ಶುಕ್ರವಾರ, ಮಾರ್ಚ್ 13, 2009

* ಮನ ತುಂಬಿ *


ಹಸಿರ ಹೂ ಗಿಡ ಮರ ಕಾಣದ ಹಾಗೆ 
ಕಣ್ಣು  ತುಂಬ ನೀ ತುಂಬಿದೆ ಹೇಗೆ?

ಪರಿಮಳ ಸೂಸುವ ಗಂಧ ತಾಕದ ಹಾಗೆ 
ಉಸಿರ  ಮಧುರ ನೀ ತುಂಬಿದೆ ಹೇಗೆ? 

ನಿನ್ನ ಚಲುವ ಸಿರಿಯ ಹೊಗಳದ ಹಾಗೆ  
ಮಾತು ಮರೆಸಿ ಮೂಗನ ಮಾಡಿದೆ ಹೇಗೆ?

ನೀರು ಹಸಿವೆ ನಿದಿರೆ ಪರಿವಿಲ್ಲದ ಹಾಗೆ  
ಉದರ ತೃಷೆಯ ನೀ ತಣಿಸಿವೆ ಹೇಗೆ?

ಹರಿವ ರಕ್ತ ಸಣ್ಣ ಕಣವು ಚಲಿಸದ ಹಾಗೆ 
ಈ ಪುಟ್ಟ ಹೃದಯ ನೀ ತುಂಬಿದೆ ಹೇಗೆ?

ಮನಸು ಬೇರೆಡೆ ಚಲಿಸದ ಹಾಗೆ 
ಕನಸು ತುಂಬ ನೀ ತುಂಬಿದೆ ಹೇಗೆ?

:ಪ್ರಭಂಜನ ಮುತ್ತಿಗಿ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ