ಶುಕ್ರವಾರ, ಮಾರ್ಚ್ 20, 2009

ಏನ್ ಕಮ್ಮಿ

ಏನು ಕಮ್ಮಿ ಪ್ರಿಯೆ ನಿನ್ನಲ್ಲಿ ..
ಅಂದವಾದ ನಗು .. ಚಂದವಾದ ಮೊಗ
ನವಿರಾದ ನೈದಿಲೆಗೆ ಹೊಂದಿಕೊಂಡ ಕೇದಿಗೆ
ಕೆನ್ದಾವರೆಯಂಥ ಕಣ್ಣು.. ಕೇಸರಿಯ ಕಾಂತಿಯ ಮೈಬಣ್ಣ
ವಜ್ರದ ಮುಗುತಿಯೇ ಬೆರಗಾಗುವ ಸಂಪಿಗೆಯಂಥ ಮೂಗು
ಹಾಲ್ಗಲ್ಲದ ನಡುವೆ ಮಿನುಗುವ ಹವಳದ ತುಟಿ ..
ಪ್ರ್ರೀತಿ ತುಂಬಿದ ಹೃದಯ .. ಹಸನಾದ ಪಿಸುಮತು. .
ಹಿತವಾದ ನೋಟ, ಜಿಂಕೆಯಂತೆ ಓಟ ..
ಸ್ವಲ್ಪ ಕೋಪ .. ಆಮೇಲೆ ಸರಸ ಸಲ್ಲಾಪ ..
ವಾಹ್, ಇಷ್ಟು ಸುಂದರವಾದ ಗೆಳತಿ ಇರುವಾಗ ..
ನಾನು ಏನ್ ಕಮ್ಮಿ ! ???

:ಪ್ರಭಂಜನ ಮುತ್ತಗಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ