ಶನಿವಾರ, ಜುಲೈ 3, 2021

ಮುಗುಳ್ನಗೆ

 ನಿನ್ನ ಮುಗುಳ್ನಗೆ ಅರಿತು 
ಕಣ್ಣು ಏನೋ ಹೇಳುತಿದೆ 
ಕಿವಿಯು ಕೇಳಲು ಕಾದಿದೆ   
ಪ್ರೀತಿಗೆ ಅದೊಂದೇ ಸಾಲದೇ 

ನೋಟದಳೊಂದು ನೋಟ 
ಚಿತ್ರಪಟವ ಬಿಡಿಸಿದೆ 
ತುಟಿಯು ತೆರೆಯದಂತೆ  ಏನೋ 
ವಿಷಯ ಚನ್ನಾಗಿ ತಿಳಿಸಿದೆ 

ಉಸಿರ ಏರಿಳಿತಕೆ ಹೃದಯ 
ತುಸು ಲಯದಲಿ ಮಿಡಿದಿದೆ 
ಹಸನಾಗಿ ಹಾರಿದ ನೈದಿಲೆ 
ಬೆಸುಗೆ ಬಯಸಿ ಕರೆದಿದೆ 

ಬಾಗಿದ ಹುಬ್ಬು ಏರಿ ಏನೋ 
ಆಶ್ಚರ್ಯವಾ ಸೂಸಿದೆ 
ಜೊತೆಗೆ ಏರಿ ಜೊತೆಗೆ ಇಳಿವ 
ಜೋಡಿ ನಾವೆಂದು ಸಾರಿವೆ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ