ಋತು ಬದಲಾವಣೆಯಿಂದ
ಹೊಸ ಗಾಳಿಯು ಬೀಸುತಿದೆ
ವಿಜಯ ತುಂಬಿದ ಸಂವತ್ಸರದ
ನವ ವಸಂತವು ಬರುತಲಿದೆ
ಕರಿ ಕೋಗಿಲೆ ಚಿಗುರನು ತಿನ್ನುತಲಿ
ಸ್ವರ ಹಿಡಿದು ಹಾಡುತಿದೆ
ಹೂಗಳ ಗೊಂಚಲ ತುದಿಯಲ್ಲಿ
ಭೃಂಗಗಳು ಸುಸ್ವರ ಸೂಸುತಿವೆ
ಬಣ್ಣ ಬಣ್ಣದ ಹೂಗಳ ಚಂದವನು
ಬರಿ ಪದಗಳಲಿ ಬಣ್ಣಿಸಬಹುದೆ
ಪ್ರಕೃತಿಯ ಹಸಿರು ಉಡುಗೆಯನು
ಹೊಸ ಹಾಡಲಿ ಹರಿಬಿಡಬಹುದೆ
ನೂತನ ಸೃಷ್ಟಿಯ ಆಗಮನ
ಧರಣಿಗೆ ಹೊಳಪನು ನೀಡುತಿದೆ
ವಿನೂತನ ಭಾವದ ಆಸೆಗಳು
ಮೂಡುತ ಮೈ ಮನ ಕುಣಿಸುತಿದೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ