ನಗುಮೊಗದ ನೋಟಕೆ
ಮನಸೋತೆ ನಾನಿಂತು
ಹಾಡದೆ ಹೇಗೆ ಇರಲಿ ಚಲುವೆ .. .ಪ.
ಬಾಗಿದಾ ಬಿಲ್ಲಿನಂತೆ
ತೀಡಿದ ಆ ಹುಬ್ಬು
ನಗುತಿದೆ ನೋಡಿ ನನ್ನನ್ನು
ಬಿಟ್ಟು ಪ್ರೀತಿಯ ಬಾಣ ಎದೆಗೆ ೧
ನಿನ್ನ ರತ್ನದ ಕಣ್ಣು
ಸೆಳೆಯುತಿದೆ ನನ್ನನ್ನು
ತಿರುಗಿ ನೋಡಿದರೆ
ಮನಸು ನಿನ್ನ ಕಡೆಗೆ 2
ಆ ಚಿತ್ರದಲ್ಲಿ ಬರೆದಂತೆ
ನೀಳವಾದ ನಾಸಿಕವು
ಬಾ ಎನ್ನುತಿದೆ ಮೋಹದ
ಉಸಿರು ಸೇರುವಂತೆ ೩
ಹೊಳೆವ ತುಟಿ ಅಂಚಿನಲ್ಲಿ
ಹವಳಗಳು ಇಟ್ಟಂತೆ
ಅಮೃತದ ಹನಿಯೊಂದು
ಕೂಗಿ ನನ್ನ ಕರೆದಂತೆ ೪
ಅದರ ಸವಿ ಸವಿಯಲು
ಬರಬೇಕು ನೀ ಇರುವಲ್ಲಿಗೆ
ಮೂಡಿದ ಮಲ್ಲಿಗೆಯು ಹೂ
ಅರಳುವ ಮುಂಚೆ 5
ಅರಳಿದ ದುಂಡು ಮಲ್ಲಿಗೆಯ
ಸಿರಿ ಮೊಗವು ಹೊಳೆಯುತಿದೆ
ಕರೆದು ನನ್ನನು ಮೆತ್ತಗೆ ಒಮ್ಮೆ
ಮುತ್ತಿಕ್ಕಿ ತಬ್ಬಿಕೊಳ್ಳುವಂತೆ 6
:- ಪ್ರಭಂಜನ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ