ಮಂಗಳವಾರ, ನವೆಂಬರ್ 29, 2011

ಮದುವೆ ಮಾಡಿಕೋ

*ಮದುವೆ ಮಾಡಿಕೋ*

ನೋಡಿದರೆ ತಿರುಗಿ ನೋಡುವುದು ಯಾಕೋ
ನುಡಿಯನ್ನು ಕೇಳಿದರೆ ಮಧುರ ಸೊಗಸ್ಯಾಕೋ 
ನೀ ನಡೆದರೆ ಹೃದಯ ಇಲ್ಲಿ ಕುಣಿಯುವುದೇಕೋ
ನಿನ್ನ ನಗುವಿಗೆ ನಾಚಿ ನಾ ಬೀಳುವುದೇಕೋ

ಮುಂಗುರಳು ಹಾರಲು ಹಕ್ಕಿ ಹಾಡುವುದ್ಯಾಕೋ
ಒತ್ತಾಗಿ ಹೆಣೆದ ಜಡೆಗೆ  ಮನಸೋಲುವುದೇಕೋ  
ಆ ಮುಗುಳ್ನಗೆಯು ಸಂಚಲನ ಮೂಡಿಸುವುದೇಕೋ
ನೀ ಎದುರಿದ್ದರು ನಾ ಕನಸಿಗೆ ಜಾರುವುದೇಕೋ

ನೀ ಮುಡಿದ ಮಲ್ಲಿಗೆಯು ಇಷ್ಟು ಸುಮಧುರವೇಕೋ
ನಿನ್ನ ಸ್ಪರ್ಶದಿಂದ ಮನಸು ಹಿಗ್ಗಿ ನವಿರೇಳುವುದೇಕೋ
ಆ ಮುಗ್ದ ಚಂಚಲತೆಯ ಒಲವಿನ ಪ್ರೀತಿಯೇಕೋ
ದಯವಿಟ್ಟು,
ಒಮ್ಮೆ ಹೂ ಅಂದು ನನ್ನ ಮದುವೆ ಮಾಡಿಕೋ :)

-ಪ್ರಭಂಜನ

ರತ್ನದ ಕಣ್ಣು


ನಗುಮೊಗದ ನೋಟಕೆ
ಮನಸೋತೆ ನಾನಿಂತು
ಹಾಡದೆ ಹೇಗೆ ಇರಲಿ ಚಲುವೆ ..  .ಪ.

ಬಾಗಿದಾ ಬಿಲ್ಲಿನಂತೆ
ತೀಡಿದ ಆ ಹುಬ್ಬು
ನಗುತಿದೆ ನೋಡಿ ನನ್ನನ್ನು 
ಬಿಟ್ಟು ಪ್ರೀತಿಯ ಬಾಣ ಎದೆಗೆ   ೧

ನಿನ್ನ ರತ್ನದ ಕಣ್ಣು
ಸೆಳೆಯುತಿದೆ ನನ್ನನ್ನು
ತಿರುಗಿ ನೋಡಿದರೆ
ಮನಸು ನಿನ್ನ ಕಡೆಗೆ  2

ಆ ಚಿತ್ರದಲ್ಲಿ ಬರೆದಂತೆ
ನೀಳವಾದ ನಾಸಿಕವು
ಬಾ ಎನ್ನುತಿದೆ  ಮೋಹದ 
ಉಸಿರು ಸೇರುವಂತೆ   ೩

ಹೊಳೆವ ತುಟಿ ಅಂಚಿನಲ್ಲಿ
ಹವಳಗಳು ಇಟ್ಟಂತೆ
ಅಮೃತದ ಹನಿಯೊಂದು
ಕೂಗಿ ನನ್ನ ಕರೆದಂತೆ   ೪

ಅದರ ಸವಿ ಸವಿಯಲು
ಬರಬೇಕು ನೀ ಇರುವಲ್ಲಿಗೆ
ಮೂಡಿದ ಮಲ್ಲಿಗೆಯು ಹೂ
ಅರಳುವ ಮುಂಚೆ  5

ಅರಳಿದ ದುಂಡು ಮಲ್ಲಿಗೆಯ
ಸಿರಿ ಮೊಗವು ಹೊಳೆಯುತಿದೆ
ಕರೆದು ನನ್ನನು  ಮೆತ್ತಗೆ ಒಮ್ಮೆ
ಮುತ್ತಿಕ್ಕಿ ತಬ್ಬಿಕೊಳ್ಳುವಂತೆ   6

 :- ಪ್ರಭಂಜನ

ಶನಿವಾರ, ಅಕ್ಟೋಬರ್ 15, 2011

ಅರಮನೆಗೆ

ನಡೆಯೋಣ ಅರಮನೆಗೆ
ಇದುತ ಬೀಗುತ ನಡುಗೆ
  ರತ್ನಗಂಬಲಿಹ ಮೇಲೆ
ಮೋಹಕ ನಗೆಯ ಚಲ್ಲಿ ..||

ಬೆಳಕಿನರಮನೆಯಲ್ಲಿ
ನಿಂತಿಹರು ಜನರು ಅಲ್ಲಿ
ಸ್ವಾಗತಿಸಲು ನಮಗೆ
ಮಲ್ಲಿಗೆ ಹೂವ ಚಲ್ಲಿ ,,,1

ಕಹಳೆ ತುತ್ತೂರಿ ತಮಟೆ
ನುಡಿಸುವರು ಲಯದಲ್ಲಿ
ದರಬಾರು ಸಮಯಕೆ
ಇನಿದನಿಯ ರಂಗು ಚಲ್ಲಿ ,,,2

ರತ್ನದ ಮೇಲುಡುಗೆಗೆ
ಚಿತ್ತಾರ ತುಂಬಿಹರು
ನಮ್ಮ ಮನತಣಿಸಲು
ಹಲವು ಬಣ್ಣ ಚಲ್ಲಿ ...3

ದರಬಾರು ಕೊಣೆಯನು
ಅಚ್ಹಾಗಿ ಸಿಂಗರಿಸಿಹರು
ವತ್ತಾಗಿ ಜೋಡಿಸಿ ಸಿಂಹಾಸನ
ದೆಸರ ಸಮಯ ದಲ್ಲಿ ...4

ಬಂದಿರುವ ಜಾತ್ರೆ ಜನಗಳೇ
  ನಮ್ಮ ನಿಜ ಪ್ರಜೆಗಳು
ಉಲ್ಲಾಸದಿ ನಿಂತಿಹರು
ಅಂದದ ನೋಟ ಚಲ್ಲಿ ...5

ನಲಿಯುವ ಹರಿಯದ ಹುಡುಗಿ
ಹೊಲುತಿಹಳು ನರ್ತಕಿಯ
ಬಳುಕುತಿದೆ ನಡುವು
ವೇಣಿ ವಾದ್ಯದ ಜೊತೆಯಲ್ಲಿ ..6

ಅಳುವ ಮಕ್ಕಳ ಧ್ವನಿಯೇ
ನಮ್ಮ ಅಸ್ತಾನ ಸಂಗೀತ '
ಸೀಟಿ ,ಪೀಪಿ ಉತ್ಸಾಹದ ಕೇಕೆ
ವಡ್ದೊಲವ ನೆನಪಿಸುತಿಹುದಿಲ್ಲಿ ...7

ಅನೆ ಕುದುರೆ ಒಂಟೆಗಳು
ಕೊಳಲು ನುಡಿಸುವ ಅರಕ್ಷಕರು
ಸುತ್ತ ನಿಂತಿಹರು ಸೈನಿಕರಂತೆ
ನಮ್ಮ ಮೆರವಣಿಗೆಯಲ್ಲಿ ...8

ತೋರುತಿಹುದು ಇಂದ್ರ ಸಭೆ
ಮಂತ್ರಿ ಮಾಗಧ ಹೋಗಳು ಭಟ್ಟರು
ಎಬ್ಬಿಸಿದೆ ಯಾಕೆ ನೀನು ನನ್ನ
ಅವರು ನನಗೆ ಪರಾಕು ಹೇಳುವಸ್ಟರಲ್ಲಿ 9

ಬುಧವಾರ, ಸೆಪ್ಟೆಂಬರ್ 28, 2011

ಜಾರಿ ಕುಳಿತೆ

ನೋಡುತಿರುವೆ ನಿನ್ನ ಕುಂಚದ ಚಿತ್ರವನ್ನ
ಕನಸಿಗೆ ಜಾರಿ ಕುಳಿತೆ ಮೀರಿ ಸಮಯವನ್ನ ...............
ಹೊಗಳಲು ಬಳಸುವೆ ಹೊಸ ಪದಗಳನ್ನ
ಹೋದ ಕಡೆಯಲ್ಲ ಹುಡುಕುವೆ ನಿನ್ನ ಕಣ್ಣ
ನೀನೆಂದು ಹಿಂದೆ ನೆಡೆದು ಹೋದೆ ಚಿನ್ನ
ತಿರುಗಿ ನೋಡಿ ಬೈದರು ಬೇಸರವಿಲ್ಲ ಇನ್ನ...
ನನ್ನೊಳಗೆ ನಾ ಕಾಣುತಿರುವೆ ನಿನ್ನ
ಹೊಡೆದಿರುವೆ ನೀ ನನ್ನ ಮನಸಿಗೆ ಕನ್ನ
ಹೃದಯದೊಳಗೆ ಬಚ್ಚಿ ಇಟ್ಟಿರುವೆ ನಿನ್ನ
ಮತ್ತೆ ಎದುರಿಗೆ ಬಂದರೆ ಒಮ್ಮೆ ಎಷ್ಟು ಚನ್ನ ....
ಹಾರುತಿದೆ ಸರಿಮಾಡಿಕೋ ದುಪ್ಪಟವನ್ನ
ಆ ಮಧುರ ತಂಗಾಳಿ ಸೂಕ್ಲಿ ನನ್ನ ಮೈಯನ್ನ
ಮುಂಗುರುಳು ನೋಡುತ ನಾ ಹಾಡುವೆ ಚಿನ್ನ
ಕಣ್ಣರಳಿಸಿ ನೋಡಿ ಒಂದು ನಗುಬೀರು ಇನ್ನ ......
ಹೃದಯ ಹಾಡುತಿದೆ ಕೊಡು ಪ್ರೀತಿಯನ್ನ
ಒಪ್ಪಿಸುವೆ ನಾ ನಿನ್ನ ಅಪ್ಪ ಅಮ್ಮನ ಚಿನ್ನ
ಸಮಯ ಮೀರುತಿದೆ ವರಿಸಲು ಬಾ ನನ್ನ
ತಿಳಿಹಸಿರ ಹಾಸಂತೆ ಸಾಗಿಸುವ ಜೀವನವನ್ನ ...

ಮಂಗಳವಾರ, ಸೆಪ್ಟೆಂಬರ್ 27, 2011

ನಲಿದಾಡು

ನಲಿದಾಡು ಬಾ ನಲ್ಲೆ
ಹೃದಯ ಕಪಾಟಿನ ಒಳಗೆ
ಅಪಧಮನಿ ಇಂದ ಹೂಕ್ಕು
ಅಭಿಧಮಿನಿ ಇಂದ ಹೊರ ನೆಡೆದು
ಹೊಸಚೈತನ್ಯ ತುಂಬುತಲಿ 1

ಹೋರಾಡು ಬಾ ಗೆಳತಿ
ಅತಿಸೂಕ್ಷ ಜನಗಳ ಜೊತೆಗೆ
ಪ್ರೀತಿ ಇಂದ ಬಳಿ ಬಂದು
ಮೋಹದಿಂದ ಹೊಡೆದೋಡಿಸಿ
ಆಯುರಾರೋಗ್ಯ ತುಂಬುತಲಿ 2

ಉಲ್ಲಸಗಳಿಸು ಬಾ ಚಲುವೆ
ಉಸಿರು ತಿಳಿಗೊಳಿಸಿ ಶ್ವಾಸ ಕೋಶದಲಿ
ಪಸರಿಸಿ ಆಮ್ಲಜನಕ ಅಣು ಕಣದ
ಉಂಗುಸ್ತದಿಂದ ನಡು ನೆತ್ತಿಯವರೆಗೆ
ನವಿರಾಗಿ ಮನಸು ನೀ ತುಂಬುತಲಿ 3

ಚುಚ್ಚಿದರೆ ನೀ ಹೊರ ಬರುವೆ
ನಗುತ ನೀ ಒಳಗೆ ಇರು ಒಲವೆ
ಬೆಳಕಿನ ಲೋಕವನ್ನು ಸೋಗಸಾಗಿಸಿ
ತೋರಿಸುವೆ ಹೊಸ ಅರಮನೆಯ
ಚಿತ್ತಾರದ ಕನಸು ತುಂಬುತಲಿ 4

ಕೊಬ್ಬಿ ನೀ ಹರಿಯದಿರು ವೇಗ
ಕಡಿಮೆ ಯಾಗುವುದು ರಹದಾರಿ
ಕುಜ್ಬ ವಾಗುವುದು ತಳಮದಲಿ
ನೆಡೆದು ಬಡಿತ ನಿಲ್ಲಿಸುವೆ
ನೀ ಎದೆಯ ಹೊರಗೆ ತುಂಬುತಲಿ 5

ನೀನಿಲ್ಲದೆ ಹೃದಯ ಬದಿಯಲಾರದು  ಲಯದಿ
ನೀನಿಲ್ಲದೆ ನರನಾಡಿ ಜೀವ ತಡಿಯಲಾರವು
ನೀನಿಲ್ಲದೆ ಉಸಿರು ಏರಿಳಿತ ವಾಗದು
ನೀನಿಲ್ಲದೆ ನನ್ನ ಕನಸು ನನಸಾಗದು
ನನಗುತ ಬಾ ಬಾಲೆ ನಮ್ಮ ಬದುಕು ತುಂಬುತಲಿ 6

ಎಳೆಯೋಣ ಬಾ

ಮರಭೂಮಿಯಲ್ಲಿ ಕಂಡ ನೀರಿನ ಒರತೆಯಂತೆ
ಬಂಜರು ನಾಡಲ್ಲಿ ಸಿಕ್ಕ ಗುಲಾಬಿ ಹೂ ಅಂತೆ
, ತೂಫಾನಿನಲಿ ಸಾಗುತಿರುವ ಹಡಗಿನಂತೆ ,
ಕತ್ತಲಲಿ ಬೆಳಗುವಾ ಬಾ ನಲ್ಲೇ ನಂದಾ ದೀಪದಂತೆ , 1

ನಡೆಯುತಿದ್ದ ದಾರಿಯಲಿ ಬಂದೆ ನೀ ಮಿಂಚಂತೆ
ನೀ ಕಂಡೆ ಹಸಿರುವನದಲ್ಲಿ ಹೊಸ ಚಿಲುಮೆಯಂತೆ
ಅರಿವಾಯಿತು ನನಗೆ ನೀ ನನಗಾಗಿ ಬಂದಂತೆ
ಇಷ್ಟು ದಿನ ಹುಡುಕಿದ್ದು ಜೀವನ ಸಾರ್ಥಕ ವಾದಂತೆ 2

ನೀ ಇದ್ದಾರೆ ಜೊತೆಯಲ್ಲಿ ಉಕ್ಕುತ್ತಿರುವ ಜಲಪಾತದಂತೆ ,
ಭೋರ್ಗರೆಯುತಿರು ಸದಾ ಪ್ರೀತಿಯೆಂಬ ಜೀವ ಜಲದಂತೆ,
ಸೂಸುತಿರುವೆ ಪ್ರೇಮದ ಮಧುರ ಅರಳಿದ ಹೂವಂತೆ
ಬೆಳಗುತಿರು ನಿರಂತರ ನನ್ನ ಜೀವನದಲಿ ಸೂರ್ಯನಂತೆ 3

ಹೀಗೆ ಎಂದೆಂದೂ ನನ್ನೊಟ್ಟಿಗೆ ನೀನಿರು ಹಾಲು ಜೀನಿನಂತೆ
ಕೈ ಹಿಡಿದು ನೆಡೆಸು ನನ್ನ ನೀ ಮುಗ್ಧ ಮಗುವಿನಂತೆ
ಸಾಗಬೇಕಿದೆ ನಾವಿಬ್ಬರು ಬಹು ದೂರ ವಿಮಾನದಂತೆ
ಜೀವನದ ತೇರನ್ನು ಎಳೆಯೋಣ ಬಾ ಕಂಡ ಕನಸಂತೆ !

ಗುರುವಾರ, ಸೆಪ್ಟೆಂಬರ್ 8, 2011

ಸಿಹಿ ಮುದ್ದು ಕಂದ

ಮಲಗು ಮಲಗೆನ್ನ ಸಿಹಿ ಮುದ್ದು ಕಂದ
ಆ ನಗುಮೊಗವ ನೋಟವು ಎಂಥ ಆನಂದ

ಕಾಲ ಹೆಬ್ಬೆಟ್ಟನು ಹಿಡಿದೆತ್ತಿ ಬಾಯೊಳಗೆ ಇಟ್ಟು
ಕಷ್ಟ ವಿಲ್ಲದೆ ಸವಿವ ಸವಿ ನಿನಗೆ ಎಷ್ಟು ಅಂದ
ಕೃಷ್ಣ ನೀ ಎಂಬಂತೆ ತೋರುತಿದೆ ಈ ರೂಪ
ಕ್ಷಣವೋ ತಪ್ಪಿಸಲಾರೆ ನೋಡುಲು ನಿನ್ನಾರವಿಂದ ೧

ಕಡಗೋಲು ಅಡಗೋಲು ಆಟಕೆ ಕೊಡುವೆನು
ಕಾಲ ಕಳೆಯದೆ ಮಲಗು ನೋಡು ಗುಮ್ಮ ಬಂದ
ಕಟ್ಟಿದ ತೊಟ್ಟಿಲು ತೂಗಿ ಕೈ ಸೋಲುತಿದೆ
ಕಾಟ ಕೊಡಡಿರೋ ಮಗುವೆ ನೀನಲ್ಲವೇ ಕಂದ 2

ಕೈ ಎರೆಡು ತೋರುತ ಕಾಲುಗಳು ಮೇಲೆತ್ತಿ
ಕಣ್ಣು ಹೊರಳಿಸಿ ಆಕಾಶ ನೋಡುವುದೇ ಚಂದ
ಕಣ್ಣುತಪ್ಪಿಸಿ ಮಲಗಿದಂತೆ ಮುಖ ಮಾಡಿ ಎದ್ದು
ಕೂರುವ ಈ ನಟನೆಯ ನೀ ಕಲಿತೆ ಯಾರಿಂದ 3


ಮಂಗಳವಾರ, ಆಗಸ್ಟ್ 2, 2011

ಹುಡುಗಿ ಬೇಕಾಗಿದ್ದಾಳೆ

ಹುಡುಗಿ
ಬೇಕಾಗಿದ್ದಾಳೆ
ಇರಬೇಕು ತುಂಬಾ
ಸಿಂಪಲ್ !

ನಕ್ಕರೆ
ಗಲ್ಲದ ಮೇಲೆ
ಬೀಳಬೇಕು
ಡಿಂಪಲ್ !

ಅವಳ
ತಲೆಯಲ್ಲಿ ಇರಬೇಕು
ಪುಟ್ಟ ಪ್ರೊಸೆಸರ್
ಇಂಟೆಲ್ !

ಅವಳ
ರೂಪ-ಲಾವಣ್ಯ ಕಂಡು
ಬಾಯಿಬಿಡಬೇಕು
ಪಕ್ಕದ್ಮನೆ ಅಂಕಲ್ !

ಅವಳು
ಸ್ನಾನಕ್ಕೆ ಹಚ್ಚಬೇಕು
ದಿನಾ ಸೋಪು
ಸಿಂಥಾಲ್ !

ಅವಳ
ಅಂದ ಹೊಗಳುತ್ತಾ
ಕವಿಯಾಗಬೇಕು
ಮೆಂಟಲ್ !

ಎತ್ತರದಲ್ಲಿ
ಅವಳಾಗಿರಬೇಕು
ರಾಜಸ್ತಾನದ
ಕ್ಯಾಮೆಲ್ !

ಅವಳ
ಗಲ್ಲ ನೋಡಿ ನೆನಪಾಗಬೇಕು
ಕಾಶ್ಮೀರದ ಸಿಹಿ
ಆಪಲ್ !

ಅವಳು
ಬೀದಿಯಲ್ಲಿ ನಡೆದರೆ
ಕಾಮೆಂಟ್ರಿ ಹೇಳಬೇಕು
ಇಯಾನ್ ಚಾಪೆಲ್ !

ಮುಖದ ಮೇಲೆ
ಇರಲಿ ಒಂದೇ
ಒಂದು ಹರೆಯದ
ಪಿಂಪಲ್ !

ನಮ್ಮ ಪ್ರೀತಿಯೆಂಬ
ಧರ್ಮಕ್ಕೆ ಅವಳಾಗಬೇಕು
ಗೀತಾ-ಕುರಾನ್
ಬೈಬಲ್ !

ಅವಳು ಪ್ರೀತಿ
ಮೆಚ್ಚಿ ನಾ ಕಟ್ಟಬೇಕು
ಇನ್ನೊಂದು
ತಾಜ್ಮಹಲ್ !

ಎಲ್ಲದಕ್ಕೂ ಮೊದಲ
ಅವಶ್ಯಕತೆ
ಅವಳಾಗಿರಬೇಕು
ಸಿಂಗಲ್ !

ಇವಳೇನಾದರು
ನಿಮಗೆ ಸಿಕ್ಕರೆ
ನನ್ನ ಈ ಅಡ್ರೆಸ್‌ಗೆ ಮಾಡಿ
ಈ-ಮೇಲ್

ಲೈಫ್ ಅಂದ್ರೆ

ಲೈಫ್ ಅಂದ್ರೆ ಬರೀ ಸುಳ್ಳು
ಲೈಫ್ ಅಂದ್ರೆ ಬರೀ ಗೋಳು
ಲೈಫ್ ಅಂದ್ರೆ ಬರೀ ಮುಳ್ಳು
ಲೈಫ್ ಅಂದ್ರೆ ಬರೀ ಜೊಳ್ಳು ಜೊಳ್ಳು

ಮುದ್ದಾದ ಮುಗುವಿಗೆ ಇದೆ
ಸುಂದರವಾದ ಬಣ್ಣದ ಲೈಫ್
೫ದು ವರ್ಷದ ನಂತರ ಫುಲ್
ಓದಿ ಬರಿಯೋ ಸ್ಕೂಲ್ ಲೈಫ್..

ಕಾಲೇಜ್ ಗೆ ಬಂದ ರಂತೂ
ಸೊಗಸಾದ ಸಮಯ ಕಲಿಯೋ ಲೈಫ್
ಲವ್ ಲೈಫ್ ಸುರು ಆದ್ರೆ
ಮುಗೀತು ಅಲ್ಲಿಗೆ tean age ಲೈಫ್

life is full of adjustment
to achieve some thing in commitment
with lots of interest and entertainment
if not it will be punishment

ಕೆಲಸ ಸಿಕ್ಕು ಮದುವೆಯ ನಂತರ
risk responsibility ಲೈಫ್.
ಮನೆ ಕಟ್ಟಿ ಕಾರ್ತೊಗೊಂದ್ರೆ
interest ಕಟ್ಟೋ ಲೈಫ್

ಮಕ್ಳಾ ಓದ್ಸಿ ಬರ್ಸಿ
ಆಟ ಅದ್ಸೋದು ಕುಷಿಯ ಲೈಫ್
ಅವರ achievements ನೋಡಿದರೆ
ಮುಗೀತು middle age ಲೈಫ್

ಪೇಪರ್ ನ್ಯೂಸ್ channele
ನೋಡೋದು ಮೋಜಿನ ಲೈಫ್
ಮೂಲೆ ಲಿ ಕುಳಿತು ಎಲ್ಲರ
ಅಡಿಸೋದು retaired ಲೈಫ್

ಕಾಯಿಲೆ ಕಸ ಅಂಟಿಸಿಕೊಂಡು
ಮಲಗೋದು old age ಲೈಫ್
ದೇವರು ಟಿಕೆಟ್ ಕೊಟ್ಟ ಅಂದ್ರೆ
ಮುಗೀತು ಈ ಲಾಂಗ್ ಲೈಫ್!

ಸೂಜಿ ಮಲ್ಲೆ

ಎಲ್ಲಿರುವೆ ನನ್ನ ಪ್ರೀತಿಯ ಒಲವೆ
ಕಾದಿರುವೆ ಬಾ ಬೇಗ ಎದುರಿಗೆ ಚಲುವೆ


ಕೊಡುವೆ ಉಡುಗರೆ ಒಲವಿನ ಓಲೆ
ಧರಿಸು ಅದರ ಜೊತೆ ಚಂದದ ಮಾಲೆ
ಹೊರಳಿಸಿ ನೋಡದಿರು ಮೂಲೆ ಮೂಲೆ
ನಿನ್ನೋಳಗಿರುವೆ ಇಣುಕಿ ನೋಡು ಬಾಲೆ

ನೀ ನನಗಾಗಿ ಎಂಬುದು ಬಲ್ಲೆ
ನನಗೆ ಹೇಳದಿರು ಎಂದು ವಲ್ಲೆ
ಹುಡುಕಿದೆ ನಾ ನಿನಗಾಗಿ ಎಲ್ಲಿ ಎಲ್ಲೇ
ಸಿಕ್ಕಾಗ ಒಂದು ಮುಗುಳ್ನಗು ಚಲ್ಲೆ

ಎಲ್ಲಿ ಹೋದರು ಅಲ್ಲಿಗೆ ಬರುವುದು ನಲ್ಲೆ
ಜೀವನ ಪಯಣ ಇರುವುದೆಲ್ಲ ಇಲ್ಲೇ
ನೀ ಹೆಜ್ಜೆ ಇಟ್ಟು ಬಂದರೆ ಜೊತೆಯಲ್ಲೇ
ಸುರಿಸುವೆ ದಾರಿ ತುಂಬಾ ಸೂಜಿ ಮಲ್ಲೆ

ಭಾನುವಾರ, ಜುಲೈ 24, 2011

ಮುಂಗಾರು

ಮುಂಗಾರು ಮಳೆಯು ಬಂತು
ಮಧುರ ಗಾಳಿ ತಂತು
ಹನಿಯು ಅಂತು ಇಂತೂ
ಭುವಿಗೆ ಸೇರಿ ಹೋಯಿತು


ದಟ್ಟ ಮೋಡ ಬಂತು
ಬೆಳಕಿನಾಟ ತಂತು
ಕಮಲ ಬಿಲ್ಲು ಅಂತು ಇಂತೂ
ತೋರಣ ಕಟ್ಟಿ ಹೋಯಿತು


ಬೆಳಕು ಮೋಡಿ ಬಂತು
ಗಡಸು ದ್ವನಿಯ ತಂತು
ಮಿಂಚು ಅಂತು ಇಂತೂ
ಚಿತ್ತಾರ ಬಿಡಿಸಿ ಹೋಯಿತು


ಗಡಸು ನಿದಿರೆ ಬಂತು
ನಲ್ಲೆಯ ಕನಸು ತಂತು
ಪ್ರೀತಿ ಅಂತು ಇಂತೂ
ಸುರಿಸಿ ನಗಿಸಿ ಹೋಯಿತು


ನಲ್ಲೆಯ ಸಂದೇಶ ಬಂತು
ನವಿರಾದ ಉತ್ಸಾಹ ತಂತು
ಹೃದಯ ಅಂತು ಇಂತೂ
ಜಾರಿ ಹಾರಿ ಹೋಯಿತು

ಗುರುವಾರ, ಜುಲೈ 7, 2011

ಬಂಧನ

ಯಾವ ಪ್ರೀತಿಯು ಎಳೆಯಿತಿಂದು
ಮನಸು ಹಗುರವಾಗಿದೆ
ಯಾವ ಉಸಿರಲಿ ಉಸಿರು ಮಿಂದು
ಕನಸು ಸುಮಧುರವಾಗಿದೆ .....ಪ

ಹಸಿರ ತೋರಣ ಮಳೆಯ ಸಿಂಚನ
ವನದ ನಡುವೆ ಅಭಿನಂದನ
ತಿರುಗಿ ತಿರುಗಿ ಕುಳಿತ ಕಲ್ಲಿನ
ಮೇಲೆ ಕೆತ್ತಿದೆ ಹೃದಯ ಚಿತ್ರಣ

ಮಂಜು ಮುಸುಕಿದ ಬೆಟ್ಟ ದಲ್ಲಿನ
ತಂಪು ಗಾಳಿಯ ಸ್ಪಂದನ
ನವಿರೆಳುತಿಹುದು ಮೈ ಮನ
ತುದಿಯಲ್ಲಿ ಬೆಚ್ಚನೆ ಅಲಿಂಗನಾ


ತುಂಬಿ ಹರಿಯುವ ನದಿಯ ಅಂಚಿನ
ಮೇಲೆ ತೇಲುವ ಹಡಗಿನಾ
ಬಿಂಬ ನೋಡುತ ಹಗಲುಗನಸಿನ
ಲೋಕದಲ್ಲಿ ಬಾಹು ಬಂಧನಾ

ಕನಸು ನನಸಿನ ನಡುವೆ ಜೀವನ
ಹಸಿರು ತುಂಬಿದ ಚೇತನ
ಉಲ್ಲಾಸ ತಂದಿದೆ ವಿನೂತನ
ನಿನ್ನ ಒಲವಿನ ಚುಂಬನಾ

ಭಾನುವಾರ, ಜುಲೈ 3, 2011

ಸುಳಿಯಲ್ಲಿ

ಏನಾದರೂ ಸಾಧಿಸು
ಮೊದಲು ಜೀವನದಲ್ಲಿ
ಅದಕಾಗಿ ಅನುದಿನವು
ಶ್ರಮ ವಹಿಸು ಕಲಿಕೆಯಲ್ಲಿ

ನಂಬದಿರು ಮುಂದೆ ನಟಿಸಿ
ಹಿಂದೆ ಕೆಡಕು ಬಯಸುವರಿಲ್ಲಿ
ಮೊದಲು ನೀ ಸದೃಢನಾಗು
ನಿಲುಕದ ಆ ಗುರಿ ತಲುಪುವಲ್ಲಿ

ಮುದುಡಿ ಮರೆ ಮಚುವುದು
ಮನಸು ಯವ್ವನದ ಆಸೆಗಳಲ್ಲಿ
ಕುರುಡಾಗುವುದು ಕಣ್ಣು
ಮೋಹದ ಆವರಿಸಿದ ಬಲೆಯಲ್ಲಿ

ಪ್ರೀತಿಯ ಹಿಂದೆ ಹೋಗಿ
ಬೀಳದಿರು ಸುಳಿ ಸುಳಿಯಲ್ಲಿ
ಅರಿಯದೆ ಅದರಾಳ
ಹೋಗದಿರು ಅದರ ಬಳಿಯಲ್ಲಿ

ಬುಧವಾರ, ಜೂನ್ 1, 2011

ಯಾವುದೋ

ಯಾವುದೊ ಉರಲಿ ಹುಟ್ಟಿ
ಓದುಲು ಉರು ಉರು ಸುತ್ತಿ
ಕೆಲಸ ಹುಡುಕಿ ಸೇರಿದುದು ಯಾವ ಉರಿಗೋ

ಯಾವುದೊ ಮನೆಯಲ್ಲಿ ಬೆಳೆದು
ಸಮಯ ಪೂರ್ತಿ ಗೆಳೆತನದಲ್ಲಿ ಕಳೆದು
ಪ್ರೀತಿ ಅರಸಿ ನಡೆದುದು ಯಾವ ಹೂ ತೋಟಕೋ

ಯಾವುದೋ ಕನಸನ್ನು ಕಂಡು
ಮತ್ಯವದೋ ಹಸಿ ಆಸೆಗಳು ಬಂದು
ನನಸಿಗಾಗಿ ಪರಿತಪಿಸಿದ್ದು ಯಾವ ತ್ರುಷೆಗೋ

ಯಾವುದೊ ಮನಸನ್ನು ಹುಡುಕಿ
ಹೃದಯ ಪೂರ್ತಿ ಮೋಹವ ತುಂಬಿ
ಜೊತೆಗೆ ಜೀವನ ನಡೆಸುವುದು ಯಾವ ಸಾಧನೆಗೋ

ಯಾವುದೂ ಜಂಜಾಟ ವಿಲ್ಲದೆ
ಕುಣಿದು ನಲಿದು ಕಳೆದ ಬಾಲ್ಯವು
ಮತ್ತೆ ಸಿಗದೇ ಹೋದದು ಯಾವ ಕಾರಣಕೋ

ಶುಕ್ರವಾರ, ಮೇ 27, 2011

ಸುರಿಸದಿರು

ಕಣ್ಣೇರು ಸುರಿಸದಿರು
ವರೆಸುತ ಸೆರಗೊಳಗೆ
ನಿಜವನು ಅರಿಯದ
ಇನಿಯ ಮರಗುವನು ಎಂದು

ನೋಡದಿರು ಆಕಾಶ
ಬೀಳದು ಉಲ್ಕಾ ನಕ್ಷತ್ರ
ಜೀವದಾ ಗೆಳೆಯನ
ಮನಸು ಹೊರಲಾಡುತಿದೆ ಎಂದು

ದೂರ ಇರುವ ತವರ
ನೆನೆದು ಕೊರಗದಿರು
ದುಖ ಹಂಚಿಕೊಳಲು
ನನ್ನವರು ಯಾರು ಜೊತೆ ಇಲ್ಲವೆಂದು

ದೂರದಿರು ದೇವರ
ಬದಲಾಗದು ಹಣೆಬರಹ
ಕಂಡು ಕನಸುಗಳೆಲ್ಲ
ನನಸಾಗಲಿಲ್ಲ ವೆಂದು

ಒಪ್ಪಿಕೊ ನಿಜವನ್ನು
ಮಾಡದ ತಪ್ಪನ್ನು ಬಿಟ್ಟು
ಬಿಡದಿರು ಛಲವ
ಸಾಧಿಸು ನೀ ಸರಿ ಎಂದು

ಮಂಗಳವಾರ, ಏಪ್ರಿಲ್ 5, 2011

ಹೊಸತು

ಋತು ಋತುಗಳು ಉರಳಿ ಉರಳಿ
ಯುಗಾದಿ ಮರಳಿ ಬಂದಿದೆ
ತಿಳೀ ಹಸಿರ ನಸುಗಂಪು ಹರಡಿ
ಉಲ್ಲಾಸ ಹರುಷ ತಂದಿದೆ

ತಳಿರ ರಂಗು ಮನಸಿಗಿಂದು
ಮರು ಯೌವ್ವನ ಕೊಡುತಿದೆ
ಎಳೆಯ ಎಲೆ ಅರಳಿ ಹೊರಳಿ
ಸೊಗಸಾದ ಕಂಪು ಬೀರಿದೆ

ಹಚ್ಚ ಹಸಿರ ಟೊಂಗೆಗಳಲ್ಲಿ
ಬೇವಿನ ಹೂವು ಮಿನುಗುತಿದೆ
ಹಳೆಯ ಬಾಗಿಲಿಗೆ ಕಳೆ ಕಟ್ಟಿ
ಹೊಸಾ ತೋರಣ ನಗುತಿದೆ

ಹೊಸತು ಬಟ್ಟೆ ಹಾಕಿಕೊಂಡ
ಚಿಣ್ಣರು ಕುಣಿದು ನಲಿದಾಡುತಿವೆ
ಹೂರಣದ ಭೂರಿ ಭೋಜನಕ್ಕೆಂದು
ನೆಂಟರ ದಂಡು ದಂಡು ಬರುತಿದೆ

ಹೊಸ ವರುಷ ಬಂದಿತೆಂದು
ನಮ್ಮೆಲ್ಲರ ನಾಡಿ ಮಿಡಿಯುತಿದೆ
ಬೇವು ಬೆಲ್ಲ ಬೆರೆತುಕೊಂಡು
ಜೀವನದ ನಿತ್ಯ ಸತ್ಯ ಸಾರುತಿದೆ

ಶನಿವಾರ, ಏಪ್ರಿಲ್ 2, 2011

ಓಡದಿರು ಮನವೇ

ಓಡದಿರು ಮನವೇ
ರಹದಾರಿ ಇದೆಯಂದು
ಅಡ್ಡಿ ಆತಂಕಗಳು
ವೇಗ ಹೆಚ್ಚಿಸಬಹುದು

ಕುಳಿತು ಯೋಚಿಸು ನೀ
ಸಮಯ ಮೀರುವ ಮುನ್ನ
ಕ್ರಮಿಸುವಾ ದಾರಿಯು
ಕಡಿಮೆ ಯಾಗಬಹುದು

ಬೆಲೆಯನ್ನು ತೆರದಿರು
ಕ್ಷಣದ ಕೋಪದ ಭರದಲ್ಲಿ
ಕೋಟಿ ಕೊಟ್ಟರೂ ಬರದ
ಮಾನ ಹೋಗಬಹುದು

ಕೆಡಕು ಹೇಳುವರಿಹರು
ಒಡಕು ಮಾಡಲು ಮನೆಗೆ
ಒಳಿತು ಬಯಸದವರೂ
ಒಡನಾಡಿಗಳಾಗಬಹುದು

ತಂಪೆರೆದು ಮನಸಿಗೆ
ಬುದ್ದಿ ಕಡಿವಾಣ ಹಾಕುವುದು
ಕೇಳು ಹೃದಯದ ಸವಿ ಮಾತು
ಜೀವನ ಸೋಗಸಾಗಬಹುದು

ಭಾನುವಾರ, ಮಾರ್ಚ್ 20, 2011

ನಿನ್ನೊಲವ

ತೋರಿದ ಹುಸಿಕೂಪ,
ಬೀರಿದ ಮುಗುಳುನಗೆ,
ನಿಡಿದಾ ಆ ಸಲುಗೆ,
ನಾಟಿ ನನ್ನೆದೆಯು ,
ನಿನ್ನೊಲವ ಬಯಸಿದೆ ನನಗರಿಯದೆ.


ಆರೈಕೆಯ ನುಡಿಯು
ತೋರಿಕೆ ಇಲ್ಲದ ಪ್ರೀತಿ
ತೆರೆದು ಆಸರೆಯ ಬಾಹು
ವರಸಿದ ಆ ಕಣ್ಣಿರು
ನಿನ್ನೊಲವ ಬಯಸಿದೆ ನನಗರಿಯದೆ.

ನೀರೆರೆದು ಗೆಳೆತನಕೆ
ಸೇರಿದೆ ಹೃದಯವನು
ಇಣುಕಿದಾ ಕುಡಿನೋಟ
ಮರೆಮಾಚಿದಾ ಮನಸು
ನಿನ್ನೊಲವ ಬಯಸಿದೆ ನನಗರಿಯದೆ.


ಕಾಡದಿರು ನನ್ನನು
ಇರಲಾರೆ ಬಿಟ್ಟು ನಿನ್ನನು
ಸುಳಿಯೊಳಗೆ ಸಿಕ್ಕು
ಬಸವಳಿದಾ ಮನಸು
ನಿನ್ನೊಲವ ಬಯಸಿದೆ ನನಗರಿಯದೆ

ಶನಿವಾರ, ಮಾರ್ಚ್ 19, 2011

ಚಂದ್ರ

ತಿರುಗಿ ತಿರುಗಿ ಚಂದ್ರ
ಭುವಿಗೆ ಹತ್ತಿರ ಬಂದ
ನೀಲಿ ಆಕಾಶದಲ್ಲಿ
ಯಾರು ಹಚ್ಚಿದರು ಈ ಲಾಂದ್ರ || ಪ ||

ಕಾಲ ಕಲವ ಸರಿಸಿ
ದೇಶ ದೇಶವ ಸುತ್ತಿ
ಸುಸ್ತುಗಿ ಬಂದ್ಯಾ ನೀ
ನಮ್ಮುರ ಆಕಾಶ ಅರಸಿ || ೨ ||

ಮುದ್ದು ಮಕ್ಕಳಿಗೆ
ಪೆದ್ದು ಮಾಮಾ ನಾಗಿ
ನಸು ನಗುತ ನಭದಲ್ಲಿ
ಬಂದ್ಯಾ ದೊಡ್ಡ ಮೊಗದವನಾಗಿ ||2 ||

ಸಮುದ್ರ ರಾಜನ ಮಗಳ
ಮೋಹಕ್ಕೆ ಮರುಳಾಗಿ
ಉಕ್ಕಿ ಏರುವ ಅಲೆಗಳ ಮುತ್ತಿಕ್ಕಲು
ಬಂದ್ಯಾ ಸೊಗಸಾದ ಬೆಳಕಾಗಿ ||3|

ಮಂಗಳವಾರ, ಫೆಬ್ರವರಿ 15, 2011

ನಮ್ಮ ಪ್ರೀತಿಗಾಗಿ

ನಿನ್ನ ಪ್ರೀತಿಗಾಗಿ ಪ್ರೀತಿ
ಕಾಯುತಿದೆ ಇಂದು ಪ್ರಿಯೆ
ನಿನಗಾಗಿ ನಮ್ಮ ಪ್ರೀತಿಗಾಗಿ

ನೀ ಅರಳಿಸು ಮೊಗವ
ದುಂಡು ಮಲ್ಲಿಗೆ ಹೂವಂತೆ
ನನಗಾಗಿ ನಮ್ಮ ಪ್ರೀತಿಗಾಗಿ

ನೀ ಸುರಿಸಿ ಮೋಹವ
ಪ್ರೀತಿಯ ಕನಸು ಕಾಣುವೆ
ನಿನಗಾಗಿ ನಮ್ಮ ಪ್ರೀತಿಗಾಗಿ

ನೀ ದೂರ ಇದ್ದರೇನಂತೆ
ಹೃದಯ ಮಿಡಿಯುವುದು
ನನಗಾಗಿ ನಮ್ಮ ಪ್ರೀತಿಗಾಗಿ

ನೀ ಹತ್ತಿರ ಇದ್ದಾರೆ ಸಾಕಂತೆ
ನನ್ನ ಮನಸ್ಸು ತುಡಿಯುವುದು
ನಿನಗಾಗಿ ನಮ್ಮ ಪ್ರೀತಿಗಾಗಿ

ನೀ ಸುಮ್ಮನಿದರೆನಂತೆ
ಸೊಗಸಿನ ನೋಟ ಸಾರುತಿದೆ
ನನಗಾಗಿ ನಮ್ಮ ಪ್ರೀತಿಗಾಗಿ

ನೀ ಹಿಡಿದ ಕೆಂಪು ಗುಲಾಬಿ
ಒಲವಿನ ಪಾಠ ಹೇಳುತಿದೆ
ನನಗಾಗಿ ನಮ್ಮ ಪ್ರೀತಿಗಾಗಿ

ಈ ಪ್ರೇಮಿಗಳ ದಿನದಂದು
ಹಗಲಿರಿಳು ಮುದ್ದಿಸು ಪ್ರಿಯೆ
ನಮಗಾಗಿ ನಮ್ಮ ಪ್ರೀತಿಗಾಗಿ

ಶನಿವಾರ, ಜನವರಿ 22, 2011

ಸುಪ್ರಭಾತ


ಏಳು ಎನ್ನಯ ಮಡದಿ ಬಿನ್ನಾಣದ ಬೆಡಗಿ
ಏಳು ಜಂಬದ ಹುಡುಗಿ ನೀ ಭಾರಿ ಧಗಡಿ
ಕುಂಭಕರ್ಣನ ತಂಗಿ ನೀ ಬೇಗನೆ ಏಳು
ಏಳು ಸಮಯ ಮೀರಿದೆ ಚಲುವೆ ಬೆಳಗಾಯಿತು

ಉದಯಿಸಿದ ಸೂರ್ಯ ತಲೆ ಮೇಲೆ ಬಂದಾಯಿತು
ಮಂಜು ಸರಿದು ಭಿವಿಯಲ್ಲಿ ಬಿಸಿಲು ಹೆಚ್ಚಾಯಿತು
ಹಕ್ಕಿಗಳು ಕಾಳು ಹುಡುಕಲು ಹೋಗಯಿತು ಏಳು
ಏಳು ನನ್ನಯ ಒಲವೆ ಬೆಳಗಾಯಿತು

ಮನೆಯನೆಲ್ಲ ಸಾರಿಸಿ ವರಸಿ ರಂಗೋಲಿ ಹಾಕಯಿತು
ಹಾಲು ತರಕಾರಿ ತಂದು ರುಚಿ ಅಡುಗೆ ಮಾಡಾಯಿತು
ಮಕ್ಕಳಿಗೆ ಉಣಬಡಿಸಿ ಶಾಲೆಗೇ ಕಳಸಾಯಿತು ಏಳು
ಏಳು ಮುದ್ದು ಸೋಮಾರಿ ಮಡದಿ ಬೆಳಗಾಯಿತು ....

ಬಿಸಿನೀರು ಕಾಸಿ ತನ್ನಿರಿಗೆ ಬೆರಸಿ ತೋಡಾಯಿತು
ಒಗೆದ ವಸ್ತ್ರಗಳ ಸ್ನಾನದ ಮನೆಯಲ್ಲಿ ಇರಿಸಾಯಿತು
ಸಾಬೂನು ಶಿಗೆಕಾಯಿ ಬಟ್ಟಲಲ್ಲಿ ಇಟ್ಟಾಯಿತು ಏಳು
ಏಳು ಬೇಗ ಶುಚಿಯಾಗು ಬೆಡಗಿ ಬೆಳಗಾಯಿತು

ಬುಧವಾರ, ಜನವರಿ 12, 2011

ಮಧುಚಂದ್ರ


ಮೊದ ಮೊದಲು ನಾವಿಬ್ಬರು ಜೊತೆಗಿರಲು ಒಟ್ಟಿಗೆ ..
ಮಧುಚಂದ್ರಕೆ ಹೋದೆವು ಹಚ್ಚ ಹಸಿರಿನ ಪಚ್ಚಿಮ ಘಾಟಿಗೆ

ಹೆಜ್ಜೆ ಹಾಕಿದೆವು ಮಂಜು ಮುಸುಕಿದ ಸೋಂದ ಕಾನನಕೆ
ಅ ಪ್ರಶಾಂತ ಕಾಡಿನ ತಪೋವನದಲಿ ಗುರುಗಳ ದರ್ಶನಕೆ

ಅಡಿಕೆ ತೆಂಗು ಬಾಳೆ ಮೆಣಸು ಏಲಕ್ಕಿ ಬೆಳೆವ ತೋಟಕೆ
ಹೋಗಿ ನಲಿದೆವು ಮುತ್ಸಂಜೆಯ ಆ ಚಳಿಯು ಅಲ್ಹಾದಕೆ

ಬಳಕುತ ಹರಿಯುತಿತ್ತು ಶಾಲ್ಮಲಿ ಹಸಿರವನದ ಮಧ್ಯಕೆ
ಅ ಸೊಗಸು ನೋಡುತ ಮೈ ಮನ ಮರೆತೆವು ನದಿಅಂಚಿಗೆ

ಹೊಸವರ್ಷ ಸ್ವಾಗತಿಸಲು ತೆರಳಿದೆವು ಮಲ್ಪೆ ಸಮುದ್ರಕೆ
ತಿಳಿ ಹಾಲಂತೆ ತಂಗಾಳಿ ಸಹಿತ ಅಲೆ ಮುತ್ತಿಕುತ್ತಿತು ಕಾಲಿಗೆ

ಪ್ರಭಂಜನ ಬಾಲ್ಯದ ಮಹಿಮೆ ಕಾಣಲು ಹೋದೆವು ಪಾಜಕಾಕ್ಕೆ
ಕಡಗೋಲು ಪಿಡಿದ ಕೃಷ್ಣನ ದರ್ಶನವಾಯಿತು ಪ್ರಜ್ಞ ಜೋತೆಗೆ

ಮಲಗುವ ಮಂಚದ ವಾಹನದಲಿ ಪಯಣಿಸಿದೆವು ಊರಿಗೆ
ಬೆಳಗಾಗುವುದರೊಳಗೆ ಮಧು ಯಾತ್ರೆ ಮುಗಿಸಿ ಸೇರಿಸೆವು ಮನೆಗೆ

ಚಂದಿರನ ಬೆಳದಿಂಗಲಿ ಜೇನು ಹುಡುಕಲು ಹೋದೆವು ಕಾಡಿಗೆ
ಸವಿ ಜೇನು ಸವಿದು ಮರಳಿ ಬಂದೆವು ನಗುತ ನಾಡಿಗೆ