಚ್
ನೋಡಿ ಸುಸ್ತಾಗಿ ಹೋಗಿದ್ದೆ
ಕೆರೆಯ ಪಕ್ಕದ ಬೆಂಚ್ಮೇಲೆ
ಬಂದು ಮಸ್ತಾಗಿ ಮಲಗಿಬಿಟ್ಟೆ



ಯಾವಾಗ ಬಂದಳೋ ಹುಡುಗಿ
ನಂಗೆ ಗೊತ್ತೇ ಆಗಲಿಲ್ಲ
ಎದ್ದು ನೋಡೋ ಹೊತ್ತಿಗೆ
ಪರ್ಸು, ಚೈನು, ವಾಚ್ ಕಾಣಲಿಲ್ಲ!


ಪರ್ಸೂ, ವಾಚ್, ಚೈನು ಹೋಯ್ತು
ಹೋಗ್ಲಿ ಸುಮ್ನೇ ಇರಬಾರದೆ
ಮತ್ತೆ ಸಂಜೆ ಹೊಸ ಹುಡ್ಗಿ
ಜೊತೆ ಚಾಟಿಂಗ್ ಸುರುಮಾಡಿದೆ


:ಪ್ರಭಂಜನ ಮುತ್ತಿಗಿ

* ಪ್ರೀತಿಸು ಪ್ರಿಯೆ *


ಪ್ರೀತಿಸು ಪ್ರಿಯೆ ಮನವು ಸೋಲುವ ಮುನ್ನ 
ಪ್ರೆಮಿಸು ನನ್ನ ಕನಸು ಮಾಸುವ ಮುನ್ನ ||ಪ || 

ತಂಪು ತಂಗಾಳಿ ಮುದದಿ ಸೋಕಿದಂತೆ 
ನೀ ಜೊತೆ ಇದ್ದರೆ ಹಗಲು ಇರಿಳು 
ಸಂಪಾಗಿ ಸುರಿದ ಮಳೆಯಲ್ಲಿ ಮಿಂದಂತೆ 
ನಿನ್ನ ಸನಿಹ ಸದಾ ಮುದ ಕೊಡುವುದು 

ಸಾಗರದ ಅಲೆಯು ಏರಿ ಇಳಿದಂತೆ 
ನಿನ್ನ ವೈಯಾರದ ಆ ನಡುಗೆಯು 
ಇಬ್ಬನಿಯು ಮೈತಾಕಿ ಕಚಗುಳಿ ಇಟ್ಟಂತೆ 
ನಿನ್ನ ಮೋಹದ ಆ ಆಲಿಂಗನವು 

ಹೃದಯದ ಮಾತು ಮೆಲ್ಲನೆ ನುಡಿದಂತೆ 
ನೀ ನುಡಿವ ನುಡಿಯ ಅನುರಾಗವು 
ಮನಸಿನ ಪಲ್ಲವಿಯ ರಾಗಕ್ಕೆ ತಕ್ಕಂತೆ 
ನೀ ನಗುವ ನಗು ಅತಿ ಮದುರವು 

ನೀಲಿ ಆಗಸದ ತಿಳಿ ಬೆಳದಿಂಗಳಂತೆ 
ನಿನ್ನೊಳಗೇ ಇದೆ ನನ್ನ ಕನಸು 
ನದಿಗಳು ಕಡಲ ಒಡಲು ಹೊಕ್ಕಂತೆ 
ನೀ ನನ್ನ ಸೇರಿದರೆ ಎಂಥ ಸೊಗಸು 

:ಪ್ರಭಂಜನ ಮುತ್ತಿಗಿ -- 

* ನಿನ್ನ ನೆನಪು *


ಒಲವಲಿ ನಿನ್ನ ಬಯಸಿ ಹಾಡಿದೆ ಹಂಸ 
ನಲಿಯುತ ನಗುತ ನಾ ನೀಡಿದೆ ಮನಸ 

ಕನಸುಗಳ ಕಾಣುತ ಕಳೆದೆ ಪ್ರತಿ ದಿವಸ
ಮರೆತು ಹೋಯಿತೇ, ನಮ್ಮ ಪ್ರೀತಿಯ ಆ ಸರಸ..

ಸ್ವರಗಳು ಲಯದಲಿ ತುಂಬದೆ ಎದೆಯಲಿ
ಬೇರೆಯದೇ ಮನದಲಿ, ಹರಿಯದೆ ಸುಧೆಯಲಿ 

ಪ್ರೀತಿಯು ಮನಸಲಿ, ಇಲ್ಲದೆ ಹೃದಯದಿ 
ಮೂಹದಿ ನೋಡದೆ, ಕೊಲ್ಲುವೆ ಪ್ರೇಮದಿ    

ಮಿಡಿದರು ಹೃದಯ ಸೂಸದೆ ಸೃತಿಯಲಿ
ಪ್ರೀತಿಯ ನಿನಾದದ ಜೊತೆ ನುಡಿಯದ ತಂತಿ

ಅನುರಗದಿ ಕವನವ ಬರಿಯದೆ ಪದಗಳು
ಚಲಿಸದೆ ಮನದಲಿ ಹಳೆಯೇ ಬರಿದು

ಕನಸು ನೀನ್ ನನಗೆ ನೆನಪು ನಾನ್ ನಿನಗೆ
ಒರೆನೋಟದ ಜೊತೆಗೆ ಹೋಯ್ತು ಆ ಮುಗುಳ್ನಗೆ

ತಿಳಿಸಲಿ ಹೀಗೆ ಪ್ರಿಯೆ ನಿನಗೆ, ನನ್ನ ಪ್ರೇಮದ ಪರಿಯ
ಬರಿದಾಗಿ ಹೋಯಿತೇ ನಿನ್ನ ಪ್ರೀತಿಯ ಹೃದಯ

:ಪ್ರಭಂಜನ ಮುತ್ತಿಗಿ 

*****ರಸಿಕತೆ ತಂತು ****


ಇರಳು ಸರಿದ ಸರಿ ರಾತ್ರಿ ಬಾನಿನಲಿ
ತುಸು ಮೆಲ್ಲನೆ ಬೀಸುವ ಸವಿ ತಂಗಾಳಿ 

ಮಾವು, ತೆಂಗು ಗರಿ ಎಲೆಗಳ  ಕಲರವ
ಅಂಬುಧಿಯಲ್ಲಿ ತುಂಬು ಬೆಳಕು ಚಂದಿರ 

ಅಂಚು ಅಂಚಿನಲಿ ಫಳ ಫಳ ಹೊಳೆದು 
ಸಹಗಮನೆಯಂತೆ ಮಿನುಗುವ ತಾರೆಗಳು 

ರಂಭೆಯನು ನಾಚಿಸುವ ನಾರಿಯ ರೂಪದಿ
ಊರ್ವಶಿಯನು ಹೋಲುವ ಆಕಾರ ಸ್ವರೋಪದಿ 

ಜಿಂಕೆಯಂತೆ ಜಿಗಿದು, ಒಲವಿನ ಚಿತ್ರ ಬಿಡಿಸುತ 
ಬಾನಂಗಳದಿ ಮೂಡಿತು ಚಂದದ ಕೋಲ್ಮಿಂಚು 

ನಿತ್ಯ ಪ್ರೇಮಿಗಳಿಗೆ ಮಂದಹಾಸ ಮೂಡಿಸುತ 
ಆಗಸಕೂ ಶರವೇಗದಿ  ರಸಿಕತೆ ತಂತು

:ಪ್ರಭಂಜನ ಮುತ್ತಿಗಿ 

* ಮನ ತುಂಬಿ *


ಹಸಿರ ಹೂ ಗಿಡ ಮರ ಕಾಣದ ಹಾಗೆ 
ಕಣ್ಣು  ತುಂಬ ನೀ ತುಂಬಿದೆ ಹೇಗೆ?

ಪರಿಮಳ ಸೂಸುವ ಗಂಧ ತಾಕದ ಹಾಗೆ 
ಉಸಿರ  ಮಧುರ ನೀ ತುಂಬಿದೆ ಹೇಗೆ? 

ನಿನ್ನ ಚಲುವ ಸಿರಿಯ ಹೊಗಳದ ಹಾಗೆ  
ಮಾತು ಮರೆಸಿ ಮೂಗನ ಮಾಡಿದೆ ಹೇಗೆ?

ನೀರು ಹಸಿವೆ ನಿದಿರೆ ಪರಿವಿಲ್ಲದ ಹಾಗೆ  
ಉದರ ತೃಷೆಯ ನೀ ತಣಿಸಿವೆ ಹೇಗೆ?

ಹರಿವ ರಕ್ತ ಸಣ್ಣ ಕಣವು ಚಲಿಸದ ಹಾಗೆ 
ಈ ಪುಟ್ಟ ಹೃದಯ ನೀ ತುಂಬಿದೆ ಹೇಗೆ?

ಮನಸು ಬೇರೆಡೆ ಚಲಿಸದ ಹಾಗೆ 
ಕನಸು ತುಂಬ ನೀ ತುಂಬಿದೆ ಹೇಗೆ?

:ಪ್ರಭಂಜನ ಮುತ್ತಿಗಿ 

**ನೀನಿಲ್ಲದೆ **

ನೀನ್ ಇಲ್ಲದಾ ಇರುಳು,
ಜಲವಿಲ್ಲದಾ ಮರಳು 

ನಿನ್ದಲ್ಲದ ಪ್ರೀತಿ
ವ್ಯರ್ಥ ಆ ಬದುಕಿನ ರೀತಿ   

ನಿ ಬಡಿಸದ ಊಟ 
ರುಚಿ  ಇಲ್ಲದೆ ತಿನ್ನುವ ಕಾಟ 

ನಿನ್ನ ಬಳಸದ ಬಾಹು
ಗೆದ್ದಲು ಹಿಡಿದ ಗೂಡು 

ನಿನ್ನ ನೋಡದ ನಯನ 
ಚಂದ್ರ ನಿಲ್ಲದ ಗಗನ 

ನೀ ನಿರದಾ ಪ್ರಯಾಣ 
ರೆಕ್ಕೆ ಇಲ್ಲದಾ ವಿಮಾನ 

ನೀ ಓದದ ಕವನ
ಶಾಸ್ತ್ರ ವಿಲ್ಲದ ಪ್ರಮಾಣ   

ನೀ ಇರದ ಜೀವನ
ಕನಸಿಗೂ ಬರುವುದು ನಿಧನ 

ನೀ ಇರುವ  ನಾನು
ಪೂರ್ಣ ಚಂದಿರನ  ಬಾನು 

ನಾ ಇರುವ ನೀನು 
ಜೀವನ ತುಂಬಾ ಸಿಹಿ  ಜೇನು!

:ಪ್ರಭಂಜನ ಮುತ್ತಿಗಿ 

* ಪ್ರೀತಿ ಕನಸು *


ಸರ ಸರನೆ  ನೆಡೆದು  
ಬರ ಸೆಳೆದು  ನಗುವ 
ಒಲವಿನ  ಚಲುವೆ  ನೀನು 

ನಸು ನಗುತ ನಲಿದು
ಕುಣಿ ಕುಣಿದು ಬರುವ
ನಿಜ ಪ್ರೀತಿ ಕನಸು ನಿನು

ಲವ ಲವಿಕೆ ಇಂದ 
ಸ್ವರ ಹಾಡಿ ನಲಿವ  
ಹೃದಯದ ಲಯವೇ  ನೀನು 

ಪಿಸು  ಮಾತು ನುಡಿದು 
ತಂಪನ್ನು ಸುರಿಸೋ   
ಹಿತವಾದ ಮಳೆಯು ನೀನು

ಜಲ ಧಾರೆಯಂತೆ 
ಸೊಗಸಾಗಿ ಹರಿವ  ಹಸಿರ 
ಪ್ರಕೃತಿಯ ಸೊಬಗು  ನೀನು 

ತುಸು ತುಟ್ಟಿ ಆದರು
ಬುಸು ಗುಟ್ಟಿ  ತೊಡುವ  
ಸುವರ್ಣದ ತುಣುಕು  ನೀನು

ಅತಿ ಅಸೆ ಇಂದ 
ನಿನ್ನ ನೋಡುತಿರುವ
ಮೋಹನ ಮುರಳಿ ನಾನು.

:ಪ್ರಭಂಜನ ಮುತ್ತಿಗಿ 

*ಚಲುವು*

******ಚಲುವು
ಹೊಗಳಲು ನಿನ್ನ ಒಲವಿನ ಚಲುವು 
ಹುಡುಕುವೆ ಆ ಹೊಸ ಪದಗಳ ಕಡಲು  ||ಪ ||

ನಲಿತ ಹಾರುವ ಗುಂಗುರ ಮುಂಗುರುಳು
ಕಾಡಿಗೆ ತೀಡಿದ ಆ ಹುಬ್ಬಿನ ಬೆರಗು 

ಜಿಂಕೆಯ ಕಣ್ಣಿನ ಮಿಂಚಿನ  ಬೆಳಕು  
ಉಸಿರಿನ ನಾದಕ್ಕೆ ಹಿಗ್ಗುವ ಆ ಮೂಗು 

ಕುಣಿ ಬೀಳುವ ಮೃದು ಗಲ್ಲದ ಸೊಬಗು   
ಶಬ್ದದ ಅಲೆಗೆ ಬಾಗುವ ಆ ಕಿವಿಯು 

ಕೋಗಿಲೆ ಕಂಠಕ್ಕೆ ಹೊಂದುವ ಶ್ರುತಿಯು
ಕಂಪನು ಸೂಸುವ ಆ ಹವಳದ ತುಟಿಯು   

ನೀಳ ಕತ್ತಿಗೆ ಚಿಕ್ಕ ಸರ ವಜ್ರದ ಹರಳು   
ಭಾರಕ್ಕೆ ಬಾಗಿದ  ಆ ಉದ್ದದ ಜಡೆಯು 

ಸುಂದರ ಮೌನದ ಜೊತೆ ಪಿಸುಮಾತು 
ಅಂದದ ಪೂರ್ಣ ಚಂದಿರನ ಆ ಮೊಗವು 

ಸುರಿಯಲಿ ನಿನ್ನ ಪ್ರೀತಿಯ ಹೂ ಮಳೆಯು  
ಹೃದಯದಿ ಹರಿಯಲಿ ಆ ಸ್ಪೂರ್ತಿಯ ಸೆಲೆಯು

:ಪ್ರಭಂಜನ ಮುತ್ತಿಗಿ 

ಹುಡ್ಗಿನ್ ನೋಡೋಕೆ ಹೋಗಿದ್ದೆ

ಮದುವೆ ಆಗೋಣ ಅಂತ ಮೊದಲ
ಹುಡ್ಗಿನ್ ನೋಡೋಕೆ ಹೋಗಿದ್ದೆ
ಮದುವೆ ತಂಟೆ ಬೇಡ ಅಂತ
ತಪ್ಸ್ಕೊಂಡು ಓಡಿ ಬಂದು ಬಿಟ್ಟೆ

ಫೋಟೋ ದಲ್ಲಿ ಹುಡ್ಗಿನ ನೋಡಿ
ಅರ್ದ ಮನಸು ಕೊಟ್ಟುದ್ದೆ
ಮೊಬೈಲ್ಲಿ ನಲ್ಲಿ ಮಾತು ಕೇಳಿ
ಹೃದಯ ಟ್ಯೂನ್ ಮಾಡಿ ಇಟ್ಟಿದ್ದೆ

ಚಾಟಿಂಗ್ ನಲ್ಲಿ ಒಂದು ವಾರ
ಎಸ್ಟೊಂದು ಹರಟೆ ಮಾಡಿದ್ದೆ
ಅವಳ ಮೇಲೆ ಕವನ ಬರೆದು
ಕನಸು ಕೂಡ ಕಟ್ಟಿಬಿಟ್ಟೆ

ಹುಡುಗಿ ನೋಡೋ ದಿನ ಅಂತ
ಮನಸು ಹೃದಯ ಕುಣತಿತ್ತು
ಸಂಜೆ ತನಕ ಹುಡುಕಿ ಹುಡುಕಿ
ಕೊನೆಗೆ ಅವರ ಮನೆ ಸಿಕ್ಬಿಡ್ತು

ಹುಡುಗಿ ತೋರ್ಸೋ ವಿಷ್ಯ ಬಿಟ್ಟು
ಮದುವೆ ಮುಹೂರ್ತ ನೋಡಾಯ್ತು
ಮೊದಲು ಹುಡುಗಿ ಕರ್ಸಿ ಅಂತ
ಕೊನೆಗೆ ಹಠ ಹಿಡಿಯ ಬೇಕಾಯಿತು

ಅಂತು ಇಂತೂ ಹುಡುಗಿ ಬಂದ್ಲು
ಅತಿ ವೈಯಾರ ಮಾಡ್ಕೊಂಡು
ಅವಳನ್ನ ತಲೆ ಎತ್ತಿ ನೋಡೋಕೆ
ಆಗದೆ ನಾಚಿಕೆಯಿಂದ ಕುತ್ಕೊಂಡೆ

ಸೀರೆ ಉದ್ಸಿ ಮೇಕಪ್ ಜೊತೆಗೆ
ಮಲ್ಲಿಗೆ ಹೂವು ಬಳೆ ತೊಡ್ಸಿದ್ರು
ಕೈಯಲ್ಲಿ ಸ್ವೀಟ್ ತಟ್ಟೆ ಹಿಡ್ಕೊಂಡು
ನಕ್ಕಗ್ಲೆ ಅರ್ಧ ಸತ್ಯ ಗೊತ್ತಾಯ್ತು .

ದೃಷ್ಟಿ ಗೋಡೆ ಮೇಲೆ ಇದ್ರೂ
ಮಾತು ನನ್ನ ಜೊತೆಗೆ ನೆಡೆತ್ತಿತು
ಉಬ್ಬು ಹಲ್ಲ ಮುಖ ನೋಡಿ
ತುರಿಮಣೆ ಕನಸು ಬಿದ್ದುಬಿಡ್ತು

ಜಾತಕ ಮಾಚ್ ಅಂತ ಬಂದು
ತಲೆನೋವೆ ಆಗಿಹೋಯ್ತು
ಸ್ವಲ್ಪ ಹೊತ್ತು ಅಲ್ಲೇ ಇದ್ರೆ
ಜೀವನ ಕೊರಗೋ ಹಗೆ ಅಗ್ತಿತು

:ಪ್ರಭಂಜನ ಮುತ್ತಿಗಿ

ತೇಲುತ ಸಾಗುವ

ಮೊದಲ ರಾತ್ರಿಯಲಿ
ಕನಸಿನ ಲೋಕದಲಿ
ತೇಲುವ ಸುಖ ನಿದ್ರೆ 
ಪ್ರಿಯೆ ನಮಗೆ ಬಾರದಿರಲಿ 

ಆ ಮಧು ಮಂಚದಲಿ 
ಮಲ್ಲಿಗೆಯ ಕಂಪಿನಲಿ 
ಮಾತನಾಡುವ ಸಮಯ 
ನಲ್ಲೆ ನಮಗೆ ಬಾರದಿರಲಿ 

ಚುಮು ಚುಮು ಚಳಿಯಲ್ಲಿ 
ಬೀಸುವ ತಂಗಾಳಿಯಲ್ಲಿ 
ದೂರ ದೂರ ಇರುವ ಕಷ್ಟ 
ಚಲುವೆ ನಮಗೆ ಬಾರದಿರಲಿ 

ಅತ್ತೆ ನಾದಿನಿ ಕಾಟ 
ಇತ್ತ ಮಾವನ ಆಟ 
ತಪ್ಪಿಸಿ ಓಡಾಡುವ ಪಾಠ 
ಗೆಳತಿ ನಮಗೆ ಬಾರದಿರಲಿ 

ಮೇಲೆ ಆಕಾಶದಲಿ 
ಆ ನದಿ ನೀರಿನಲಿ 
ತೇಲುತ ಸಾಗುವ 
ನಾವು ಜೀವನ ಪಯಣದಲಿ

:ಪ್ರಭಂಜನ ಮುತ್ತಿಗಿ

ಕಳೆದು ಹೋಗುವಂತೆ ಮಾಡು

ಕಳೆದು ಹೋಗುವಂತೆ ಮಾಡು 
ನಿನ್ನ  ಹೊಗಳಿಕೆಯ  ಪ್ರೀತಿಯಲ್ಲಿ 

ಮನಸು  ಹಾರುವಂತೆ  ಮಾಡು  
ನಿನ್ನ  ಸವಿ ಮಧುರ  ಮಾತಿನಲ್ಲಿ !

ಕನಸು ಕಾಣುವಂತೆ ಮಾಡು
ನಿನ್ನ ಪ್ರೇಮದ ಪರಿಯಲ್ಲಿ 

ಕಣ್ಣು  ಚಲಿಸದಂತೆ  ಮಾಡು 
ನಿನ್ನ  ನೋಟದ  ಆಕರ್ಷಣೆಯಲ್ಲಿ 

ಮಾತು  ಮರೆಯುವಂತೆ  ಮಾಡು  
ನಿನ್ನ  ಹೃದಯ  ಬೆರಸಿ  ನನ್ನಲ್ಲಿ 

ಹೃದಯ ಬಡಿತ ಏರು ವಂತೆ ಮಾಡು
ನಿನ್ನ ಮುದ್ದಿನ ಆ ಸಿಹಿ ಸವಿಯಲ್ಲಿ !!

ನನ್ನ  ಜೊತೆ ಇರುವಂತೆ ಮಾಡು  
ನಿನ್ನ  ಪ್ರೀತಿ ಪ್ರೇಮ ಪ್ರಣಯದಲ್ಲಿ!  ;)

:ಪ್ರಭಂಜನ ಮುತ್ತಿಗಿ

ಸಾಧ್ಯವೇ ರಾಧೆ!

ಎಷ್ಟು ಚಲುವೆ ನನ್ನ ಈ ಮುದ್ದು ರಾಧೆ
ಸೃಷ್ಟಿಸಿದ ನಾನೇ ಇಂದು  ಮಾರು ಹೋದೆ ||ಪ||

ಆಕಳು ಕಾಯುವ ನೆಪದಲಿ ಯಮುನೆಯ 
ದಡದಲ್ಲಿ ಕೊಳಲನು ಉದುತ ಕುಳಿತು 
ಮುರುಳಿಯ ನಾದದಿ ಹೊಮ್ಮುವ ಸ್ವರದಲಿ
ನಿನ್ನ ಕಂಡಿದ್ದು ಹೇಳದಿರಲು ಸಾಧ್ಯವೇ ರಾಧೆ! ೧ 

ಗೋವರ್ಧನ ಗಿರಿಯ ಎತ್ತಿದ ಸಮಯದಿ
ಕಾಳಿಂಗನ ಹೆಡೆಯ ಮೇಲೆ ಕುಣಿದ ಕ್ಷಣದಲಿ
ಕಂಸನ ಸೊಕ್ಕನ್ನು ಅಡಗಿಸಿ ತುಳಿದಾಗ 
ನಿನ್ನ ನೆನಪು ಇರದಿರಲು ಸಾಧ್ಯವೇ ರಾಧೆ ! ೨ 

ನನಗಾಗಿ ಪ್ರತಿ ದಿನವು ನಿರಂತರ  ಜಪಿಸಿ 
ಹಗಲು ಇರಿಳು ನಾ ಬರುವುದೇ ನಿರೀಕ್ಷಿಸಿ 
ಕಾದು ಕಾದು ಕುಳಿತ ನಿನ್ನ ಮೋಹದ ಪ್ರೀತಿಗೆ 
ಮನಸು ಸೋಲದಿರಲು ನನ್ನಿಂದ ಸಾಧ್ಯವೇ ರಾಧೆ!  ೩ 

ನಯನ ಮನೋಹರ ಮಧುರೆಯ ಸೊಬಗಲಿ 
ಎಲ್ಲೆಡೆ ನಿನ್ನ ಕಾಣುವ  ನೆನಪಿನ ಕಡಲು 
ತುಂಬಿ ಬರುತಲಿದೆ ನನ್ನ ಪ್ರೀತಿಯ ಒಡಲು  
ನಿನ್ನ  ಅರಸಿ ನಾ ಬಾರದಿರಲು ಸಾಧ್ಯವೇ ರಾಧೆ! ೪ 

ಕಣ್ಣಿನ ಕಾಂತಿಯಲಿ ಹೊಳೆವ ಮಿಂಚು ನೀನು 
ಮೋಹಕ ನಗುವಿನಲ್ಲಿ ಇರುವ ಚಲುವೆ ನೀನು 
ಕನಸು ಮನಸು ಹೃದಯದಲ್ಲಿ ತುಂಬಿರುವೆ ನೀನು  
ನೀ ಇಲ್ಲದೆ ನಾ ಇರಲು ಸಾಧ್ಯವೇ ರಾಧೆ!

:ಪ್ರಭಂಜನ ಮುತ್ತಿಗಿ

ನನ್ನದಲ್ಲವೇ

ನಿನ್ನ ಪ್ರೀತಿಯ ಸೆಲೆಯು 
ಹೀಗೆ ಹರಿಯುತಲಿರಲು
ಹೇಗೆ ನಿದ್ರಿಸಲಿ ಚಲುವೆ 

ನಿನ್ನ ಸಣ್ಣ ಆಸೆಗಳ 
ಹೇಗೆ ತೀರಿಸಲೆಂದು 
ಹಗಲು ಇರಿಲು ನಾನು ಹುಡುಕುತಿರುವೆ 

ಮೊನ್ನೆ  ನಡು ರಾತ್ರಿಯಲ್ಲಿ 
ನನ್ನ ನೋಡಲು ಬಯಸಿ
ನೀ ಕರೆದಾಗ ನಾ ಬರಲಿಲ್ಲವೇ 

ನದಿಯ ಜ್ಹುಳು ನಾದದಲಿ 
ಮನಸು ಹರಿಯಲು ಬಿಟ್ಟು
ಕನಸು ಕಾಣುತ  ಮೈ ಮರೆಯಲಿಲ್ಲವೇ 

ಬೆಟ್ಟದ ತುದಿ ಅಂಚಿನಲಿ 
ನೆಟ್ಟು ಕಣ್ಣ ನಿನ್ನ ಮೇಲೆ 
ಗಾಳಿಗೆ ತೇಲಿ ನಾ ಉರಿಳಿ ಬೀಳಲಿಲ್ಲವೇ 

ಸಾಗರದ ಏರು ಅಲೆಗಳಲಿ 
ಮಧುರ ಆ ಕ್ಷಣದಲ್ಲಿ 
ಲಯಕೆ ತಕ್ಕ ಹಗೆ ನನ್ನ ಕುಣಿಸಲಿಲ್ಲವೇ
 
ಪ್ರೇಮಿಗಳ ದಿನದಂದು
ಮುತ್ತು ಕೊಡುವೆನು ಎಂದು
ಕರೆಸಿ ಮುತ್ತಿನ ಹಾರ ನೀ ಕೊಡಲಿಲ್ಲವೇ 

ಚಿಗುರು ತಿನ್ನ ಬೇಕೆಂದು 
ಮರವ ಏರಿಸಿ ಕೊನೆಗೆ
ಕೋತಿ ಎಂದು ಕಲ್ಲು ನೀ ಹೊದೆಯಲಿಲ್ಲವೇ 
     
ನಿನ್ನ ಜೀವನ ಪೂರ್ತಿ 
ಹೇಗೆ ಇರಲಿ ನಗುವು ನಲಿವು 
ಅದರ ಸವಿ ಸವಿವ ಬಯಕೆ ನನ್ನದಲ್ಲವೇ

:ಪ್ರಭಂಜನ ಮುತ್ತಿಗಿ 

ಯೋಚಿಸದೆ

ಯೋಚಿಸದೆ ನಿನಗೆ ಮನಸನು ಕೊಟ್ಟೆ
ಸವಿ ಪ್ರೀತಿಯ ಗುಂಗಿನಲಿ
ಮರೆಮಾಚದೆ ನಾ ನನ್ನ ಹೃದಯದ ಮಾತು
ಹೇಳದೆ  ಎದುರಿನಲಿ 

ಆ ನೋಟದ ಹಿಂದಿನ ಮೋಹವ  
ನಾ ಅರಿಯದೆ ಹೋದೆ  ಇರುಳಿನಲಿ 
ನೆರಳಲ್ಲಿ ನಿನ್ನಯ ಬಿಂಬವ ನಾ
ಹುಡುಕುತ ಹೊರಟೆ ಹಗಲಿನಲಿ  

ಸಿಹಿ ಮಾತಿನ ದ್ವನಿಯ ಆರಿಸಿ
ನಡೆದೆ ಕವಲೋಡೆದಾ  ದಾರಿಯಲಿ 
ನಿದಿರೆ ಹಸಿವೆ ತೃಷೆ ಪರಿವಿಲ್ಲದೆ  
ಇರುವೆ ನಿನ್ನ  ಕಾಣದೆ  ಕನಸಿನಲಿ  

ಮರೆಯಾಗಿ ಹೋದೆ ನನ್ನ ಪ್ರೀತಿಯ
ಮೊಳಕೆ ವಡೆವ ಆ  ಸಮಯದಲಿ 
ಎಲ್ಲಿ ಹೀಗೆ ಹುಡುಕಲಿ ನನ್ನ ಸ್ಪೂರ್ತಿಯ 
ಚಿಲುಮೆ  ಈ ವಿಶಾಲ ಪ್ರಪಂಚದಲಿ      

ಕಾಯುವೆ ನಾ ಉಸಿರುವ ವರೆಗೂ 
ಮನಸನು ಬಿಚ್ಹಿ ಮಾತನಾಡಲು ನಿನ್ನಲ್ಲಿ 
ನನಸಲ್ಲೂ  ಹಿತವಾಗಿ  ಬಾಳುವ ಬಾ 
ಜೊತೆಗೊಡಿ ಪ್ರೀತಿಯ ಈ ಪಯಣದಲಿ 

:ಪ್ರಭಂಜನ ಮುತ್ತಿಗಿ