ನೀ ನೋಡುವ ನೋಟಕೆ ಏನೆಂದು ಹೆಸರಿಡಲಿ
ನೋಟದೊಳಗೊಂದು ಪ್ರೀತಿ ಚುಮ್ಮುತಿಹುದು
ನಗುವಿನ ಉಲ್ಲಸಕೆ ನಾ ಹೇಗೆ ಸ್ಪಂದಿಸಲಿ
ಉಲ್ಲಸದೊಳಗಿಂದ ಕನಸು ಹೊಮ್ಮುತಿಹುದು
ನಿನ್ನೆದೆಯ ಮಿಡಿತದಕೆ ಸುಸ್ವರ ಹಾಡುತಿರಲಿ
ಮೋಹದ ಅಲೆಗೆ ಮನಸು ರಮ್ಯವಾಗುತಿಹುದು
ನಿನ್ನೊಲುಮೆಯ ಸ್ಪರ್ಶಕೆ ಬಡಿತ ಏರುತಿರಲಿ
ನವಿರಾಗಿ ನಾಚಿಕೆಯು ಭಾಸ್ಮವಾಗುತಿಹುದು
ನಿನ್ನುಸಿರ ಉಸಿರಲ್ಲಿ ನನ್ನಹೆಸರು ಹುದುಗಿರಲಿ
ಒಲವಿನ ಲೋಕದವು ಹೆಮ್ಮರವಾಗುತಿಹುದು
ನೀ ಇಲ್ಲದೆ ನಾ ಇಲ್ಲ ಎಂದು ಸಾರಿ ಹೇಳುತಲಿ
ನನ್ನೊಳಗಿನ ಮೃದು ಹೃದಯ ಕೆಮ್ಮುತಿಹುದು
ನನ್ನನಾವರಿಸಿ ಬಳಿಬಂದು ಬಿಗಿದಪ್ಪಿಕೊಳ್ಲುತಲಿ
ನೀ ನನಗಾಗಿ ಎಂದು ಹೆಮ್ಮೆಯಿಂದ ಹೇಳಬಹುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ