ಹೇಗೆ ಒಪ್ಪಿಸಲಿ ಪ್ರಿಯೆ
ನನ್ನ ಕವನದ ಸ್ಫೂರ್ತಿ ನೀನೆಂದು
ಗುಡ್ಡ, ಗಿಡ, ಬಳ್ಳಿ, ಹಸಿರು, ಎಲೆ, ನೀರು,
ಗಾಳಿ, ಸರೋವರ, ಪ್ರಕೃತಿಯಲ್ಲಿ ನೀನು
ತಲೆ, ಕೈ, ಕಾಲು, ನೋಟ, ಆಟ, ಮಾತು,
ಉಸಿರು, ನಡೆತೆ ಆಕರ್ಷಣೆಯಲ್ಲಿ ಇರುವೆ ನೀನು
ಅಸೆ, ಯೋಚನೆ, ಕನಸು, ಮನಸು, ಹೃದಯ,
ಪ್ರೀತಿಯಲ್ಲಿ ಇರುವ ಜೀನಿನ ಹನಿಯ ಮಧುರ ನೀನು
ಹೇಳಲಾಗದೆ ಬರೆದ ಅಕ್ಷರ, ಪದ, ಸಾಲುಗಳೇ ಕವನಗಳು
ಸಾರುತಿವೆ ಈ ಸೃಷ್ಟಿಯ ಸ್ಫೂರ್ತಿಯ ಚಿಲುಮೆ ನೀನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ