ಇರುವನು ಜೊತೆಯಲ್ಲಿ ಇದ್ದರು ಇರದಂತೆ
ತರುವನು ನಗುವನು ಲತೆಯೇ ನಾಚುವಂತೆ
ಎಳೆಯ ಚಿಗುರಿನಲಿ ಹೊಳೆವ ಇಬ್ಬನಿಯಂತೆ
ಬಿಳಿಯ ವಜ್ರದಲಿರುವ ಚಲುವ ಬಣ್ಣಗಳಂತೆ
ಬೆಳಗುವ ದೀಪದಲಿ ತಿಳಿ ಎಣ್ಣೆ ಇದ್ದಂತೆ
ಗೆಳೆಯ ನೀ ಇರುವೆ ಚಂದಿರನ ಬೆಳಕಂತೆ
ನೀರಿನಲಿ ತೇಲುವ ಕಮಲದೆಲೆಯಂತೆ ಸಾ-
ಗರದೊಳಗೆ ಹುದುಗಿದ ರತ್ನ ಪರ್ವತದಂತೆ
ಹೂರಣದಲಿ ಸಿಹಿಯಾದ ಬೆಲ್ಲ ಬೆರೆತಂತೆ
ಇರುವೆ ನೀ ಗೆಳೆಯ ಎಲೆಮರೆ ಕಾಯಂತೆ
ಮಳೆಗಾಲದಲಿ ಸಿಗುವ ಆಸರೆಯ ಮರದಂತೆ
ಚಳಿಗಾಲದಲಿ ಹೋದೆವ ಕರಿ ಕಂಬಳಿಯಂತೆ
ಬಳಲಿದ ಬೇಸಿಗೆಯಲ್ಲಿ ಬರುವೆ ತಂಗಾಳಿಯಂತೆ
ಗೆಳೆಯ ನೀ ಇರುವೆ ಚುಲುಮೆಯ ಸೆಲೆಯಂತೆ
--ಜೀವನ ಜ್ಯೋತಿಯಂತೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ