ಎಲ್ಲಿ ಹೋದೆ ನನ್ನ ನಲ್ಲೆ
ಬಂದು ನಗುವ ಚಲ್ಲದೆ \\ ಪ \\
ಬೆಲ್ಲ ದಂತ ಮಾತುಕೇಳಿ
ವರುಷವಾಯ್ತು ಮೆಲ್ಲಗೆ \\ ಅ ಪ \\
ಹೃದಯ ಮೀಟಿ ನುಡಿಸಿ ಹಾಡಿ
ಬೆಳಗೋ ಕಂಗಳಿಂದ ನೋಡಿ
ಪ್ರೀತಿರಾಗ ಬರಿದು ಮಾಡಿ \\೧ \\ ಎಲ್ಲಿ
ಆಸೆಯಿಂದ ಕನಸು ತುಂಬಿ
ಭಾಷೆಯಿಂದ ಸೊಗಸು ತುಂಬಿ
ಹುಸಿ ವಿಷಯ ಹೃದಯ ತುಂಬಿ \\೨\\ಎಲ್ಲಿ
ಮಲ್ಲಿಗೆ ಹೂವ್ವಿನಂತೆ ನೀನು
ಮೆಲ್ಲ ಮೆಲ್ಲಗೆ ತಿಳಿದೇ ನಾನು
ಕಲ್ಲು ಮನಸು ಮಾಡಿ ನೀನು \\೩\\ಎಲ್ಲಿ
ಇದ್ದು ಜೊತೆಗೆ ದಿನವು ಕಾಡಿ
ತಿದ್ದಿ ತಪ್ಪನು ಪ್ರೀತಿ ಮಾಡಿ
ಕದ್ದು ನನ್ನ ಹೃದಯ ಸೇರದೆ \\4\\ ಎಲ್ಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ