ಮಂಗಳವಾರ, ಫೆಬ್ರವರಿ 13, 2024

ಇಂಗ್ಲಿಷ್ ಹೊಸ ವರ್ಷ

ಇಂಗ್ಲಿಷ್ ಹೊಸ ವರ್ಷದಲ್ಲಿ
ಬಾರುಗಳದ್ದೆ ದರ್ಬಾರು
ಮತ್ತಿನಲ್ಲಿ ತೇಲುವ ಈ ಜನಕ್ಕೆ 
ಬುದ್ದಿ ಹೇಳುವರಾರು

ಯುಗಾದಿಗೆ ಪ್ರಕೃತಿಯಲ್ಲೂ
ಕಾಣಿವುದು ಹೊಸ ಚಿಗುರು
ನಮ್ಮಂತೆ ಹೊಸ ವರ್ಷಾಚಾರಣೆ
ಪ್ರಾಣಿ ಪಕ್ಷಿಗಳಲ್ಲೂ ಜೋರು

ದೀಪ ಆರಿಸಿ ಕೆಕ್ ಕಟ್ ಮಾಡಿ
ಪಟಾಕಿ ಸಿಡಿಸಿ ಮರೆಯುತ್ತಿದ್ದೇವೆ ನಮ್ಮ ಬೇರು

ಯುಗಾದಿ ಹಬ್ಬಕೆ ದೀಪ ಹಚ್ಚಿ
ಉಳಿಸಿವ ಸಂಸ್ಕೃತಿ ನಾವೆಲ್ಲರು

ಹೊಸವರ್ಷಕೆ ಬೇವು ಬೆಲ್ಲ ಹಂಚಿ 

ಯುಗಾದಿ ಸಂಭ್ರಮಿಸೋಣ  ನಾವೆಲ್ಲರೂ 🙏🏼


 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ