ಇಟ್ಟಿರುವೆ ನಿನ್ನದೊಂದು ಚಿತ್ರ
ಬರೆದು ಬಿಡಲೇ ಅದರ ಹಿಂದೆ
ಕಾವ್ಯಾತ್ಮಕ ಪ್ರೇಮ ಪತ್ರ
ಮನಸ್ಸು ಕುಣಿದಾಡುವುದು
ಬಂದರೆ ನಿ ನನ್ನ ಹತ್ರ
ಬೆರೆಳುಗಳು ಶರವೇಗದಿ ಓಡುವವು
ಹೊಸ ಸೃಷ್ಟಿಗೆ ನೀನೇ ಪಾತ್ರ
ಚಿತ್ರ ಪತ್ರಗಳೊಳಗಿಟ್ಟು
ಹುಡುಕುವುದೇ ವಿಚಿತ್ರ
ಹುಡುಕುವೆ ಹಾದಿ ಬೀದಿಗಳಲ್ಲಿ
ಸಿಗುವೆ ರಾಜ್ಯೋತ್ಸವದ ದಿನ ಮಾತ್ರ
- ಪ್ರಭಂಜನ ಮುತ್ತಿಗಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ