ನಿನ್ನದು ವಿಷಕಂಠ
ವೈರುಧ್ಯದ ಮಧ್ಯ
ಬದುಕುವುದೇ ವೈಕುಂಠ.
ಬೂದಿ ಸರ್ಪವ ಸುತ್ತಿ
ಕಟ್ಟಿದ ಜಡೆಯಲ್ಲಿ ನೃತ್ಯ
ಮಹಾ ಸುಂದರಿ ಗೌರಿ
ಹೇಗೆ ಒಪ್ಪಿದಳು ಈ ಸಾಂಗತ್ಯ
ಆರುಮುಖದವನಿಗೆ
ಸಾವಿರಾರು ಕಣ್ಣುಗಳ ವಾಹನ
ಸೊಂಡಿಲು ಮುಖದವನಿಗೆ
ಇಲಿ ಬೇಕಿತ್ತಾ ಅಷ್ಟು ನಿಧಾನ
ಹಾವು ಇಲಿಯ ಹಿಡಿದರೆ
ನವಿಲು ಹಾವ ಹಿಡಿವುದು
ಹುಲಿಯು ವೃಷಭ ಹಿಡಿದರೆ
ಏನು ಮಾಡುವಿರಿ ಓಡಾಡಲು
ಜಗದ ಬೂದಿ ತೊಳೆಯಬಹುದು
ನೀ ಜಟೆಯ ಬಿಚ್ಚಿ ಗಂಗೆ ಹರಿದರೆ
ಮನಸ ಕೊಳೆ ತೊಳೆದುಬಿಡು
ಮನುಜ ಬರುವ ಸರಿದಾರಿಗೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ