ಕಂದ, ವೃತ್ತ, ರಗಳೆಗಳಿಲ್ಲದೆ
ಗುರುವಾರ, ಫೆಬ್ರವರಿ 13, 2025
*ಹೀಗೊಂದು ಚಿಂತನೆ*!
ಕಂದ, ವೃತ್ತ, ರಗಳೆಗಳಿಲ್ಲದೆ
ಮಾವಿನ ಮರ
ಮನಸ್ಸು!
ತಂಪಿನಲಿ ಪ್ರೀತಿಸಿ
ಮುಗುಳ್ನಗುತ ನನ್ನ
ಮನಸ್ಸೆ ನಿನ್ನ ಗೆಲ್ಲುವೆ
ಮೌನರಾಗ ಹಾಡಿಬಿಡುವೆ
*ನೋಡು ನಲ್ಲೆ*
ಕಣ್ಣು ತೆರೆದು ನೋಡು ನಲ್ಲೆ
ಕಾದು ಕುಳುತಿಹೆ ನಾನಿಲ್ಲೆ .. ಪ
ನಿನ್ನ ಹೃದಯದ ಬಡಿತದಲ್ಲೆ
ನನ್ನ ಮನವು ಮಿಡಿವುದಲ್ಲೆ .. ಅ ಪ
ಚಂದ ನಿನ್ನಯ ಮಾತು ಬಲ್ಲೆ
ಮಂದಹಾಸದಿ ನಗೆಯ ಚಲ್ಲೆ
ಅಂದದಾ ಆ ಮುಗೂತಿಯಲ್ಲೆ
ಇಂದಿಗೂ ನೀ ಹೊಳೆವೆಯಲ್ಲೆ .. ೧
ತಂದು ಕೊಡಲೆ ಹೂವು ಮಲ್ಲೆ
ಸಂಧಿಸಿ ಇಡಲೇ ನಿನ್ನ ಮುಡಿಯಲ್ಲೆ
ಬಂಧಿ ಯಾಗುವೆ ನಾನಲ್ಲೆ
ಗಂಧ ಪರಿಮಳ ನೀನಿರುವಲ್ಲೇ ... ೨
ಒಂದು ಪ್ರೀತಿಯ ಮಾತಿನಲ್ಲೆ
ಅಂದು ಮಿಂದೆ ಆ ಭಾವದಲ್ಲೆ
ಹಿಂದು ಮುಂದೆ ನನಗ್ಯಾರಿಲ್ಲೆ
ಬಂದು ನೆಲೆಸು ನೀ ಹೃದಯದಲ್ಲೆ ... ೩
:-ಪ್ರಭಂಜನ
*ಯೌವ್ವನ* ( ನನ್ನದೊಂದು ಕಾಫಿಯಾನಾ ಗಝಲ್ )
ನಲ್ಲೆ ನಿನ್ನ ಕಣ್ಣು ನೋಡಲು ಎಷ್ಟು ಚನ್ನ ತಲೆಕೂದಲು ಮಿನುಗುತಿದೆ ಹಚ್ಚಿದಾಗ ಕಪ್ಪು ಬಣ್ಣ
ಹೋಲುಕೆ ದಾಳಿಂಬೆಯಂತೆ ದಂತ ನೀ ನಾಕ್ಕಾಗ ಚಿನ್ನ
ನಲಿಯುತಿದೆ ಬಳ್ಳಿಯಂದದಿ ನಿನ್ನ ನಡು ಎಷ್ಟು ಸಣ್ಣ
ಪಡ್ಡೆ ಹುಡುಗರು ಬಿದ್ದರು ನೋಡುತ ನಿನ್ನ ಮುಖವನ್ನ ಲತೆಯಂತೆ ಬಳಕುತ ನೆಡೆವೆ ಬೆಕ್ಕೆ ನಾಚಬೇಕಿನ್ನ
ಹಾರುತಿಹರು ಮುದುಕರೂ ಕದಿಯಲು ನಿನ್ನ ಮನಸನ್ನ
ಪ್ರೀತಿಯ ಸುಧೆ ಹರಿಸಿಬಿಡು ಹಂಚಿ ಹನಿ ಹನಿ ಖುಷಿಯನ್ನ
ನೆಡೆವಾಗ ಕತ್ತೆತ್ತಿ ಆಗಸದಿ ನೋಡುವೆ ಏನನ್ನ ಹಾಡೊಂದ ಹಾಡುತ ಕರೆದುಬಿಡು ಪ್ರಭಂಜನನನ್ನ
*ಕೋಕಿಲ* ಗಝಲ್..
ಪಂಚಮ ಸ್ವರದಲ್ಲಿ ಹಾಡು ಹಾಡುವೆ ಏಕೆ ಮಾವಿನ ಚಿಗುರು ಅದು ಒಗರಿರಲು ಸಾಕೆ
ಎಲೆಗಳೊಳಗೆ ಇರುವೆ ಅದೆಂಥ ನಾಚಿಕೆ ನಿನಗೆ
ನಿನ್ನನಾದರಿಸಿದರೂ ಕಣ್ಣು ಕೆಂಪಾಗಿರುವುದೇಕೆ
ಬಣ್ಣ ಕಪ್ಪಾದರು ತತ್ತಿ ಬೆಳಿ ಗಾತ್ರ ಒಂದೇ ಪರರ ಗೂಡಲ್ಲಿ ಇಡುವೆ ಈ ಮೋಸವೇಕೆ
ಪರಪುಟ್ಟನಾದರೂ ತಾಯಿ ಹುಡುಕುವೆ ಹೇಗೆ ಕಾ ಕಾ ಕಲಿಯದೆ ಕುಹೂ ಕುಹೂ ಕೂಗುವೆಯೇಕೆ
ಕಾವುಕೊಟ್ಟರು ಕಾಗೆಗೆ ಹುಡುಕಿ ಕುಕ್ಕುವೆಯೇಕೆ ಸಾಕು ನ್ಯಾಯಕ್ಕಾಗಿ 'ಪ್ರಮು'ಖಗೆ ಒಪ್ಪಿಸಬೇಕೇ
-ಪ್ರಭಂಜನ.
ಪಂಚಮಿ
ಪಂಚಮಿ
ಬನ್ನಿರೇ ಭಾಮೆಂಗಳೆಲ್ಲಾ
ತನಿ ಎರೆಯುವ ನಾಗರಾಜಗೆ
ಹೊನ್ನ ಒಡವೆಯ ಹಾಕಿಕೊಂಡು
ಚನ್ನಾಗಿ ಶೃಂಗರಿಸಿ ಕೊಳ್ಳುತಾ
ಅರಿಶಿನ ಕುಂಕುಮ ಹಣ್ಣು ಹೂವು
ಕರದಿ ವೈಯಾರದಿ ನೆಡೆಯುತಾ
ಹುರಿದ ಕಡಲೆ ತಂಬಿಟ್ಟು ಚಿಗುಳಿ
ತೆರೆದು ನೈವೇದ್ಯ ಮಾಡುತಾ
ಪನ್ನಗನನ್ನು ಪ್ರಸನ್ನಗೊಳಿಸಿ
ಕನ್ನೆಯರು ವರಗಳ ಕೇಳುತಾ
ಬೆನ್ನಹುರಿಗೆ ಹಾಲ ಹಚ್ಚುತಾ
ಅಣ್ಣ ತಮ್ಮಗೆ ಆಯಸ್ಸು ಬೇಡುತಾ
ತಿಂಡಿ ಕವನ
ಇಡ್ಲಿಯಾದರೇನು ಶಿವ
ವಡೆಯಾದರೇನು ಶಿವ
ತ್ಯಾಗ ಅಮರವೇ ಪ್ರೀತಿಲಿ
*ಚಂದದ ಬೆಡಗಿ* *ಈ ಹುಡುಗಿ*
ನಿನ್ನ ನೋಟವೇನುಕೆನೆಹಾಲಿನ ಮೈ ಮಾಟವೇನು
ತುಟಿಯ ಮೇಲೆ ಜೇನು
ನೋಡಿದರೆ, ಹೃದಯ ಮಿಟದೇನು
ನಗುವು ಸೊಗಸು ಸುಂದರಿ
ಆಕರ್ಶಿಸುವೆ ಯಾಕೆ ಈ ಪರಿ
ವರುಷಗಳು ಕಳೆದುಹೋದರೂ
ನಿನ್ನೊಲವು ಈಗಲೂ ಮಾದರಿ
ಬೆಡಗಿ ಕೇಶರಾಶಿಯೊಳಗೂ
ಮಿಂಚಿದೆ ನಿನ್ನ ಮೊಗದ ಚೆಲುವು
ಹುಡುಗಿ ಕೆನ್ನೆ ಕೆನ್ನೆ ಯೊಳಗೂ
ಬೆಣ್ಣೆ ಬೆಣ್ಣೆ ಕೊಡಲೇ ಕಾವು
ಚೆಲುವು ಎಷ್ಟು ಹೊಗಳಲಿ
ಪದಗಳೇ ಇಲ್ಲ ನನ್ನಾ ಬಳಿ
ಸ್ನೇಹ ನಿತ್ಯ ನೂತನವಾಗಲಿ
ತ್ಯಾಗ ಅಮರವೇ ಪ್ರೀತಿಲಿ
-ಪ್ರಭಂಜನ
ನನ್ನ ಒಲವೇ
ಕನಸೊಂದು ಬಿದ್ದಿತ್ತು
ಹೂವೊಂದು ನಗುತಿತ್ತು
ವರ್ಣಿಸಲಿ ಹೇಗೆ ನಿನ್ನ ಚಲುವೆ
ತಂಗಾಳಿ ಬಿಸಿತ್ತು
ಮೋಡಗಳು ತೇಲುತಿತ್ತು
ಚಂದಿರನಂತೆ ಬಂದೆ ನನ್ನ ಒಲವೇ
ಮುಂಗುರುಳು ಬಾಗಿತ್ತು
ಕೆಂದುಟಿ ಮಿಂಚುತಿತ್ತು
ದಾಳಿಂಬೆಯಂತೆ ದಂತ ನಿನ್ನ ನಗುವೇ
ಕಣ್ಣು ಹೊಳೆಯುತ್ತಿತ್ತು
ನಡು ಸಣ್ಣ ಬಳುಕುತಿತ್ತು
ಬಳ್ಳಿಯಂತೆ ನೀ ನನ್ನ ನವಿಲೇ
ಮೆತ್ತನೆಯ ಪಾದವಿತ್ತು
ಹೆಜ್ಜೆ ಮೇಲೆ ಹೆಜ್ಜೆ ಇತ್ತು
ಜಿಂಕೆಯಂತೆ ನಾಚಿ ನಿನ್ನ ನಡುಗೆ
ಸಾವಿರದ ಕನಸಿತ್ತು
ಹೃದಯ ಕುಣಿಯುತಲಿತ್ತು
ಪ್ರೀತಿತುಂಬಿ ಬಂದೆ ನೀ ನನ್ನ ಕಡೆಗೆ
-ಪ್ರಭಂಜನ.
ಕಣ್ಣಲಿ ಏನೋ ಮಿನುಗಿದಹಾಗೆ
ಕಣ್ಣಲಿ ಏನೋ ಮಿನುಗಿದಹಾಗೆ
ತಾರೆಯೇ ಧರೆಗೆ ಇಳಿದಂತಿದೆ
ಆ ನಗುವಲಿ ಏನೋ ಸೆಳೆತವಿದೆ
ಪ್ರೀತಿಯ ನುಡಿಯೇ ಮಧುರವಾಗಿ
ದುಂಬಿಯು ಹಾಡಿದಂತೆ ಕೇಳುತಿದೆ
ಹೆಜ್ಜೆಯ ಮೇಲೆ ಹೆಜ್ಜೆಯನಿಡುವ
ಮೃದು ಪಾದಗಳ ಸೊಬಗ ವರ್ಣಿಸಲೇ
ತರು ಲತೆ ಯಂತೆ ಬಳಕುವೆ ನಿನ್ನ
ಗಾಳಿಯು ಸೋಕಿ ನಾ ನಲಿದಾಡಿದೆ
ನವಿಲಿನ ಹಾಗೆ ನೆಡೆಯುವೆ ನಿನ್ನ
ನಡುಗೆಗೆ ಹೋಲಿಕೆ ಬೇರೇನಿದೆ
ಮನಸಿನ ತುಂಬಾ ಅವರಿಸಿರುವೆ
ನಿನ್ನ ನೋಡದೆ ಹೇಗೆ ಜೀವಿಸಲೇ
ಸಾಗರದಂಚಲಿ ಕಾಯುವೆ ನಾನು
ಚಂದಿರನಂತೆ ಬಾ ನನ್ನೊಲವೆ
*ಮೊದಲ ಧ್ವನಿ*
ಗಿಳಿಯಂತೆ ಸೊಗಸು
ನಿನ್ನಾ ಧ್ವನಿ
ಗೆರೆಬಿಚ್ಚಿ ನಲಿವ
ಗುಬ್ಬಚ್ಚಿಯಂತೆ ಕುಚಿಕು
ನಿನ್ನಾ ಧ್ವನಿ
ಕೋಗಿಲೆ ಕೂಗಿ
ಹಾಡಿದಂತೆ ನುಡಿಯು
ನಿನ್ನ ಧ್ವನಿ
ಒಲವ ಸುಧೆಯ
ಸೊಗಸಂತೆ ಮಧುರ
ನಿನ್ನಾ ಧ್ವನಿ
ಪ್ರೀತಿಯ ನಗುವಿನ
ಮುತ್ತುದುರಿದಂತೆ
ನಿನ್ನಾ ಧ್ವನಿ
ಮೊದಲ ತೊದಲ
ನೋಡಿಯಲ್ಲೇ ನಿನಾದ
ನಿನ್ನಾ ದ್ವನಿ
ಆ ಧ್ವನಿ ಕೇಳಲು
ಕಾಯುತಿದೆ ಕೊಳಲು
ನುಡಿಸಲು ಇನಿದನಿ
-ಪ್ರಭಂಜನ.
ನಿನ್ನೊಳಗೆ
ನಿನ್ನೊಳಗೆ ಒಳಗೆ
ಹುದುಗಿರುವ ಎದೆಗೆ
ನಾ ಬಿಡದೆ ಬಿಡಲೇ
ಹೂ ಬಾಣ
ಹೊಸ ಭಾವ ಬೆಸೆದು
ನಾ ಮಾಡಿಬಿಡುವೆ
ಹೊಸ ತಾಣ
ನಿನ್ನ ನೋಡು ನೋಡುತಲೇ
ಪ್ರೀತಿ ಗರಿ ಚಿಗುರಿ
ಗೀಚಿ ಬಿಡುವೆ
ಪ್ರಣಯ ಕವನ
ನಿನ್ನ ಪ್ರೀತಿ ರಾಗಕೆ
ಮೋಹ ಪಾಶಕೆ
ಸಿಲುಕಿ ಸವಿವೆ
ಮಧು ಪಾನ
ನಿನ್ನ ಸನಿಹ ಬಯಸುತಾ
ಹಾತೊರೆದು ಬರುವೆ
ಆವರಿಸು ಕೊಟ್ಟು
ಹೃದಯದಲಿ ಸ್ಥಾನ
ನಿನ್ನ ಜನುಮ ಜನುಮದಲಿ
ಪ್ರೀತಿ ಮಾಡುವೆ
ದಾಖಲೆ ಯಾಗಲಿ
ನಮ್ಮೀ ಪಯಣ
-ಪ್ರಭಂಜನ
ಕಾಯಲಾರೆ.
ಬಾರೆ ಬೇಗ ಕಾರಣ ಹೇಳದೆ ../ಪ/.
ಪ್ರೀತಿಯಲ್ಲಿ ಸಮಯ ಹೋಗದೆ
ಕಾಯುವುದರಲ್ಲಿ ಏನೋ ಸುಖವಿದೆ.. ../ಅ ಪ,/.
ಚಂದಿರನೇ ನೋಡಿದ್ಯಾ ನನ್ನವಳ
ಹೇಳಿಬಿಡು ಕಾಯುತಿದೆ ಈ ಹೃದಯಾ
ಪ್ರೀತಿ ಕಿಚ್ಚ ಹಚ್ಚಿ ಹೋದೆ
ಹುಡುಕುತಿರುವೆ ಎಲ್ಲಿರುವೆ 1
ಮಾಘಿಯಾ ಚಳಿಯಲ್ಲಿ
ಕೊಡು ನೀ ಅಪ್ಪುಗೆಯಾ
ಅದಕಾಗಿ ಏರಿ ಬಡಿಯುತಿದೆ
ಈ ಹೃದಯಾ
ತಂಗಾಳಿಯಲ್ಲಿ ನೀನು ಬಂದು
ಒಂದು ಮಾತು ಹೇಳದೆ ಹೋದೆ 2
ಇರುಳಲ್ಲಿ ಪ್ರೇಮನಿವೇದನೆ
ನೀ ಒಪ್ಪುವಿಯಾ
ಬೆರೆತುಹೋಗಿದೆ ಅರಿಯೆಯಾ ಈ ಹೃದಯಾ
ಕನಸಿನಲ್ಲೂ ಕಂಡಂತೆ
ನನಸಿನಲ್ಲೂ ಬಂದು ಸೇರು 3
--ಪ್ರಭಂಜನ
ಶನಿವಾರ, ಜೂನ್ 15, 2024
ತಾಯೆ ನಿನ್ನ ಮಡಿಲಲಿ ಬಂದು
ತಾಯೆ ನಿನ್ನ ಮಡಿಲಲಿ ಬಂದು
ಪ್ರಕೃತಿಯ ಕಂಡು
ಮಗುವೇ ಆದೆ ನಾ
*ಮೈಸೂರ್ ಪಾಕ್*
*ನೀಲಿಕನ್ನಿಕೆ*
ಮಂಗಳವಾರ, ಫೆಬ್ರವರಿ 13, 2024
ಜಡೆ
ಹೂವು ಹಾವಾಗದಿರಲಿ
ಹಾವು ಜೆಡೆಯಾಗದಿರಲಿ
ಹೂವು ಜಡೆಯಲ್ಲಿ ಮುಡಿದವರು
ಬುಸುಗುಟ್ಟದೆ ಇರಲಿ
ಬುಸುಗುಟ್ಟಿದರೂ ಸರಿ
ಎಂದೂ ಹೆಡೆ ಬಿಚ್ಚಿ ಹೊಡೆಯದಿರಲಿ
ನನ್ನ ಹೆಂಡತಿಯ ಕೂದಲೂ
ಕಪ್ಪು ದಪ್ಪ
ಜಡೆ ಇತ್ತು ಮಾರುದ್ದ
ಈಗಲೂ ಇದೆ ಕೂದಲು
ಹೂಬಿಟ್ಟ ಕೊತ್ತಂಬರಿ ಕಟ್ಟು
ಜಡೆ ಮಾತೇ ಇಲ್ಲ
ಆನೆಯ ಬಾಲದ ತುದಿಯುದ್ದ 😂😂😂
ಅಯೋಧ್ಯಾ ಪುರಿಗೆ ಹೋಗೋಣ
ಬನ್ನಿ ಗೆಳೆಯರೆಲ್ಲ ನಾವು
ಅಯೋಧ್ಯಾ ಪುರಿಗೆ ಹೋಗೋಣ
ಬಾಲ ರಾಮನನ್ನು ನೋಡಿ
ಬಂದ ಭಕ್ತರ ದರ್ಶನ ಮಾಡೋಣ
ರಾಮನೇನು ಹೊಸಬನಲ್ಲ
ನನ್ನ ಹಾಗೆ ದೇವನು
ಹಾಲು ಮೊಸರು ಬೆಣ್ಣೆ ತಿನ್ನದೇ
ಬಾಲ ಲೀಲೆ ತೋರಿದ ಮಹಿಮನು
ಸುಳ್ಳು ನನಗೆ ಸಾರಾಗ
ಅವನು ಸತ್ಯ ನಿಷ್ಠನು
ಕೊಟ್ಟು ಮಾತು ಮರೆಸುವೆ ನಾನು
ಅವ ರಾಮ ಪಿತೃವಾಕ್ಯ ಪರಿಪಾಲಕನು
ರಾಧೆ ಗೋಪಿಯರು ನನ್ನ
ಹುಡುಕಿ ಹುಡುಕಿ ಕಾದರೂ
ರಾಮನಾದರೂ ಸೀತೆಗಾಗಿ
ಭಾರತ ಖಂಡ ಪೂರ್ತಿ ನೆಡೆದನು
ಪುತನಿ ಕಾಳಿಂಗ ರಾಕ್ಷಸರು
ನಾ ಇರುವಲ್ಲೇ ಬಂದರು
ರಾಮ ರಾಕ್ಷಸರಾ ಕೊಲ್ಲಲು
ಅವರಿರಿವಲ್ಲೇ ಹೋದನು
ದುಷ್ಟ ಶಿಕ್ಷೆ ಶಿಷ್ಟ ರಕ್ಷೆ
ರಾಮ ಕೃಷ್ಣರ ಅವತಾರವು
ಹಿಂದೂ ಸನಾತನ ಧರ್ಮದಿ
ನಿತ್ಯ ಬೆಳಗಲಿ ಭಾರತವು
ಪ್ರಭಂಜನ ಮುತ್ತಿಗಿ
ಇಂಗ್ಲಿಷ್ ಹೊಸ ವರ್ಷ
ಇಂಗ್ಲಿಷ್ ಹೊಸ ವರ್ಷದಲ್ಲಿ
ಬಾರುಗಳದ್ದೆ ದರ್ಬಾರು
ಮತ್ತಿನಲ್ಲಿ ತೇಲುವ ಈ ಜನಕ್ಕೆ
ಬುದ್ದಿ ಹೇಳುವರಾರು
ಯುಗಾದಿಗೆ ಪ್ರಕೃತಿಯಲ್ಲೂ
ಕಾಣಿವುದು ಹೊಸ ಚಿಗುರು
ನಮ್ಮಂತೆ ಹೊಸ ವರ್ಷಾಚಾರಣೆ
ಪ್ರಾಣಿ ಪಕ್ಷಿಗಳಲ್ಲೂ ಜೋರು
ದೀಪ ಆರಿಸಿ ಕೆಕ್ ಕಟ್ ಮಾಡಿ
ಪಟಾಕಿ ಸಿಡಿಸಿ ಮರೆಯುತ್ತಿದ್ದೇವೆ ನಮ್ಮ ಬೇರು
ಯುಗಾದಿ ಹಬ್ಬಕೆ ದೀಪ ಹಚ್ಚಿ
ಉಳಿಸಿವ ಸಂಸ್ಕೃತಿ ನಾವೆಲ್ಲರು
ಯುಗಾದಿ ಸಂಭ್ರಮಿಸೋಣ ನಾವೆಲ್ಲರೂ 🙏🏼