ಕಳೆದು ಹೋಗು ನೀ
ಅರ್ಧ ರಾತ್ರಿಯಲಿ
ಕನಸುಗಳ ಸೀಳಿ
ನನಸುಗಳ ಬೆಳಕಲ್ಲಿ
ಪೂರ್ಣ ಚಂದಿರನು
ಸಣ್ಣವನಾಗಿಹನಲ್ಲಿ
ತಿಳಿ ಹಾಲಿನಂತಹ
ಬಿಳಿಯ ನಗುವ ಚಲ್ಲಿ
ಅಂಬುಜನ ನೋಡುತ
ಮುಂಗುರುಳು ಹಾರುತಲಿ
ತನುವತಬ್ಬಿ ಮೈಮರೆತೆ
ಮುಗುಳ್ನಗೆಯ ಚಲ್ಲಿ
ಜಿಂಕೆಯನ್ನು ಏರಿ
ಬಂದಿರುವರಾರಲ್ಲಿ
ಮೋಹ ಪಾಶವ ಎಸೆದು
ಸೆಳೆಯುತಿಹ ಅಸೆಚಲ್ಲಿ
ಬಚ್ಚಿಟ್ಟಿರುವೆ ನಿನ್ನ
ನನ್ನ ಪುಟ್ಟ ಹೃದಯದಲ್ಲಿ
ತೋರಿಸಿಬಿಡು ನಿನ್ನ ಬಿಂಬ
ಆ ಪೂರ್ಣಚಂದಿರನಲ್ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ