ಮಂಗಳವಾರ, ಡಿಸೆಂಬರ್ 31, 2013

ಓಡೋಡಿ

ನಲ್ಲೆಯೇ ನಿನ್ನ ನೋಡಿ 
ಬರುವೆನು ಹಿಂದೆ ಓಡಿ
ನಿನ್ನ ಆ ರೂಪ ಕಾಡಿ 
ಕಣ್ಣ ಸೆಳೆಯಲು ಬಂದೆ ಓಡೋಡಿ 

ಸೊಗಸಾದ ಹಾಡನು ಹಾಡಿ
ಮೊಗತೋರಿದೆ ಮೋಡಿಯ ಮಾಡಿ 
ನಡೆವಾಗ ಬಳುಕುವುದನು ನೋಡಿ 
ಹಿಡಿಯಲು ಬಂದೆ ನಾ ಓಡೋಡಿ 
 
ನಗುವಾಗ ಕೆನ್ನೆ ಗುಳಿ ಮೂಡಿ 
ತೂಗುವ ಆ ಕೇಶ ಜೋತಾಡಿ 
ಬಿನ್ನಾಣದಿ ನಿಂತ ನಿನ್ನ ನೋಡಿ  
ಕೆನ್ನೆ ಸವರಲು ಬಂದೆ ಓಡೋಡಿ 

ಒಂದು ಬಾರಿ ಕೈ ಹಿಡಿದು ಕೂಡಿ 
ಬಂದು ಬಿಡು ನನ್ನ ಜೋಡಿ 
ಚಂದದಿ ನಗುತ ಪ್ರೀತಿ ಮಾಡಿ 
ಅಂದದಿ ಬಾಳುವ  ಜೋತೆಕೂಡಿ 

ಶುಕ್ರವಾರ, ಡಿಸೆಂಬರ್ 13, 2013

ಎಲ್ಲಿ ಹೋದೆ

ಎಲ್ಲಿ ಹೋದೆ ನನ್ನ ನಲ್ಲೆ 
ಬಂದು  ನಗುವ ಚಲ್ಲದೆ    \\ ಪ \\

ಬೆಲ್ಲ ದಂತ ಮಾತುಕೇಳಿ
ವರುಷವಾಯ್ತು ಮೆಲ್ಲಗೆ  \\ ಅ ಪ \\ 

ಹೃದಯ ಮೀಟಿ  ನುಡಿಸಿ ಹಾಡಿ 
ಬೆಳಗೋ ಕಂಗಳಿಂದ  ನೋಡಿ 
ಪ್ರೀತಿರಾಗ  ಬರಿದು  ಮಾಡಿ   \\೧ \\ ಎಲ್ಲಿ 

ಆಸೆಯಿಂದ  ಕನಸು ತುಂಬಿ 
ಭಾಷೆಯಿಂದ ಸೊಗಸು  ತುಂಬಿ 
ಹುಸಿ ವಿಷಯ ಹೃದಯ ತುಂಬಿ  \\೨\\ಎಲ್ಲಿ 

ಮಲ್ಲಿಗೆ ಹೂವ್ವಿನಂತೆ ನೀನು 
ಮೆಲ್ಲ ಮೆಲ್ಲಗೆ ತಿಳಿದೇ ನಾನು 
ಕಲ್ಲು ಮನಸು ಮಾಡಿ ನೀನು \\೩\\ಎಲ್ಲಿ 

ಇದ್ದು ಜೊತೆಗೆ ದಿನವು ಕಾಡಿ  
ತಿದ್ದಿ ತಪ್ಪನು ಪ್ರೀತಿ ಮಾಡಿ 
ಕದ್ದು ನನ್ನ ಹೃದಯ ಸೇರದೆ \\4\\ ಎಲ್ಲಿ 

ಬುಧವಾರ, ನವೆಂಬರ್ 20, 2013

ಕದ್ದು ಕದ್ದು

ಹೊಳೆಯುತಿರುವ ಕಣ್ಣೆ
 ಹೊಸದೇನು ಹೇಳಲಿ 
ಬೆಳಗುತಿರುವೆ ಕನ್ಯೆ 
ಹೇಗೆಲ್ಲ ನಾ  ಹೊಗಳಲಿ 

ಕಪ್ಪು ಕಾಡಿಗೆ ಹಚ್ಚಿ 
ಎದ್ದು ಬರುತಲಿದೆ ಹುಬ್ಬು 
ಒಪ್ಪುವಂದದಿ ಬಿಚ್ಚಿ 
 ಮುದ್ದು ಮಾಡುತಿದೆ ರೆಪ್ಪೆ 
ದಪ್ಪ ದುಂಡಿನ ಕೇಶ 
ಉದ್ದವಾಗಿ ಸೆಳೆಯುತಿದೆ  
ಬೆಪ್ಪನಾಗಿ ಬೆರಗಾಗಿ 
ನಾ  ಕದ್ದು  ನೋಡುತಿಹೆ   

ದುಂಡು ಮೊಗದಾ ನಡುವೆ
 ನವಿರಾದ ನೈದಿಲೆಯು 
ಚಂದದಾ  ತುಟಿಗಳ ಮೇಲೆ 
ನೀಳವಾದ ನಾಸಿಕವು 
ಅಂದದಿ ಹೊಳೆಯುವ 
ದಂತತುಂಬಿದ ಕಿರುನಗೆಯ 
ಬಂದು ಬೆರಗಾಗಿ ನಾ
ಕದ್ದು ಕದ್ದು ನೋಡುತಿಹೆನು 

ಶುಕ್ರವಾರ, ಅಕ್ಟೋಬರ್ 25, 2013

ಮೆಲ್ಲಗೆ

ಹುಡುಗಿ ಹುಡುಗಿ ನನ್ನ 
ಬೆಡಗಿ ತಿರುಗಿ ತಿರುಗಿ ನೋಡು 
ಹುದುಗ ಹುಡುಗ ನೀನು 
ಗಿಡುಗ ಹಿಂದೆ ಬರದೆ  ಓಡು   ।। ಪ ।। 

ಕಣ್ಣಲ್ಲಿ ಕಣ್ಣಿಟ್ಟು ನೋಡು  
ಕೋತಿ ಮುಖಕ್ಕೆ ಅದು ಕೇಡು 
ನಿನ್ನ ಹಿಂದೆ ನಾನು  ಬಂದ್ರೆ 
ಏಳ್ಕೊಬೇಡ  ಸುಮ್ನೆ ತೊಂದ್ರೆ    ೧ 

ಕೈ ಕೈ ಹಿಡಿದು  ನೃತ್ಯ ಮಾಡು 
ನಿನ್ ಮೈ ನೆಟ್ಟಗೆಇದೇನಾ ನೋಡು 
ನಿನ್ನ ಮೇಲೊಂದು ಪ್ರೇತಿ ಹಾಡು 
ಆ ಧ್ವನಿಗೆ ಆಯಿತು ಕಿವಿ ಕಿವುಡು     ೨ 

ಹೂವು ಕೊಟ್ಟರೆ ಏನು ಮಾಡುವೆ 
ತುಳುದು ಹಾಕಿ ನಿನ್ನ ಕಾಡುವೆ 
ನಿನ್ನೇ  ಪ್ರೀತಿ ಮಾಡಿ ಗೆಲ್ಲುವೆ . 
ಕನಸು ಕಾಣೋದು ಬಿಡು  ಮೆಲ್ಲಗೆ ..  

ಭಾನುವಾರ, ಅಕ್ಟೋಬರ್ 20, 2013

ಗೆಳೆಯ

ಇರುವನು ಜೊತೆಯಲ್ಲಿ ಇದ್ದರು ಇರದಂತೆ 
ತರುವನು ನಗುವನು ಲತೆಯೇ ನಾಚುವಂತೆ  

ಎಳೆಯ ಚಿಗುರಿನಲಿ ಹೊಳೆವ ಇಬ್ಬನಿಯಂತೆ
ಬಿಳಿಯ ವಜ್ರದಲಿರುವ ಚಲುವ ಬಣ್ಣಗಳಂತೆ   
ಬೆಳಗುವ ದೀಪದಲಿ ತಿಳಿ ಎಣ್ಣೆ ಇದ್ದಂತೆ  
ಗೆಳೆಯ ನೀ ಇರುವೆ  ಚಂದಿರನ ಬೆಳಕಂತೆ 

ನೀರಿನಲಿ ತೇಲುವ ಕಮಲದೆಲೆಯಂತೆ ಸಾ-
ಗರದೊಳಗೆ ಹುದುಗಿದ ರತ್ನ ಪರ್ವತದಂತೆ 
ಹೂರಣದಲಿ ಸಿಹಿಯಾದ ಬೆಲ್ಲ ಬೆರೆತಂತೆ   
ಇರುವೆ ನೀ ಗೆಳೆಯ ಎಲೆಮರೆ ಕಾಯಂತೆ

ಮಳೆಗಾಲದಲಿ ಸಿಗುವ ಆಸರೆಯ ಮರದಂತೆ 
ಚಳಿಗಾಲದಲಿ ಹೋದೆವ ಕರಿ ಕಂಬಳಿಯಂತೆ 
ಬಳಲಿದ ಬೇಸಿಗೆಯಲ್ಲಿ ಬರುವೆ ತಂಗಾಳಿಯಂತೆ 
ಗೆಳೆಯ ನೀ ಇರುವೆ  ಚುಲುಮೆಯ ಸೆಲೆಯಂತೆ 
--ಜೀವನ ಜ್ಯೋತಿಯಂತೆ  

ಮಂಗಳವಾರ, ಆಗಸ್ಟ್ 6, 2013

ಸನಿಹ


ನೀ ಇಲ್ಲದಿದ್ದರೇನಂತೆ ನಿನ್ನ ಬಿಂಬ
ಜೊತೆಯಲಿ ಇರುವುದು ಹುಣ್ಣಿಮೆ ಬೆಳಕಂತೆ  \\

ಚಂದಿರನಲಿ  ಚಂದಿರನಂತೆ  ಕಮಲದಲಿ ಕಮಲದಂತೆ
ಹೊಳೆಯುತಿದೆ ನಿನ್ನ ಕಣ್ಣುಗಳು  ಸೂರ್ಯನ ಪ್ರತಿಬಿಂಬದಂತೆ

ಹವಳದ ತುಟಿಯಂತೆ ದಂತದಲಿ ದಾಳಿಂಬೆ ಜೋಡಿಸಿದಂತೆ
ನೀ ನಕ್ಕಾಗ ಜಾರಿ ಬೀಳುವವು ಮುತ್ತುಗಳು ಜಲಪಾತದಂತೆ

ಮೋಡದಲ್ಲಿ  ಮೂಡುವ ಚಿತಾರದಂತೆ  ಸಾಗರದ ಏರು ಅಲೆಗಳಂತೆ
ನೀ ಜೊತೆಇಲ್ಲದಿದ್ದರು ಬೀಳುವುದು ಕನಸು ನೀ ನನ್ನ ಸನಿಹ ಇದ್ದಂತೆ

ಗುರುವಾರ, ಜುಲೈ 4, 2013

ನೋಟದೊಳಗೊಂದು

ನೀ ನೋಡುವ ನೋಟಕೆ ಏನೆಂದು ಹೆಸರಿಡಲಿ 
ನೋಟದೊಳಗೊಂದು ಪ್ರೀತಿ ಚುಮ್ಮುತಿಹುದು 

ನಗುವಿನ ಉಲ್ಲಸಕೆ ನಾ ಹೇಗೆ ಸ್ಪಂದಿಸಲಿ  
ಉಲ್ಲಸದೊಳಗಿಂದ ಕನಸು ಹೊಮ್ಮುತಿಹುದು  

ನಿನ್ನೆದೆಯ ಮಿಡಿತದಕೆ ಸುಸ್ವರ  ಹಾಡುತಿರಲಿ    
ಮೋಹದ ಅಲೆಗೆ ಮನಸು ರಮ್ಯವಾಗುತಿಹುದು 

ನಿನ್ನೊಲುಮೆಯ ಸ್ಪರ್ಶಕೆ ಬಡಿತ ಏರುತಿರಲಿ 
ನವಿರಾಗಿ ನಾಚಿಕೆಯು  ಭಾಸ್ಮವಾಗುತಿಹುದು 

ನಿನ್ನುಸಿರ ಉಸಿರಲ್ಲಿ ನನ್ನಹೆಸರು ಹುದುಗಿರಲಿ 
ಒಲವಿನ ಲೋಕದವು  ಹೆಮ್ಮರವಾಗುತಿಹುದು 

ನೀ ಇಲ್ಲದೆ ನಾ ಇಲ್ಲ ಎಂದು ಸಾರಿ ಹೇಳುತಲಿ 
ನನ್ನೊಳಗಿನ ಮೃದು ಹೃದಯ ಕೆಮ್ಮುತಿಹುದು 

ನನ್ನನಾವರಿಸಿ ಬಳಿಬಂದು ಬಿಗಿದಪ್ಪಿಕೊಳ್ಲುತಲಿ 
ನೀ ನನಗಾಗಿ ಎಂದು ಹೆಮ್ಮೆಯಿಂದ ಹೇಳಬಹುದು 

ಸೋಮವಾರ, ಜೂನ್ 17, 2013

ಕೊಲ್ಲದಿರು ನೀನು

ಹೃದಯವೇ ಹೃದಯವೇ 
ನಾ ನಿನ್ನ ಬಿಟ್ಟು ಹೇಗಿರಲಿ 
ಬೇಗ ಬಾ ಬೇಗ ಬಾ  
ನಾ ನಿನಗಾಗಿ ಕಾದಿರುವೆ  ||


ನನ್ನ ಉಸಿರ ಉಸಿರಲ್ಲಿ  ಸೇರಿರುವೆ ನೀನು 
ನೀನಿಲ್ಲದೆ ನಾ ಉಸಿರಾಡುವುದು  ಹೇಗೆ  

ನನ್ನ ಕಣ್ಣ ನೋಟದ ಬೆಳಕಾಗಿರುವೆ ನೀನು 
ನೀನಿಲ್ಲದೆ ನಾ ನೋಡುವುದಾದರೂ ಹೇಗೆ  

ನನ್ನ ಕಿವಿಗಳು ಕೇಳದೆ ಕಿವಿಡಾಗಿಸಿರುವೆ ನೀನು 
ನಿನ್ನದಲ್ಲದಾ  ಧ್ವನಿ  ಕೆಳುವುದಾದರು ಹೇಗೆ  

ನನ್ನ ಊಟದ ಸಿಹಿ ಹುಳಿ ಖಾರವೂ ನೀನು 
ನೀನಿಲ್ಲದೆ  ನಾಲಿಗೆಯ ರುಚಿಸುವುದಾದರು ಹೇಗೆ  

ನನ್ನ ತುಟಿಯ ತುದಿಯಲಿ ಕುಳಿತಿರುವೆ ನೀನು  
ನೀನಿಲ್ಲದೆ ಹಸಿವೆ ನಿದಿರೆ ಬರುವುದಾದರೂ ಹೇಗೆ 

ನನ್ನ ಕಣ ಕಣ ರಕ್ತದಲಿ ಹರಿಯುತಿರುವೆ ನೀನು 
ನೀನಿಲ್ಲದೆ ಹೃದಯ ಬಡಿಯುವುದದರು ಹೇಗೆ 

ಕೊಲ್ಲದಿರು ಕೊಲ್ಲದಿರು ದೂರ ಹೋಗಿ ನೀನು 
ನೀನಿಲ್ಲದೆ ಜೀವನ ಸಗುವುದಾದರು  ಹೇಗೆ 

ಬಂದು ಬಿಡು ಮುಂಗಾರು ಮಳೆಯಂತೆ ನೀನು 
ನೀನಿಲ್ಲದೆ ಪ್ರೀತಿ ಬೆಲೆ ಬೆಳೆಯವುದದರು ಹೇಗೆ

ಗುರುವಾರ, ಮೇ 9, 2013

ಹೊಂದಾಣಿಕೆ

ಮಾತು ಮನಸನ್ನ ಮುರಿದರೆ 
ಮೌನ ಹೃದಯವನ್ನು ಒಡೆಯುತ್ತದೆ 

ಪ್ರೀತಿ ಆಸೆಗಳನ್ನ ಕುಣಿಸಿದರೆ  
ದ್ವೇಷ ದೇಹವನ್ನು ಕುದಿಸುತ್ತದೆ 

ಆಭರಣ ರೂಪವನ್ನು ಹೆಚ್ಚಿಸಿದರೆ 
ಅಳು ಮುಖವನ್ನು  ಕೆಡಿಸುತ್ತದೆ 

ನೋಟ ಹಿತವನ್ನು ಬೀರಿದರೆ 
ಚಟ  ಚಟ್ಟವನ್ನು  ಏರಿಸುತ್ತದೆ 

ನಲಿವು ಉತ್ಸಾಹ ತಂದರೆ 
ಹಸಿವು ಹೊಸ ಪಾಠ ಹೇಳುತ್ತದೆ  

ಊಟ  ದಾಹವನ್ನು ನೀಗಿಸಿದರೆ 
ಪೇಚಾಟ ಮನುಶನನ್ನ ಕುಗ್ಗಿಸುತ್ತದೆ 

ವಿದ್ಯಾ ತನ್ನ ತನವನ್ನು ಕಲಿಸಿದರೆ
ಹಣ ತನ್ನವರನ್ನು ದೂರವಿಡುತ್ತದೆ 

ಹೊಂದಾಣಿಕೆ ಮನೆಯನ್ನು ಬೆಳಗಿದರೆ 
ಹೊಡೆದಾಟ ಸಂಭಂದಗಳ ಒಡೆಯುತ್ತದೆ 

ಕನಸು ಸೊಗಸನ್ನು ತಂದರೆ  
ಮುನಿಸು ಮನುಶತ್ವವನ್ನು ಸುಡುತ್ತದೆ

ಸೋಮವಾರ, ಏಪ್ರಿಲ್ 29, 2013

ಸ್ವಂತಿಕೆ

ಮೋಡದ  ಹಿಂದೆ ಇಣಿಕಿ ನೋಡದಿರು 
ತೋರು ಮೊಗವನ್ನ ಮಳೆಗಾಲದಲ್ಲೂ 
ಎಲ್ಲಿ ಓದಿ ಹೋಗುವೆ ಅಮಾವಾಸ್ಯೆ ಯಂದು 
ತಪ್ಪದೆ ಬಾ ಹತ್ತಿರ ಹುಣ್ಣಿಮೆ ದಿನದಂದು 

ಹಗಲು ರಾತ್ರಿ ಎನ್ನದೆ ನೀ ಹುಟ್ಟುವೆಯಲ್ಲ 
ಯಾಕೆ ನಿರ್ದಿಷ್ಟ ಸಮಯ ಪಾಲಿಸುವುದಿಲ್ಲ 
ಬೆಳೆಯುವ, ಕ್ಷೀನುಸುವುದು ನಿನ್ನ ಗುಣವೆಂದು 
ಜನ ಗೊಣಗುವ ಮುನ್ನ ಮುಖ ತೋರು ಬಂದು 

ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವೆಯಲ್ಲ 
ನಿನ್ನ ಸ್ವಂತಿಕೆಯ ಪರಿಚಯ ಯಾರಿಗೂ ತಿಳಿದಿಲ್ಲ 
ತಿಳಿಸು ನೀ ಇಲ್ಲದೆ  ಸಮುದ್ರ ಉಕ್ಕೆರುವುದಿಲ್ಲ 
ಭೂಮಿ ತನ್ನ ಪಥದಲ್ಲಿ ಚಲಿಸುವುದಿಲ್ಲವೆಂದು !
ಪ್ರೀಮಿಗಳು ಮಧುಚಂದ್ರಕ್ಕೆ ಹೋಗಲಾರಾರೆಂದು!

ಮಂಗಳವಾರ, ಏಪ್ರಿಲ್ 16, 2013

ಋತು


ಋತು ಬದಲಾವಣೆಯಿಂದ 
ಹೊಸ ಗಾಳಿಯು ಬೀಸುತಿದೆ

ವಿಜಯ ತುಂಬಿದ ಸಂವತ್ಸರದ 
ನವ ವಸಂತವು ಬರುತಲಿದೆ

ಕರಿ ಕೋಗಿಲೆ ಚಿಗುರನು ತಿನ್ನುತಲಿ 
ಸ್ವರ ಹಿಡಿದು ಹಾಡುತಿದೆ
ಹೂಗಳ ಗೊಂಚಲ ತುದಿಯಲ್ಲಿ   
ಭೃಂಗಗಳು  ಸುಸ್ವರ ಸೂಸುತಿವೆ 

ಬಣ್ಣ ಬಣ್ಣದ ಹೂಗಳ ಚಂದವನು  
ಬರಿ ಪದಗಳಲಿ ಬಣ್ಣಿಸಬಹುದೆ  
ಪ್ರಕೃತಿಯ ಹಸಿರು ಉಡುಗೆಯನು  
ಹೊಸ ಹಾಡಲಿ ಹರಿಬಿಡಬಹುದೆ

ನೂತನ ಸೃಷ್ಟಿಯ ಆಗಮನ 
ಧರಣಿಗೆ ಹೊಳಪನು ನೀಡುತಿದೆ 
ವಿನೂತನ ಭಾವದ  ಆಸೆಗಳು 
ಮೂಡುತ ಮೈ ಮನ ಕುಣಿಸುತಿದೆ

ಮಂಗಳವಾರ, ಏಪ್ರಿಲ್ 2, 2013

ಜೋ... ಜೋ


ಮಲಗು  ಮಲಗೆನ್ನ ಮುದ್ದಿನ ಗಿಣಿಯೆ 
ಅಗೆದರು ಬರಿದಾಗದ ಪ್ರೇಮದ  ಗಣಿಯೆ 
ತುಂಬಿ ತುಳುಕುತಿದೆ ಪ್ರೀತಿಯ ಹೊಳೆಯೇ 
ಮಲಗುಸಿವೆ ಎದೆಮೇಲೆ ಸುರಿಸುತ್ತ  ಮುತ್ತಿನ ಮಳೆಯೇ     ಜೋ... ಜೋ 
ಹಗಲೆಲ್ಲ ಸುತ್ತಾಡಿ ಕಾಲು ನೋವುತಿದೆಯೇ 
ಮೃದುವಾದ ಪಾದಕ್ಕೆ ಬೆಣ್ಣೆ ಹಚ್ಚಿ  ವತ್ತುವೆ   
ಇರುಳಲ್ಲಿ ತಾರೆಗಳಂತೆ ಮಿನುಗುತಿಹೇ ಚಲುವೆ   
ಮಲಗಿಸುವೆ ಬಿಗಿದಪ್ಪಿ ಸುರಿಸುತ್ತ ಒಲವಿನ ಸುಧೆಯೇ  ..  ಜೋ... ಜೋ  

ಮೆತ್ತನೆ ಹಾಸಿಗೆಗೆ  ಮಲ್ಲೆ ಗುಲಾಬಿ ಜೋಡಿಸಿರುವೆ  
ಹಿತವಾದ ರಾತ್ರಿಯಲಿ  ಚಂದಿರನ ಕರೆತರುವೆ  
ಮಲಗದೇ ಹೇಗೆ ನನ್ನ ಆಟ  ಆಡಿಸುವುದು ಸರಿಯೇ 
ಮಲಗುವ ಬಾ  ಮನದಿನ್ನೇ ಸವಿಯುತ್ತ  ಜೇನಿನ ಹನಿಯನ್ನೇ    ಜೋ... ಜೋ 


ಮಂಗಳವಾರ, ಫೆಬ್ರವರಿ 26, 2013

ಅವರಾರಿಲ್ಲ

ನಲ್ಲೆ ಆಣೆ  ಮಾಡಿ ಹೇಳುವೆ ಪ್ರೀತಿಸಿದ್ದು ನಿನ್ನೋಬ್ಬಳನ್ನೇ
ತಲೆಎತ್ತಿ ಅಂದದ  ಹುಡಿಗಿಯರ  ಎಂದು ನೋಡದೆ ಬಂದೆನೆ 

ಸುಮ್ನೆ ಯಾಕೆ ಸುಳ್ಳು ಹೇಳ್ತಿಯ  ನಿನ್ನ ಸುತ್ತ ಹುದುಗಿರ ದಂಡೆ ಇರ್ತಿತ್ತು
ಅವರ ಜೊತೆ ನಲಿದಾಡಿದ ಸಮಯದಿ ಕವನಗಳು ಹೊರಬರ್ತಿತ್ತು

ಸುತ್ತ ಸುಂದರ  ಹುದುಗಿಯರಿದ್ರು ಆದರೆ ಎಲ್ಲರೂ  ರಾಕಿ  ಕಟ್ಟಿದ್ರು  
ಒಲವ ಚಲುವ ಆರಾಧನೆ ಇಂದ ಕವನ ತಾನಾಗೆ ಬರ್ತಿದ್ವು 
ಬರೆದ ಕವನಗಳನ್ನೆಲ್ಲ  ಓದಲು ಅವರು ಹಾಗೆ ಸೇರ್ತಿದ್ರು

ಮಾತಿಗೊಂದು ಸುಳ್ಳು ಹೇಳುವ  ಕೃಷ್ಣನ ಜಾತಿಗೆ ನೀ ಸೇರದವನು
ಮುಖವ ನೋಡದೆ  ಅಂದ ಚಂದದ ವರ್ಣನೆ ಕವಿತೆಲಿ ಹೇಗೆ ಇರ್ತಿತ್ತು

ಮನಸಿನಲ್ಲಿ ಬಂದ  ಭಾವನೆಯ ಕನಸು ನಂಗೆ ದಿನಾ  ಬೀಳ್ತಿತ್ತು
ಕನಸಿನಲಿ ಮೂಡಿದ ರೂಪದ ಚಂತನೆ  ಕವನದಲಿ ಹೊರಬರ್ತಿತ್ತು
ಅದರ ಆರಾಧನೆ ಇಂದ ನಿನ್ನಲಿ ಪ್ರೀತಿ ಉಕ್ಕಿ ಹರಿತಿತ್ತು

ಒಟ್ಟಿನಲ್ಲಿ ನಿನ್ನ ಕವನಗಳ ವಸ್ತು ನಾನು ಯಾವತ್ತು ಆಗಿಲ್ಲ
ಕನಸಿನ ಹುಡಿಗಿ ಜೊತೇನೆ ಹೋಗಿ ಸಂಸಾರ ಮಾಡು ನೀನು ನನಗೆ ಬೇಕಿಲ್ಲ

ಎಸ್ಟೆ ಸುಂದರ ಹುದಿಯರು ಇದ್ರೂ ನಿನ್ನಂತೆ ಅವರಾರಿಲ್ಲ
ಕೆಲಸದ ಬಳಿಕ  ಕಲ್ಯೆಳೆಯುವ ಅವರ  ನಿನ್ ಜೊತೆ ಹೋಲಿಕೆ ಸರಿಹೊಗಲ್ಲ
ಹೃದಯ ತುಂಬಿ ಪ್ರೀತಿಸುವ ನಿನ್ನ ನಾನು ಎಂದೆಂದು  ಮರಿಯಲ್ಲ :)

ಮಂಗಳವಾರ, ಜನವರಿ 29, 2013

ನೀನಾರೋ

ಹಿತವಾದ ಬೆಳಕಲ್ಲಿ  ಸುಳಿವ ತಂಗಾಳಿಯಲಿ
ನಕ್ಷತ್ರದಂತೆ ಹೊಳೆವವ  ನೀನಾರು ?

ಬೆಚ್ಚಗಿನ ಹೊದಿಕೆಯಲಿ ಅವಿತು
ಕಿಟಿಕಿಯ ಬಳಿ  ಇಣಿಕಿ ಕದ್ದು ನೋಡುವವ ನೀನಾರು

ಕಾಮನ ಬಿಲ್ಲಿನಲಿ ಮಲ್ಲಿಗೆ ಹೂ ಬಿಟ್ಟು 
ಹೃದಯಕೆ ಗುರಿಇಟ್ಟು  ಹೊಡೆದವ  ನೀನಾರು
ರತಿಯು ನಾಚುವಂತೆ ನಾಚಿಕೆಯು
ಬರುತಿಹುದು ಅದನೋಡಿ ನಗುತಿರುವವ  ನೀನಾರು

ದೂರದಲಿ ನಿಂದು ಹಾರುವ ಮುತ್ತನ್ನು
ಕೊಟ್ಟು  ಮೈ ಬಿಸಿ ಏರಿಸುತಿರುವವ ನೀನಾರು
ಹುಣ್ಣಿಮೆ ರಾತ್ರಿಯಲಿ ಆಸೆಗಳ ಉಕ್ಕಿಸಿ
 ಸೇರೆಯಿಡಿಯಲು  ಬಂದವ  ನೀನಾರು

ಹೃದಯಕ್ಕೆ ತಂತಿಯ ಬಿಗಿದು ಪ್ರೀತಿರಾಗವ
ನುಡಿಸಿ ನನಗಾಗಿ ಮಿಡಿಯುವವ ನೀನಾರು  
 
ಎಲ್ಲಿ ನೋಡಿದರಲ್ಲಿ ನಿನ್ನದೇ ನೆನಪಾಗುವುದು
ಚಂದಿರನಲಿ ಅವಿತಿರುವವನೆ ನೀನಾರೋ

ಪ್ರೀತಿಸುವ ದಿನದಂದು ಬಿಳಿಯ ಉಡುಗೆಯ
 ಉಟ್ಟು ಕೆಂಗುಲಾಬಿ ಇಟ್ಟವನು ನೀನಾರೋ
ನೀ ಇಟ್ಟ  ಗುಲಾಬಿಯ ಮುಡಿದು ಎದುರಿಗೆ
ಬಂದರೋ  ಅರಿಯದೆ ಹೋಯಿತೆ ನಾನ್ಯಾರೋ

ಮಂಗಳವಾರ, ಜನವರಿ 22, 2013

ನೆನಪಾಯಿತು

ದೂರದ ಉರಿನಲ್ಲಿ ಹಿಮದ ಆ ಮಳೆಯಲಿ
ಛಳಿಯ ಆ ಗಾಳಿಗೆ ನಿನ್ನ ನೆನಪಾಯಿತು

ಮೋಡಗಳ ಮರೆಯಲಿ ಬೆಳ್ಳಿ ಅರಮನೆಯೊಂದು
ನೋಡ ನೋಡುತ್ತಲೇ ಅನಾವರಣವಾಯಿತು 
ಮುಂಜಾವಿನ ಗಾಳಿಯ ಮಹಡಿಯ ಕಿತಿಕಿಯಲಿ
ನಿನ್ನ ಮುಂಗುರುಳು ಹಾರುತ್ತ ನನ್ನ ಕರಿತಿತ್ತು

ಉದಯಿಸಿದ ಸೂರ್ಯನ ಕಿರಣಗಳು ಬಿದ್ದಂತೆ
ನಿನ್ನ ಕಣ್ಣುಗಳು ಬಿಡದಂತೆ ನನ್ನ ನೋಡುತ್ತಿತ್ತು
ನೀ ಬರೆದು ಕೊಟ್ಟ ಪತ್ರವ ಹಿಡಿದ ಹಂಸವೊಂದು
ಹಾರುತ್ತ ಹಾರುತ್ತ  ನನ್ನಕಡೆ ಬಂದಂತೆ ಆಯಿತು 

ನಿನ್ನೊಲುಮೆ ಅರಮನೆಗೆ  ಪ್ರೀತಿಯ ಸೆರೆಮನೆಗೆ
ಭಂದಿಸಿ ಕರೆತರುವಂತೆ  ಪತ್ರದಲಿ ಬರೆದಿತ್ತು
ಹೆಗಲಲಿ  ಕೂರಿಸಿಕೊಂಡು ತೇಲುತಾ  ಸಾಗಿದ ಹಂಸ
ನಿನ್ನ ಹೃದಯದಾ ಅರಮನೆಗೆ ಸೇರಿದಂತಾಯಿತು

ಒಲವಿಂದ ನೀ ಬಂದುದೂರದಿಂದಲೇ ನಿಂತು  
ಚುಂಬಿಸಿದಾಗ ಮೈ ಬೆವರಿ ನೀರಾಯಿತು 
ಬಂದಿಯಾಗಿರುವೆ  ಒಳಗೆ ಬಳಿಬಂದು ಬೀಗ ತೆಗೆ 
ತೆಗೆದಾಗ ಬಾಗಿಲು ಮಂಚದಿಂದ ಬಿದ್ದಂತಾಯಿತು