ಶುಕ್ರವಾರ, ಮಾರ್ಚ್ 20, 2009

ಎಲ್ಲಿರುವೆ ಗೆಳತಿ

ಮುಂಗಾರು ಮಳೆ ಮುಂಚೆ
ತಂಗಾಳಿ ಬೀಸಿದ ಹಾಗೆ
ತಂಪು ಕೊಡುವ ಆ ನಿನ್ನ ಮುಗುಳ್ನಗೆ!
ಇಂಪು ಸುರಿಸುವ ಸಂಗೀತದಂತೆ

ಬಂಗಾರದ ಅಂಗಡಿಯಲ್ಲಿ
ಗೊಂಬೆ ಅಲಂಕರಿಸಿದ ಹಾಗೆ
ಇಂಬು ಕೊಡುವ ಅ ನಿನ್ನ ಚಲುವು
ಸೌಂದರ್ಯಕ್ಕೆ ಕಲಶ ಇಟ್ಟಂತೆ

ಮಂಪರು ಬಂದ ಮನಸಿಗೆ
ತುಂತುರು ಹನಿ ಸುರಿಸಿ
ಕಂಪು ತುಂಬುವ ಆ ನಿನ್ನ ಪ್ರೀತಿ
ಕಂಗಳಿಗೆ ಕಾಂತಿ ಹರೆಸಿದಂತೆ

ಮಿಂಚುವ ಮೋಡಗಳ ಹಿಂದೆ
ಜಿಂಕೆಯಂತೆ ನೀ ಹಾರಿ ಮರೆಯದಾಗ
ನಿಂತ ನೀರಲ್ಲಿ ಕಲ್ಲು ಎಸೆದಂತೆ!
ಮಂಗಳನ ಅಂಗಳದಲಿ
ತಿಂಗಳು ಕಳೆದಂತೆ!

:ಪ್ರಭಂಜನ ಮುತ್ತಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ