ಶನಿವಾರ, ಜನವರಿ 22, 2011

ಸುಪ್ರಭಾತ


ಏಳು ಎನ್ನಯ ಮಡದಿ ಬಿನ್ನಾಣದ ಬೆಡಗಿ
ಏಳು ಜಂಬದ ಹುಡುಗಿ ನೀ ಭಾರಿ ಧಗಡಿ
ಕುಂಭಕರ್ಣನ ತಂಗಿ ನೀ ಬೇಗನೆ ಏಳು
ಏಳು ಸಮಯ ಮೀರಿದೆ ಚಲುವೆ ಬೆಳಗಾಯಿತು

ಉದಯಿಸಿದ ಸೂರ್ಯ ತಲೆ ಮೇಲೆ ಬಂದಾಯಿತು
ಮಂಜು ಸರಿದು ಭಿವಿಯಲ್ಲಿ ಬಿಸಿಲು ಹೆಚ್ಚಾಯಿತು
ಹಕ್ಕಿಗಳು ಕಾಳು ಹುಡುಕಲು ಹೋಗಯಿತು ಏಳು
ಏಳು ನನ್ನಯ ಒಲವೆ ಬೆಳಗಾಯಿತು

ಮನೆಯನೆಲ್ಲ ಸಾರಿಸಿ ವರಸಿ ರಂಗೋಲಿ ಹಾಕಯಿತು
ಹಾಲು ತರಕಾರಿ ತಂದು ರುಚಿ ಅಡುಗೆ ಮಾಡಾಯಿತು
ಮಕ್ಕಳಿಗೆ ಉಣಬಡಿಸಿ ಶಾಲೆಗೇ ಕಳಸಾಯಿತು ಏಳು
ಏಳು ಮುದ್ದು ಸೋಮಾರಿ ಮಡದಿ ಬೆಳಗಾಯಿತು ....

ಬಿಸಿನೀರು ಕಾಸಿ ತನ್ನಿರಿಗೆ ಬೆರಸಿ ತೋಡಾಯಿತು
ಒಗೆದ ವಸ್ತ್ರಗಳ ಸ್ನಾನದ ಮನೆಯಲ್ಲಿ ಇರಿಸಾಯಿತು
ಸಾಬೂನು ಶಿಗೆಕಾಯಿ ಬಟ್ಟಲಲ್ಲಿ ಇಟ್ಟಾಯಿತು ಏಳು
ಏಳು ಬೇಗ ಶುಚಿಯಾಗು ಬೆಡಗಿ ಬೆಳಗಾಯಿತು

1 ಕಾಮೆಂಟ್‌: