ಮೊದ ಮೊದಲು ನಾವಿಬ್ಬರು ಜೊತೆಗಿರಲು ಒಟ್ಟಿಗೆ ..
ಮಧುಚಂದ್ರಕೆ ಹೋದೆವು ಹಚ್ಚ ಹಸಿರಿನ ಪಚ್ಚಿಮ ಘಾಟಿಗೆ
ಹೆಜ್ಜೆ ಹಾಕಿದೆವು ಮಂಜು ಮುಸುಕಿದ ಸೋಂದ ಕಾನನಕೆ
ಅ ಪ್ರಶಾಂತ ಕಾಡಿನ ತಪೋವನದಲಿ ಗುರುಗಳ ದರ್ಶನಕೆ
ಅಡಿಕೆ ತೆಂಗು ಬಾಳೆ ಮೆಣಸು ಏಲಕ್ಕಿ ಬೆಳೆವ ತೋಟಕೆ
ಹೋಗಿ ನಲಿದೆವು ಮುತ್ಸಂಜೆಯ ಆ ಚಳಿಯು ಅಲ್ಹಾದಕೆ
ಬಳಕುತ ಹರಿಯುತಿತ್ತು ಶಾಲ್ಮಲಿ ಹಸಿರವನದ ಮಧ್ಯಕೆ
ಅ ಸೊಗಸು ನೋಡುತ ಮೈ ಮನ ಮರೆತೆವು ನದಿಅಂಚಿಗೆ
ಹೊಸವರ್ಷ ಸ್ವಾಗತಿಸಲು ತೆರಳಿದೆವು ಮಲ್ಪೆ ಸಮುದ್ರಕೆ
ತಿಳಿ ಹಾಲಂತೆ ತಂಗಾಳಿ ಸಹಿತ ಅಲೆ ಮುತ್ತಿಕುತ್ತಿತು ಕಾಲಿಗೆ
ಪ್ರಭಂಜನ ಬಾಲ್ಯದ ಮಹಿಮೆ ಕಾಣಲು ಹೋದೆವು ಪಾಜಕಾಕ್ಕೆ
ಕಡಗೋಲು ಪಿಡಿದ ಕೃಷ್ಣನ ದರ್ಶನವಾಯಿತು ಪ್ರಜ್ಞ ಜೋತೆಗೆ
ಮಲಗುವ ಮಂಚದ ವಾಹನದಲಿ ಪಯಣಿಸಿದೆವು ಊರಿಗೆ
ಬೆಳಗಾಗುವುದರೊಳಗೆ ಮಧು ಯಾತ್ರೆ ಮುಗಿಸಿ ಸೇರಿಸೆವು ಮನೆಗೆ
ಚಂದಿರನ ಬೆಳದಿಂಗಲಿ ಜೇನು ಹುಡುಕಲು ಹೋದೆವು ಕಾಡಿಗೆ
ಸವಿ ಜೇನು ಸವಿದು ಮರಳಿ ಬಂದೆವು ನಗುತ ನಾಡಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ