ಗುರುವಾರ, ಜುಲೈ 7, 2011

ಬಂಧನ

ಯಾವ ಪ್ರೀತಿಯು ಎಳೆಯಿತಿಂದು
ಮನಸು ಹಗುರವಾಗಿದೆ
ಯಾವ ಉಸಿರಲಿ ಉಸಿರು ಮಿಂದು
ಕನಸು ಸುಮಧುರವಾಗಿದೆ .....ಪ

ಹಸಿರ ತೋರಣ ಮಳೆಯ ಸಿಂಚನ
ವನದ ನಡುವೆ ಅಭಿನಂದನ
ತಿರುಗಿ ತಿರುಗಿ ಕುಳಿತ ಕಲ್ಲಿನ
ಮೇಲೆ ಕೆತ್ತಿದೆ ಹೃದಯ ಚಿತ್ರಣ

ಮಂಜು ಮುಸುಕಿದ ಬೆಟ್ಟ ದಲ್ಲಿನ
ತಂಪು ಗಾಳಿಯ ಸ್ಪಂದನ
ನವಿರೆಳುತಿಹುದು ಮೈ ಮನ
ತುದಿಯಲ್ಲಿ ಬೆಚ್ಚನೆ ಅಲಿಂಗನಾ


ತುಂಬಿ ಹರಿಯುವ ನದಿಯ ಅಂಚಿನ
ಮೇಲೆ ತೇಲುವ ಹಡಗಿನಾ
ಬಿಂಬ ನೋಡುತ ಹಗಲುಗನಸಿನ
ಲೋಕದಲ್ಲಿ ಬಾಹು ಬಂಧನಾ

ಕನಸು ನನಸಿನ ನಡುವೆ ಜೀವನ
ಹಸಿರು ತುಂಬಿದ ಚೇತನ
ಉಲ್ಲಾಸ ತಂದಿದೆ ವಿನೂತನ
ನಿನ್ನ ಒಲವಿನ ಚುಂಬನಾ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ