ಮಂಗಳವಾರ, ನವೆಂಬರ್ 9, 2021

ಜಿ ವಿ ಸಾರ್

 ಜಿ ವಿ ಸಾರ್

ತುಂಬು 

ಜೀವನ ನೆಡೆಸಿದಿರಿ

ನೂರಾಎಂಟು 


ಕನ್ನಡಕ್ಕೆ 

ತುಂಬಿ ಕೊಟ್ಟಿರಿ 

ಪದಪುಂಜಗಳ 

ನಿಘಂಟು ಒಟ್ಟು ಎಂಟು 


ಸಂಶೋಧನೆ  ವಿಮರ್ಶೆ 

ಬರವಣಿಗೆಯಲ್ಲಿ 

ಸಾರಸ್ವತ  ಲೋಕಕ್ಕೆ 

ತುಂಬಿ ಕೊಟ್ಟಿರಿ 

ನೂರಾರು ಪುಸ್ತಕಗಳ ಗಂಟು 


ನಿಮ್ಮ ಪದಗಳದ್ದೇ

 ನುಡಿನಮನ 

ಕನ್ನಡದ್ದೇ 

ವಿದಾಯದಲ್ಲೂ ನಂಟು. .

ಬುಧವಾರ, ಅಕ್ಟೋಬರ್ 6, 2021

ನಂಟು ಕಗ್ಗಂಟು

 *ನಂಟು ಕಗ್ಗಂಟು*


ಮೋಡ ಮುಚ್ಚಿದ ಬಾನಿನಲ್ಲಿ
ಕತ್ತಲೆಯ ಭ್ರಮೆಯ ಹಿಂದೆ
ಸೂರ್ಯನೊಬ್ಬನು ಇದ್ದಾನೆ
ಅವ ಒಬ್ಬನಿದ್ದರೂ ತಾನು
ಪ್ರಪಂಚ ನಿಯಂತ್ರಿಸುತ್ತಾನೆ


ಸೂರ್ಯನಿಲ್ಲದೆ ಚಂದ್ರನಿಲ್ಲ
ಚಂದ್ರನಿಲ್ಲದೆ ಸಾಗರ ಉಕ್ಕುವುದಿಲ್ಲ
ಈ ನಂಟು ಕಗ್ಗಂಟು ಇಂದು ನಿನ್ನೆಯದಲ್ಲ
ಒಂದು ಬಿಟ್ಟು ಮತ್ತೊಂದಿಲ್ಲ ಎಲ್ಲಾ
ಗುರುತ್ವಾಕರ್ಷಣೆ ಯಲ್ಲಿಟ್ಟಿದ್ದಾನೆ.


ಸೂರ್ಯನ ಕಾಂತಿ ನೀ
ಪ್ರತಿಫಲನದ ಚಂದ್ರ ನಾ
ಭೂಮಿ, ಪ್ರಾಣಿ, ಪಕ್ಷಿಗಗಳಿಗೂ
ಬೇಕು ಸೂರ್ಯ ಚಂದ್ರರ ಬೆಳಕು
ಉಳಿದಿದ್ದು ದೇವರು ನೋಡಿಕೊಳ್ಳುತ್ತಾನೆ.

ಶನಿವಾರ, ಸೆಪ್ಟೆಂಬರ್ 4, 2021

*ಪಿ ಟಿ ಮೇಸ್ಟ್ರು*

ಬಂದ್ರು ಬಂದ್ರು ಪಿ ಟಿ ಮೇಸ್ಟ್ರು
ಪೀಪಿ ಹಿಡ್ಕೊಂಡು

ಸುತ್ತ ಮುತ್ತ ಹುಡುಗರ ದಂಡುಗೆ
ಲಗಾಟೆ  ಹೊಡಿಸ್ಕೊಂಡು

ಕೋಳಿ ತರದೇ ಕೂಗ್ಸಿ
ಕೋಕೋ ಆಟ ಆಡಿಸ್ಕೊಂಡು

ಗೆಜ್ಜೆ ಇರದೇ ಜಿಮ್ ಜಿಮ್
ಶಬ್ದದಿ ಲೇಜಿಮ್ ಮಾಡಿಸ್ಕೊಂಡು

ಫುಟ್ ಬಾಲ್, ಶಟಲ್, ವಾಲಿಬಾಲ್
ಆಡಿಸ್ತಿದ್ರು ಚಂಡು ಹಿಡ್ಕೊಂಡು

ಪಿ ಟಿ ಮೇಸ್ಟ್ರು ಬಹಳ ಶಿಸ್ತು
ಬರ್ತಿದ್ರು ಬಿಳೀ ಬಟ್ಟೆಹಾಕೊಂಡು

ನೋಡೋಕೆ ಖಡಕ್  ಇಲ್ಲದಿದ್ರೂ 
ಬರ್ತಿದ್ವಿ  ಅವರ  ಶೀಟಿಗೆ  ಹೆದರ್ಕೊಂಡು

ಗುರುವಾರ, ಆಗಸ್ಟ್ 5, 2021

ಅರಳದ ಹೂ


ಹೂ ಗಳಿವೆ ಕೊಳ್ಳ ಬನ್ನಿ,
ಕೊಳ್ಳಬಹುದು ಗುಲಾಬಿ
ಅರಳಿದನಂತರವೂ,

ಅರಳದ ಮುಂಚೆ ಬರಿಗಾಲಲ್ಲಿ
ನೆಡೆದು ಮಾರಬೇಕು ನಾನು
ಮುಳ್ಳು ತರಿದರು ಸರಿಯೇ
ಕೊಳ್ಳೇನೆನ್ನದಿರಿ ನೀವು

ತಳ್ಳ ಗಾಡಿಯಂದದಿ ಜೀವ
ಕೊಳ್ಳಿ ಹಿಡಿದಂತಾಗಿದೆ
ಕೊಂಡು ಕೊಂಡರೆ ಹೂ
ಕಳೆವುದು ದಿನದ ಹಸಿವೆ

ಕೆಂಪು ವಾಹನದಾ ಬಣ್ಣ
ಕಂಪು ಗುಲಾಬಿಯು ಚನ್ನ
ಮಂಪರಿನಲ್ಲಿದ್ದರೆ ಎದ್ದು ಕೊಳ್ಳಿ
ತಂಪಾಗಿ ಹರಿಸುವುದು ಕರುಳ ಬಳ್ಳಿ

ಬೇಕಿತ್ತಾ ಈ ನೆನಪು

 ಬೇಕಿತ್ತಾ ಈ ನೆನಪು 
ನೀ ದೂರ ಹೋದ ಕ್ಷಣವೇ  pa

ಹೃದಯವು  ಜರಿದರೇನಂತೆ 
ಮನಸು ನಿನ್ನೆ ಬಯಸುತಿದೆ  apa

ನೀ ನೆಡೆದ ಕೋಣೆಯಲಿ 
ಹಳೆ ನೆನಪು  ಕಾಡುತಿವೆ
ನಿಂತಿರುವ ಕನ್ನಡಿಯೊಳಗೆ 
ನೀ ಇರುವಂತೆ ತೋರುತಿದೆ 1

ನೀ ನೆಟ್ಟ ಹೂ ಗಿಡಗಳಲಿ 
ಹೂಗಳು ನಗದೇ ಬಾಡುತಿವೆ   
ನಾ ಹೇಗೆ ನಗಲಿ ನೀನಿಲ್ಲದೆ 
ನಿನಗಾಗಿ ಇಂದಿಗೂ ಕಾದಿರುವೆ 2 
 
ನಿನ್ನಂತೆಯೇ ನೆಡೆವಾಗ 
ಈ ಜಗಳಗ  ಬೇಕಿತ್ತೇ  
ವೈಮನಸ್ಸು ಏನೇ ಇರಲಿ 
ಬಂದುಬಿಡು ಕಾಯುತಿರುವೆ  3

ಅಂದಿನ ಶಾಲೆ*


ಶಾಲೆಯೇ ನನ್ನ ಮನೆ 
ಮನೆಯೇ ನನ್ನ ಶಾಲೆ 
ಆಗಿತ್ತು  ಅದೆಷ್ಟು ಚನ್ನ 

ನೆಲವೇ ನಮ್ಮ ಬೆಂಚು 
ಬೆಂಚೆ ರಟ್ಟಿನ ಅಂಚು 
ಹಾಕಿದ್ದೆ ಅರ್ಧ ಚಣ್ಣ 

ಓದಿ ಮಲಗಿದರೂ 
ಮಲಗಿ ಓದಿದರೂ 
ಬೈಯುವರಿರಲಿಲ್ಲ ಅಣ್ಣ 

ಆಟದ ಜೊತೆ ಪಾಠ 
ಪಾಠದ ಜೊತೆ ಆಟ 
ಸವಿನೆನಪು ಇಂದಿಗೂ ಚಿನ್ನ 

ಸೋಮವಾರ, ಆಗಸ್ಟ್ 2, 2021

ಕಳೆದು ಹೋಗು ನೀ

ಕಳೆದು ಹೋಗು ನೀ 
ಅರ್ಧ ರಾತ್ರಿಯಲಿ 
ಕನಸುಗಳ ಸೀಳಿ 
ನನಸುಗಳ ಬೆಳಕಲ್ಲಿ 

ಪೂರ್ಣ ಚಂದಿರನು 
ಸಣ್ಣವನಾಗಿಹನಲ್ಲಿ 
ತಿಳಿ ಹಾಲಿನಂತಹ 
ಬಿಳಿಯ ನಗುವ ಚಲ್ಲಿ 

ಅಂಬುಜನ ನೋಡುತ 
ಮುಂಗುರುಳು ಹಾರುತಲಿ 
ತನುವತಬ್ಬಿ ಮೈಮರೆತೆ 
ಮುಗುಳ್ನಗೆಯ ಚಲ್ಲಿ 

ಜಿಂಕೆಯನ್ನು ಏರಿ 
ಬಂದಿರುವರಾರಲ್ಲಿ 
ಮೋಹ ಪಾಶವ ಎಸೆದು 
ಸೆಳೆಯುತಿಹ  ಅಸೆಚಲ್ಲಿ  
 
ಬಚ್ಚಿಟ್ಟಿರುವೆ ನಿನ್ನ  
ನನ್ನ ಪುಟ್ಟ ಹೃದಯದಲ್ಲಿ 
ತೋರಿಸಿಬಿಡು ನಿನ್ನ ಬಿಂಬ 
ಆ ಪೂರ್ಣಚಂದಿರನಲ್ಲಿ 

ಶನಿವಾರ, ಜುಲೈ 3, 2021

ಜರಿದ ಮನಸು


ಕನಸುಗಳು ಖಾಲಿಯಾಗಿವೆ 
ಮನಸು ಜರಿದ ಮೇಲೆ 
ಅಣುಕಿಸುತಿದೆ ಬಿಂಬಗಳು  
ಕನ್ನಡಿ ಒಡೆದು ಹೋದಮೇಲೆ 

ಇಳೆ ಬೆಳೆಯಲು ಮಳೆಯೇ ಬೇಕು  
ಮಳೆ ಮೋಡದ ಮುಲಾಜು 
ತಾಳ್ಮೆ ಸಾಗರದ ಆಳ ಅಗಲ  
ಅಳಿದು ತೂಗಿ ಮೋಡ  ಪ್ರಸವ 

ಕಳೆದುಕೊಳ್ಳುವುದೇನಿದೆ 
ಕೊಳೆತು ಹೋದಮೇಲೆ ಪ್ರೀತಿ
ಕಳೆ ತೆಗಿಯದಷ್ಟು ಬೆಳೆದಿದೆ 
ಕಾಳು ಬೆಳೆಯಲು ಸಾಧ್ಯವೇ  
 
ಹಣ ಚೆಲ್ಲಬಹುದು ಸಿಗದು
ಋಣವಿರಬೇಕು ಪ್ರೀತಿಗೂ 
ಒಣ ಮರ ತಾನಾಗೇ ಚಿಗುರದು  
ಹೆಣದ ಮೇಲೆ ಹಣ ಬಿದ್ದಂತೆ 

ಹುಟ್ಟು ಸಾವು ಒಂದು ಚಕ್ರ 
ಬಿಟ್ಟು ಬದುಕುವುದು  ವಕ್ರ 
ಕೊಟ್ಟು ಕ್ಕೊಳ್ಳುವುದು ಪ್ರೀತಿಗೆ ಹತ್ರ 
ಪಟ್ಟು ಹಿಡಿದರೆ ಬರೀ  ಅನರ್ಥ. 

ಮುಗುಳ್ನಗೆ

 ನಿನ್ನ ಮುಗುಳ್ನಗೆ ಅರಿತು 
ಕಣ್ಣು ಏನೋ ಹೇಳುತಿದೆ 
ಕಿವಿಯು ಕೇಳಲು ಕಾದಿದೆ   
ಪ್ರೀತಿಗೆ ಅದೊಂದೇ ಸಾಲದೇ 

ನೋಟದಳೊಂದು ನೋಟ 
ಚಿತ್ರಪಟವ ಬಿಡಿಸಿದೆ 
ತುಟಿಯು ತೆರೆಯದಂತೆ  ಏನೋ 
ವಿಷಯ ಚನ್ನಾಗಿ ತಿಳಿಸಿದೆ 

ಉಸಿರ ಏರಿಳಿತಕೆ ಹೃದಯ 
ತುಸು ಲಯದಲಿ ಮಿಡಿದಿದೆ 
ಹಸನಾಗಿ ಹಾರಿದ ನೈದಿಲೆ 
ಬೆಸುಗೆ ಬಯಸಿ ಕರೆದಿದೆ 

ಬಾಗಿದ ಹುಬ್ಬು ಏರಿ ಏನೋ 
ಆಶ್ಚರ್ಯವಾ ಸೂಸಿದೆ 
ಜೊತೆಗೆ ಏರಿ ಜೊತೆಗೆ ಇಳಿವ 
ಜೋಡಿ ನಾವೆಂದು ಸಾರಿವೆ 

ಇಲ್ಲಿಂದಲೇ

 ರೆಕ್ಕೆ ಬಿಚ್ಚಿ ಹಾರಿ ಹೋಗು

ಚಿಕ್ಕ ಆಳಕೂ ಇಲ್ಲದೆ   ।।  ಪ ।। 

ಕೊಕ್ಕೆಯಲ್ಲಿ ಪ್ರೀತಿ ಪತ್ರವಿದೆ     
ಅಕ್ಕ ಪಕ್ಕ ಯಾರನ್ನು ನೋಡದೆ  ।\ ಆ ಪ ।।

ನಿನ್ನ ಕಣ್ಣಿಗೂ ಕಾಣದ ನೋಟ 
ನನ್ನ ಹೃದಯ  ನೇರ ಕೊಡುತಿದೆ 
ಆದರೂ ಹುಡುಕು ಪಕ್ಷಿನೋಟ ತೀಕ್ಷ್ಣ 
ಬಿಡದೆ ಪ್ರಯತ್ನಿಸುವೆ ನಾ ಇಲ್ಲಿಂದಲೇ   1

ಸಿಕ್ಕರೆ ಹೇಳಿಬಿಡು ಅವಳಿಗೊಮ್ಮೆ 
ತೆಕ್ಕೆಯಲ್ಲಿ ಸೆರೆಹಿಡಿವೆ  ಎಂದಿನಂತೆ
ಪಕ್ವವಾಗುವುದು  ಓದಿದರೆ ಪತ್ರ   
ಮಿಕ್ಕಿದ್ದೆಲ್ಲಾ ನಿಭಾಯಿಸುವೆ  ನಾ ಇಲ್ಲಿಂದಲೇ  2

ಅರಿಯಳಾದಳು ಕ್ರೋದ ತುಂಬಿದ 
ನಾರಿ ಜರಿದು ದೂರ ಹೋದಳು 
ಕರೆಮಾಡಿಸು ಕಿವಿ ಆಲಿಸುವಂತೆ    
ಬರುವಂತೆ ಮಾಡುವೆ ನಾ ಇಲ್ಲಿಂದಲೇ  3

ಸೋಮವಾರ, ಜೂನ್ 14, 2021

ಮೌನ

 ಎಲ್ಲಿರುವೆ ಮೌನ 

ಬೇಕಾಗಿದೆ ನಿನ್ನ ಧ್ಯಾನ 
ಮನಸಿನ ಬೇಗುದಿಗೆ 
ತಳಮಳ ನಿಲ್ಲದು ನೀ 
ಇದ್ದರೂ ಮೌನ 

ಹುಟ್ಟುವ ಮೊದಲು 
ಹೊಟ್ಟೆಯೊಳಗೆ ವೇದನೆ ಮೌನ 
ಹೊರಗೆ ಬಂದರೂ   
ಹಿಡಿದಿಟ್ಟು ಸಹಿಸಬೇಕಾಗಿದೆ  ಮೌನ 

ತಾಪತ್ರಯಗಳ ಎದುರಿಸಿದೆ 
ತನ್ಮಯತೆಯಿಂದ ಇದ್ದರೂ 
ತಂತಿ ಹರಿದಂತೆ ಜೀವನ  
ತಾಳಬೇಕಿದೆ ಇದ್ದು ಮೌನ 

ನನ್ನನು ಒತ್ತೆಇಟ್ಟುಕೊಳ್ಳಲಾರೆ 
ನಿನ್ನ ಎಷ್ಟೇ ಆರಾಧಿಸಿದರು 
ನೊಂದರೂ ಸರಿಯೇ ನೋಡು  
ನಾಗಲಾಗದೆ ವಹಿಸಬೇಕಿದೆ ಮೌನ. 

ಬುಧವಾರ, ಏಪ್ರಿಲ್ 21, 2021

ತ್ರಿ-ಕಾಲ-ಸತ್ಯ!

 ಕಾಲ ಒಂದಿತ್ತು
ಕಾಲುಗಳು ನಿಂತಿತ್ತು
ಕಾಲ ಬಂದಾಯ್ತು 
ಕಾಲು ಮುರುದು ಬಿದ್ಧೋಯಿತ್ತು 

ಕೂತರೇನಂತೆ ಕೆಳಗೆ
ಕೊಳೆತು ನಾರದಂತೆ 
ಕುಳಿತವರು ನನ್ನ ಮೇಲೆ
ಕಳೆತು ಮಾಜಿ ಆದಂತೆ 

ಕಳೆದು ಹೋದ ಸಮಯ
ಕೊಳ್ಳಲು ಮತ್ತೆ ಆಗೋದಿಲ್ಲ 
ಕಳಚಿದ ಕುರ್ಚಿ ಕಾಲುಗಳು
ಕೂಡಿಸಿದರೂ ಮುಂಚಿನಂತಾಗೋದಿಲ್ಲ 

ಮಂಗಳವಾರ, ಏಪ್ರಿಲ್ 20, 2021

ಹೃದಯ ಮಿಡಿದಿದೆ

 ನನ್ನ ಉಸಿರಲಿ
ನಿನ್ನ ಹೆಸರಿದೆ, 

ನನ್ನ ಕನಸಲೂ
ದಿನವೂ ನಿನ್ನ ಹುಡುಕಿದೆ.
ಹೃದಯ ಮಿಡಿದಿದೆ.

ನಿನ್ನ ಹೆಸರ ನಾನು ಕೂಗಿ ಕರೆಯುವೆ
ನೆನೆದು ನನ್ನ ನೀನು, ಬಾ ಇಲ್ಲಿಗೆ
ಮಂಜು ಮುಸುಕಿದೆ ಇಲ್ಲಿ, ನನ್ನ ಪ್ರೀತಿಗೆ

ದೂರ ಹೋದರೇನಂತೆ ಇರುವೆ ಇಲ್ಲಿಯೇ
ಬೇರೆ ಯಾಗುವ ಮಾತಿಲ್ಲ ಬಾ ಮೆಲ್ಲಗೆ
ನಿನಗಾಗಿ ಹಗಳಿರಿಲು  ನಾ ಕಾಯುವೆ 

ಎಲ್ಲಿದ್ದರೇನಂತೆ ನೀ ಇರುವಲ್ಲಿಯೇ
ಒಮ್ಮೆ ಕೂಗು ನನ್ನ ಬರುವೆ ಅಲ್ಲಿಗೆ
ಎದೆಯೊಳಗೆ ಬಚ್ಚಿಟ್ಟು  ನಿನ್ನ ಪ್ರೀತಿಸುವೆ .

ಗುರುವಾರ, ಮಾರ್ಚ್ 18, 2021

* ವಿಷಕಂಠ *


ಎಂಥ ವಿಚಿತ್ರ ಸಂಸಾರ 
ನಿನ್ನದು ವಿಷಕಂಠ  
ವೈರುಧ್ಯದ ಮಧ್ಯ 
ಬದುಕುವುದೇ ವೈಕುಂಠ. 

ಬೂದಿ ಸರ್ಪವ  ಸುತ್ತಿ  
ಕಟ್ಟಿದ ಜಡೆಯಲ್ಲಿ ನೃತ್ಯ 
ಮಹಾ ಸುಂದರಿ ಗೌರಿ 
ಹೇಗೆ ಒಪ್ಪಿದಳು ಈ ಸಾಂಗತ್ಯ
 
ಆರುಮುಖದವನಿಗೆ 
ಸಾವಿರಾರು ಕಣ್ಣುಗಳ ವಾಹನ 
ಸೊಂಡಿಲು ಮುಖದವನಿಗೆ 
ಇಲಿ ಬೇಕಿತ್ತಾ ಅಷ್ಟು ನಿಧಾನ 

ಹಾವು ಇಲಿಯ ಹಿಡಿದರೆ 
ನವಿಲು ಹಾವ ಹಿಡಿವುದು 
ಹುಲಿಯು ವೃಷಭ ಹಿಡಿದರೆ 
ಏನು ಮಾಡುವಿರಿ ಓಡಾಡಲು  

ಜಗದ ಬೂದಿ ತೊಳೆಯಬಹುದು
 ನೀ ಜಟೆಯ ಬಿಚ್ಚಿ ಗಂಗೆ ಹರಿದರೆ 
ಮನಸ ಕೊಳೆ ತೊಳೆದುಬಿಡು 
ಮನುಜ ಬರುವ ಸರಿದಾರಿಗೆ 

ಸೋಮವಾರ, ಮಾರ್ಚ್ 8, 2021

*ಕನ್ನಡತಿ**


ಹೃದಯದರಮನೆಯೊಳಗೆ 
ಇಟ್ಟಿರುವೆ ನಿನ್ನದೊಂದು ಚಿತ್ರ 
ಬರೆದು ಬಿಡಲೇ ಅದರ ಹಿಂದೆ 
ಕಾವ್ಯಾತ್ಮಕ  ಪ್ರೇಮ ಪತ್ರ 

ಮನಸ್ಸು ಕುಣಿದಾಡುವುದು 
ಬಂದರೆ ನಿ ನನ್ನ ಹತ್ರ
ಬೆರೆಳುಗಳು ಶರವೇಗದಿ ಓಡುವವು 
ಹೊಸ ಸೃಷ್ಟಿಗೆ ನೀನೇ  ಪಾತ್ರ  

ಚಿತ್ರ ಪತ್ರಗಳೊಳಗಿಟ್ಟು 
ಹುಡುಕುವುದೇ ವಿಚಿತ್ರ 
ಹುಡುಕುವೆ ಹಾದಿ ಬೀದಿಗಳಲ್ಲಿ 
ಸಿಗುವೆ ರಾಜ್ಯೋತ್ಸವದ ದಿನ ಮಾತ್ರ 

- ಪ್ರಭಂಜನ ಮುತ್ತಿಗಿ 

ಒನಕೆ ಎತ್ತಿ ಕುಟ್ಟು

 ಬಾ ಒನಕೆ ಎತ್ತಿ  ಕುಟ್ಟು . ಪ. 


ಗದ್ದೆ ಇಂದೆದ್ದು ಬಂದ ಭತ್ತದ  
ಬಿದ್ದ ಕಾಳು ಅವಲಕ್ಕಿ ಯಾಗುವಂತೆ  . ಆ. ಪ 

ಒಬ್ಬರಾದ ಮೇಲೆ ಒಬ್ಬರು 
ಹಾಕೋಣ ಬಾ ಒನಕೆ ಏಟು 
ಕುಟ್ಟುವ ನೆಪದಲ್ಲಿ ಸೇರಿ 
ಆಡುವ ಒನಕೆ ಕುಣಿಕೆಆಟ ನೋಡು.   ೧

ಹಾಡೋಣ ಸುಗ್ಗಿ ಹಾಡು 
ಆಗದು ಕೆಲಸದ ಸುಸ್ತು ನೋಡು 
ಬಿದ್ದ ಅವಲಕ್ಕಿ ಸೋಸಿ ಒಣಗಿಸುವೆ 
ನೀಗುವುದು ಎಲ್ಲರ  ಹೊಟ್ಟೆ ಪಾಡು  ೩ 

ಕಷ್ಟ ಗಳನ್ನೆಲ್ಲಾ ಕುಟ್ಟಿ ಪುಡಿಮಾಡಿ
ಒಟ್ಟಾಗಿ ಎಸೆದು ಬಿಡುವ ನಾವು 
ಎದುರಿಸುವಾ ಜೀವನ ಗುಡಿಸಲು
ಅರಮನೆ ಯಾಗುವುದು ಬೇಗ  ನೋಡು   ೩

ಕವನ ಸುನಾಮಿ

 ಬೋರ್
ಆಗದಿರಲಿ
ಎಂದು
ಬರೆದಿಲ್ಲ
ಕವನ
ಎಂದುಕೊಳ್ಳಬೇಡಿ 

ಊರ್ 
ನಲ್ಲಿರಲಿಲ್ಲ 
ಎಂದು
ಬರೆದಿಲ್ಲ 
ಕವನ 
ಸುನಾಮಿಗೆ ಕಾದುನೋಡಿ 

ಹೆಣ್ಣೇ

ಧರೆಗಿಳಿದ
ನನ್ನ ಕಣ್ಣು
ನೋಡಿದ್ದು 
ನಿನ್ನನ್ನೇ 


ಧರಣಿಯಂತೆ 
ತಪ್ಪು ಒಪ್ಪುಗಳ 
ತಿದ್ದಿ ಬೆಳೆಸಿತು   
ನಿನ್ನ ಕ್ಷಮೆ
 
ಕತ್ತಿಗಿಂತಲೂ ತೀಕ್ಷ್ಣ 
ಕಣ್ಣಲ್ಲಿ ಕಣ್ಣಿಟ್ಟು 
ಪ್ರೀತಿಸಿದಾಗ 
ಆ ನಿನ್ನ ಕಣ್ಣೇ 

ಎಲ್ಲಡೆ ಇರುವ  
ಗಾಳಿಯಂತೆ  
ಕಾಪಾಡುವ 
ಜಗಜ್ಜೀವನ ಕಣ್ಣೇ
ಅದುವೇ ನೀ ಹೆಣ್ಣೇ   

ಬುಧವಾರ, ಫೆಬ್ರವರಿ 3, 2021

*ಕತ್ತಲೆ ಬೆಳಕು*:


ಮುಚ್ಚದೆ ಕಣ್ಣನು
ನೋಡು ಬೆಳಕನ್ನು
ಆಡುವ ಬಾ ನಾವಿನ್ನೂ 

ಕಣ್ಣನು ಮಿಟುಕಿಸಿ
ಸುತ್ತಲೂ ಭ್ರಮೆಯಲ್ಲಿ
ಕಾಣುವ ವೃತ್ತಗಳ ಸೊಬಗನ್ನು 

ಕತ್ತಲೆಯೊಳಗೆ 
ರಕ್ತದ ಕೆಂಪನು
ತೋರಿಸುವೆ ಅದರಂದವನ್ನು 

ಅಕ್ಕಯ್ಯ ನೀನು ಬಾ
ಚಾದರದೊಳಗೆ
ಬಿಡುವುದಿಲ್ಲ ಬೇರೆ ಯಾರನ್ನು

ಗೊತ್ತಾಗುವುದಿಲ್ಲ
ದೊಡ್ಡವರಿಗೆಲ್ಲ
ನಾವಾಡುವ ಆಟದ ಪರಿ ಇನ್ನೂ