ಭಾನುವಾರ, ಡಿಸೆಂಬರ್ 20, 2009

ಮದುವೆ ಮಾಡ್ಸು

ತುಂಬಾ ತುಂಟಿ ಹುಡುಗಿ ಇವಳಮ್ಮ
ಇವಳ ಜೊತೆ ಲಗ್ನ ಮಾಡ್ಸು ಬೇಗ ಬಾರಮ್ಮ
ಬಲು ಹುಚ್ಹು ಹುಡ್ಗ ನೀ ಕೇಳೋ ಭೂಪ
ನಿನ್ನ ಮುಖಕೆ ಮದುವೆ ಬೇಕೇ! ಹೋಗೋ ಬೆಪ್ಪ

ಮುಂದೆ ಹೋದರೆ ಅವಳು ನನ್ನ ಹಿಂದೆ ನಡೆವಳು
ಮುಂದೆ ಬಿಟ್ಟರೆ ಅವಳ ತಿರುಗಿ ನೋಡಿ ನಗುವಳು
ಬಿಟ್ಟು ಬಟ್ಟಲ ಕಣ್ಣ, ಇಟ್ಟು ಪ್ರೀತಿಯ ಮನಸ
ಕೊಟ್ಟು ಪ್ರೇಮದ ಪತ್ರ, ನಾಚಿ ನೀರಾಗುವಳು

ಕನಡಿಲಿ ಒಂದ್ಸರಿ ನೋಡ್ಕೋ ಹೋಗೋ ಮುಖವ
ನಸುಗಪ್ಪು ನಾಚುವ ಚಲುವ, ಆಸ್ಟ ದಂತ ವಕ್ರನೆ
ಹುಡುಗಿ ಮೇಲೆ ಮನಸು ಇಟ್ಟು, ಕನಸ ಕಾಣೋದು ಬಿಟ್ಟು
ದುಡಿಯೋ ದಾರಿ ಹುಡುಕೋ ಹೋಗೋ ಬೆಪ್ಪ ಲೆ ತಿಪ್ಪ

ಚಂದುಲ್ಲೇ ಚಲುವೆ ಅವಳು ಮುದ್ದಾದ ಮೊಗದವಳು
ಕುಡಿ ನೋಟದ ಅಂಚಿನಲ್ಲಿ ಹರಣಿಗಳ ಹೋಲುವಳು
ಇಂಥ ಬೆಡಗಿಯ ಜೊತೆ, ಇಟ್ಟು ಮದುವೆಯ ಮುಹೂರ್ತ
ಕಟ್ಟಿಸಿ ತಾಳಿ ಅಕ್ಷತೆ ಹಾಕಿ ಹರಸಮ್ಮ ನನ್ನಮ್ಮ ನೀ

ಶನಿ ಗ್ರಹ ನಿನ್ನ ಹೆಡೆತಲೆ ಮೇಲೆ ಕೂತಿದ್ದಾನೆ
ರಾಹು ಕೇತು ಕುಜ ಎಲ್ಲ ಅಡ್ಡ ದಿಡ್ಡಿ ನಿಂತಿದ್ದಾರೆ
ಗ್ರಹಣ ಹಿಡಿದ ನಿನ್ನ ಮುಖದ ಸೊಬಗ ನೋಡಿ
ಪಾಣಿಗ್ರಹಣಕ್ಕೆ ಬರುವಳೇನೋ? ಬೆಪ್ಪ ಹೋಗಪ್ಪ

ಸುನಡತೆಯ ಸುಂದರಿ, ಚಂದಿರನ ಹೊಲುವಳು
ಕನಸಲಿ ನನಸಲ್ಲು ನನ್ನ ಅವರಸಿ ನಿಂತಿಹಳು
ಸೇರಿಸಿ ಕಣ್ಣಲಿ ಕಣ್ಣು, ಸರಸಿ ಮುಂಗುರುಳ
ಕರೆಸಿ ಗುಲಾಬಿ ಗುಚ್ಛ ಕೊಟ್ಟು ಕೊಂಡಾಡುವಳು

ಆಟ ಆಡಿಸುತ ಹಾಗೆ ಮಾಡಿದಾಳೆ ನಿನ್ನ ತಿಪ್ಪ
ತಿಳಿಯದೆ ಹೋದೆ ನೀ ಈ ಭೂಮಿಲಿ ಬಲು ಬೆಪ್ಪ
ಹುಚ್ಚು ಬಿಡೋ ವರ್ಗು ಮದುವೆ ಆಗೋದಿಲ್ಲ
ಮದುವೆ ಅಗೋ ವರ್ಗು ಹುಚ್ಚು ಹೋಗೋದಿಲ್ಲ
ಸುಮ್ನೆ ಯಾಕೋ ತಲೆ ತಿಂತಿ ಹೋಗಪ್ಪ ನೀ ಬೆಪ್ಪ

ಮಂಗಳವಾರ, ಡಿಸೆಂಬರ್ 8, 2009

ಸ್ಕಂದಗಿರಿ

ಇಬ್ಬನಿ ತುಂಬಿದ ಬೆಟ್ಟದಲಿ
ಮೊಬ್ಬು ಬೆಳಕಿನ ಆ ಸಮಯದಲಿ
ತಬ್ಬಿಕೊಂಡು ಮೋಡಗಳ ಆಕಾಶದಲಿ
ಉಬ್ಬಿ ಉದಯಿಸಿದೆ ನೀ ಪೂರ್ವದಲಿ

ತುಂಬಿ ತುಳುಕಿದ ಆ ಹಾಲ್ಗಡಲಲ್ಲಿ
ಚಂದದಿ ಬೀಸುವ ಮಧುರ ತಂಗಾಳಿಯಲಿ
ಅಂಬುಜ ಬಳಕುತ ನಾಚುತ ಇಣುಕುತಲಿ
ಹೊಂಬಣ್ಣವ ಬೀರುತ ಬಂದ ಈ ಭುವಿಯಲ್ಲಿ

ಕಣ್ಣ ಮುಚ್ಚಾಲೆ ಮೋಡದಲ್ಲಿ ಆಡುತಲಿ
ಸಣ್ಣ ಬೆಳಕಿನ ಕಿರಣವ ಹರಡುತಲಿ
ಬಣ್ಣ ಬಣ್ಣವ ತುಂಬುತ ಆಗಸದಲ್ಲಿ
ಸ್ವರ್ಗವನ್ನೇ ಸೃಷ್ಟಿಸಿದೆ ಈ ಧರೆಯಲ್ಲಿ

ಸ್ಕಂದ ಗಿರಿಯ ಹಸಿರ ತಪ್ಪಲಲ್ಲಿ
ಮಂಜು ಆವರಿಸಿದ ಮುಂಜಾವಿನಲಿ
ಬಂದ ಜನರನು ಕೈಬೀಸಿ ಕರಿಯುತಲಿ
ಹೊಸ ದಿಗಂತವ ತೋರುತ ಹರುಷದಲಿ
ತುಂಬಿದೇ ಉತ್ಸಾಹ ನಮ್ಮ ಮನಸಲಿ