ಬೇಕಿತ್ತಾ ಈ ನೆನಪು
ನೀ ದೂರ ಹೋದ ಕ್ಷಣವೇ pa
ಹೃದಯವು ಜರಿದರೇನಂತೆ
ಮನಸು ನಿನ್ನೆ ಬಯಸುತಿದೆ apa
ನೀ ನೆಡೆದ ಕೋಣೆಯಲಿ
ಹಳೆ ನೆನಪು ಕಾಡುತಿವೆ
ನಿಂತಿರುವ ಕನ್ನಡಿಯೊಳಗೆ
ನೀ ಇರುವಂತೆ ತೋರುತಿದೆ 1
ನೀ ನೆಟ್ಟ ಹೂ ಗಿಡಗಳಲಿ
ಹೂಗಳು ನಗದೇ ಬಾಡುತಿವೆ
ನಾ ಹೇಗೆ ನಗಲಿ ನೀನಿಲ್ಲದೆ
ನಿನಗಾಗಿ ಇಂದಿಗೂ ಕಾದಿರುವೆ 2
ನಿನ್ನಂತೆಯೇ ನೆಡೆವಾಗ
ಈ ಜಗಳಗ ಬೇಕಿತ್ತೇ
ವೈಮನಸ್ಸು ಏನೇ ಇರಲಿ
ಬಂದುಬಿಡು ಕಾಯುತಿರುವೆ 3
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ