ಹಾಕಿಬಿಡು ಬಣ್ಣಗಳ
ರಾಶಿ ಎಲ್ಲೆಲ್ಲೂ
ಚಲುವ ಅಳಿದು ಹಾಕಿ
ಗೆಲವು ಎಲ್ಲೆಲ್ಲೂ ನಲಿವು
ಚಂದಿರನ ಪ್ರಭೆಯಲ್ಲಿ
ಹಾಲಿನಂತಹ ಬಿಳಿ ಬಣ್ಣ
ಸೂರ್ಯನಲ್ಲಿ ನಸುಗಂಪು
ಮನಸೆಳೆಯುತಿದೆ ನೋಡಣ್ಣ
ಚಿಗುರಿನಲಿ ಹಸಿರ ಎಲೆ
ಹೂವಿನೊಳಗೊಂದು ಬಣ್ಣ
ಕಾಯಿ ಹಣ್ಣಾದಂತೆ ಬಣ್ಣ
ಬದಲಿಸಿ ಮನಸೆಳೆವುದು ನೋಡಣ್ಣ
ಪ್ರಕೃತಿ ತುಂಬಾ ತುಂಬಿದೆ
ಬಣ್ಣಗಳ ಚಲುವ ಚಿತ್ತಾರ
ಕಾಮ ನಿಗ್ರಹ ಸಂಕೇತ
ಹೋಳಿ ಹಬ್ಬದಾ ಸಾರ
ಹೋಳಿ ಹಬ್ಬದಾ ಸಾರ
ಆಡಿಬಿಡು ಬಣ್ಣಗಳ
ಜೊತೆ ಪ್ರೀತಿಯ ಚಲ್ಲಟ,
ಒಳ ಕಣ್ಣ ತೆರೆದು ಜೀವಿಸು
ಜೊತೆ ಪ್ರೀತಿಯ ಚಲ್ಲಟ,
ಒಳ ಕಣ್ಣ ತೆರೆದು ಜೀವಿಸು
ತುಂಬಿ ಬಣ್ಣಗಳ ನೋಟ
-ಪ್ರಭಂಜನ.
ಹೋಲಿ ಬಣ್ಣದೋಕುಳಿ ಮೂಲಕ ಐಕ್ಯತೆ ಮತ್ತು ಜಾತಿವಾದ ತೊಲಗಿಸುವ ಹಬ್ಬವನ್ನಾಗಿಸುವ ತಮ್ಮ ಆಶಯಕ್ಕೆ ಶರಣು.
ಪ್ರತ್ಯುತ್ತರಅಳಿಸಿ