ಮಂಗಳವಾರ, ಜನವರಿ 22, 2013

ನೆನಪಾಯಿತು

ದೂರದ ಉರಿನಲ್ಲಿ ಹಿಮದ ಆ ಮಳೆಯಲಿ
ಛಳಿಯ ಆ ಗಾಳಿಗೆ ನಿನ್ನ ನೆನಪಾಯಿತು

ಮೋಡಗಳ ಮರೆಯಲಿ ಬೆಳ್ಳಿ ಅರಮನೆಯೊಂದು
ನೋಡ ನೋಡುತ್ತಲೇ ಅನಾವರಣವಾಯಿತು 
ಮುಂಜಾವಿನ ಗಾಳಿಯ ಮಹಡಿಯ ಕಿತಿಕಿಯಲಿ
ನಿನ್ನ ಮುಂಗುರುಳು ಹಾರುತ್ತ ನನ್ನ ಕರಿತಿತ್ತು

ಉದಯಿಸಿದ ಸೂರ್ಯನ ಕಿರಣಗಳು ಬಿದ್ದಂತೆ
ನಿನ್ನ ಕಣ್ಣುಗಳು ಬಿಡದಂತೆ ನನ್ನ ನೋಡುತ್ತಿತ್ತು
ನೀ ಬರೆದು ಕೊಟ್ಟ ಪತ್ರವ ಹಿಡಿದ ಹಂಸವೊಂದು
ಹಾರುತ್ತ ಹಾರುತ್ತ  ನನ್ನಕಡೆ ಬಂದಂತೆ ಆಯಿತು 

ನಿನ್ನೊಲುಮೆ ಅರಮನೆಗೆ  ಪ್ರೀತಿಯ ಸೆರೆಮನೆಗೆ
ಭಂದಿಸಿ ಕರೆತರುವಂತೆ  ಪತ್ರದಲಿ ಬರೆದಿತ್ತು
ಹೆಗಲಲಿ  ಕೂರಿಸಿಕೊಂಡು ತೇಲುತಾ  ಸಾಗಿದ ಹಂಸ
ನಿನ್ನ ಹೃದಯದಾ ಅರಮನೆಗೆ ಸೇರಿದಂತಾಯಿತು

ಒಲವಿಂದ ನೀ ಬಂದುದೂರದಿಂದಲೇ ನಿಂತು  
ಚುಂಬಿಸಿದಾಗ ಮೈ ಬೆವರಿ ನೀರಾಯಿತು 
ಬಂದಿಯಾಗಿರುವೆ  ಒಳಗೆ ಬಳಿಬಂದು ಬೀಗ ತೆಗೆ 
ತೆಗೆದಾಗ ಬಾಗಿಲು ಮಂಚದಿಂದ ಬಿದ್ದಂತಾಯಿತು 

1 ಕಾಮೆಂಟ್‌: