ಬಾ ಒನಕೆ ಎತ್ತಿ ಕುಟ್ಟು . ಪ.
ಗದ್ದೆ ಇಂದೆದ್ದು ಬಂದ ಭತ್ತದ
ಬಿದ್ದ ಕಾಳು ಅವಲಕ್ಕಿ ಯಾಗುವಂತೆ . ಆ. ಪ
ಒಬ್ಬರಾದ ಮೇಲೆ ಒಬ್ಬರು
ಹಾಕೋಣ ಬಾ ಒನಕೆ ಏಟು
ಕುಟ್ಟುವ ನೆಪದಲ್ಲಿ ಸೇರಿ
ಆಡುವ ಒನಕೆ ಕುಣಿಕೆಆಟ ನೋಡು. ೧
ಹಾಡೋಣ ಸುಗ್ಗಿ ಹಾಡು
ಆಗದು ಕೆಲಸದ ಸುಸ್ತು ನೋಡು
ಬಿದ್ದ ಅವಲಕ್ಕಿ ಸೋಸಿ ಒಣಗಿಸುವೆ
ನೀಗುವುದು ಎಲ್ಲರ ಹೊಟ್ಟೆ ಪಾಡು ೩
ಕಷ್ಟ ಗಳನ್ನೆಲ್ಲಾ ಕುಟ್ಟಿ ಪುಡಿಮಾಡಿ
ಒಟ್ಟಾಗಿ ಎಸೆದು ಬಿಡುವ ನಾವು
ಎದುರಿಸುವಾ ಜೀವನ ಗುಡಿಸಲು
ಅರಮನೆ ಯಾಗುವುದು ಬೇಗ ನೋಡು ೩
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ